ವೈ-ಫೈ ಪಾಸ್‌ವರ್ಡ್ ಮರೆತಿದ್ದೀರಾ? ಚಿಂತೆಬಿಡಿ, ಈ ರೀತಿ ಮಾಡಿ

ಎಷ್ಟೋ ಬಾರಿ ನಾವು ವೈ-ಫೈಗೆ ಯಾವ ಪಾಸ್‌ವರ್ಡ್ ಅನ್ನು ಹೊಂದಿಸಿದ್ದೇವೆ ಎಂಬುದನ್ನೇ ಮರೆತಿರುತ್ತೇವೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಬಹುದು.

Written by - Yashaswini V | Last Updated : Feb 17, 2023, 10:45 AM IST
  • ಒಮ್ಮೆ ಪಾಸ್‌ವರ್ಡ್ ಸೆಟ್ ಮಾಡಿದ ಬಳಿಕ ನಾವು ಬಳಸುವ ಸಾಧನಗಳಿವೆ ಪದೇ ಪದೇ ಪಾಸ್‌ವರ್ಡ್ ನಮೂದಿಸುವ ಅಗತ್ಯವಿಲ್ಲದ ಕಾರಣ, ವೈ-ಫೈ ಪಾಸ್‌ವರ್ಡ್ ಅನ್ನು ಮರೆತಿರುತ್ತೇವೆ.
  • ಆದರೆ, ಹೊಸ ಫೋನ್ ಅಥವಾ ಸಾಧನವನ್ನು ಖರೀದಿಸುವಾಗ ವೈಫೈ ಪಾಸ್‌ವರ್ಡ್ ಬೇಕಾಗುತ್ತದೆ.
  • ಇದಲ್ಲದೆ, ಮನೆಗೆ ಸ್ನೇಹಿತರು ಅಥವಾ ಸಂಬಂಧಿಕರು ಬಂದಾಗ ವೈ-ಫೈ ಪಾಸ್‌ವರ್ಡ್ ಕೇಳಿದಾಗ ಅಯ್ಯೋ ಪಾಸ್‌ವರ್ಡ್ ಏನಿತ್ತು ಎಂದು ಚಿಂತಿಸುತ್ತೇವೆ.
ವೈ-ಫೈ ಪಾಸ್‌ವರ್ಡ್ ಮರೆತಿದ್ದೀರಾ? ಚಿಂತೆಬಿಡಿ, ಈ ರೀತಿ ಮಾಡಿ  title=
Wi-Fi Password

ಬೆಂಗಳೂರು: ಈ ತಂತ್ರಜ್ಞಾನ ಯುಗದಲ್ಲಿ ವೈ-ಫೈ ಕೂಡ ತುಂಬಾ ಅಗತ್ಯ. ಅದರಲ್ಲೂ, ಈ ಕರೋನಾ ಸಂಕ್ರಾಮಿಕದ ಸಮಯದಲ್ಲಿ ವರ್ಕ್ ಫ್ರಮ್ ಹೋಂ ಮತ್ತು ಆನ್ಲೈನ್ ತರಗತಿಗಳ ಸಂಸ್ಕೃತಿ ಹೆಚ್ಚಾಗಿದ್ದು ಬಹುತೇಕ ಜನ ಇಂಟರ್ನೆಟ್ ಗಾಗಿ ಮನೆಯಲ್ಲಿ ವೈ-ಫೈ ಹಾಕಿಸಿದ್ದಾರೆ. 

ಒಮ್ಮೆ ಪಾಸ್‌ವರ್ಡ್ ಸೆಟ್ ಮಾಡಿದ ಬಳಿಕ ನಾವು ಬಳಸುವ ಸಾಧನಗಳಿವೆ ಪದೇ ಪದೇ ಪಾಸ್‌ವರ್ಡ್ ನಮೂದಿಸುವ ಅಗತ್ಯವಿಲ್ಲದ ಕಾರಣ, ವೈ-ಫೈ ಪಾಸ್‌ವರ್ಡ್ ಅನ್ನು ಮರೆತಿರುತ್ತೇವೆ. ಆದರೆ,  ಹೊಸ ಫೋನ್ ಅಥವಾ ಸಾಧನವನ್ನು ಖರೀದಿಸುವಾಗ ವೈಫೈ ಪಾಸ್‌ವರ್ಡ್ ಬೇಕಾಗುತ್ತದೆ. ಇದಲ್ಲದೆ, ಮನೆಗೆ ಸ್ನೇಹಿತರು ಅಥವಾ ಸಂಬಂಧಿಕರು ಬಂದಾಗ ವೈ-ಫೈ ಪಾಸ್‌ವರ್ಡ್ ಕೇಳಿದಾಗ ಅಯ್ಯೋ ಪಾಸ್‌ವರ್ಡ್ ಏನಿತ್ತು ಎಂದು ಚಿಂತಿಸುತ್ತೇವೆ. ನೀವೂ ಕೂಡ ವೈ-ಫೈ ಪಾಸ್‌ವರ್ಡ್ ಮರೆತಿದ್ದರೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವೈ-ಫೈ ನಿಮ್ಮ ಪಾಸ್‌ವರ್ಡ್ ಅನ್ನು ಮರುಪಡೆಯಬಹುದು. 

ಇದನ್ನೂ ಓದಿ- Valentine's Day Doodle 2023: ನೀರಿನ ಹನಿಗಳ ಮೂಲಕ ಪ್ರೀತಿಯ ಸಂದೇಶ ಸಾರಿದ ಗೂಗಲ್

ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯುವುದು ಹೇಗೆ?
ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಪಿಸಿಯನ್ನು ಬಳಸಿ ನೀವು ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಬಹುದು. 
* ಇದಕ್ಕಾಗಿ ಮೊದಲು ಸ್ಟಾರ್ಟ್  > ನಿಯಂತ್ರಣ ಫಲಕ > ನೆಟ್‌ವರ್ಕ್ ಮತ್ತು ಹಂಚಿಕೆ ಕೇಂದ್ರಕ್ಕೆ ಹೋಗಿ. 
* Windows 8 ಕಂಪ್ಯೂಟರ್‌ನಲ್ಲಿ, ನೀವು Windows Key +C ಅನ್ನು ಟ್ಯಾಪ್ ಮಾಡಬಹುದು, ಹುಡುಕಾಟ ಕ್ಲಿಕ್ ಮಾಡಿ ಮತ್ತು ನೆಟ್‌ವರ್ಕ್ ಮತ್ತು ಹಂಚಿಕೆ ಕೇಂದ್ರವನ್ನು ಹುಡುಕಬಹುದು.
* ಎಡ ಸೈಡ್‌ಬಾರ್‌ನಲ್ಲಿ ಅಡಾಪ್ಟರ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ ಕ್ಲಿಕ್ ಮಾಡಿ.
* ನೀವು ಬಳಸುತ್ತಿರುವ ವೈ-ಫೈ ನೆಟ್‌ವರ್ಕ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
* ವೈರ್‌ಲೆಸ್ ಪ್ರಾಪರ್ಟೀಸ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಕ್ಯುರಿಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ಈಗ ನೀವು Wi-Fi ನೆಟ್ವರ್ಕ್ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಕಾಣಬಹುದು. 
* ಇಲ್ಲಿ  ನೀವು ಕೆಳಗೆ ನೀಡಲಾದ ಚೆಕ್ ಅಕ್ಷರಗಳ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮಗೆ ಪಾಸ್‌ವರ್ಡ್ ಗೋಚರಿಸುತ್ತದೆ. 

ಇದನ್ನೂ ಓದಿ- ಟ್ವಿಟ್ಟರ್ ಗೆ ಹೊಸ ಸಿಇಒ ಪರಿಚಯಿಸಿದ ಎಲೋನ್ ಮಸ್ಕ್ !

ಗಮನಿಸಿ: 
ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯುವ ಮಾರ್ಗವು ವೈ-ಫೈ ಹ್ಯಾಕ್ ಮಾಡಲು ಮಾರ್ಗದರ್ಶಿ ಅಲ್ಲ. ವೈ-ಫೈ ಹ್ಯಾಕ್  ಕಾನೂನುಬಾಹಿರವಾಗಿದ್ದು, ನೀವು ಭಾವಿಸುವುದಕ್ಕಿಂತಲೂ ಹೆಚ್ಚು ಗಂಭೀರ ತೊಂದರೆಗೆ ಸಿಲುಕಿಸಬಹುದು. ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯುವ ಮಾರ್ಗವು ಕೇವಲ ನಿಮ್ಮ ಸ್ವಂತ ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಲು ಮಾತ್ರ ಎಂಬುದನ್ನು ನೆನಪಿನಲ್ಲಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News