ಪೋಲಿಸ್ ಪಾತ್ರ ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ -ಶ್ರದ್ಧಾ ಕಪೂರ್

ಬಾಲಿವುಡ್  ನಟಿ ಶ್ರದ್ಧಾ ಕಪೂರ್ ಈಗ ತಮ್ಮ ಬಹು ನಿರೀಕ್ಷಿತ ಮುಂಬರುವ ಚಲನಚಿತ್ರ 'ಸಾಹೋ' ನ ಪೋಸ್ಟರ್‌ನಲ್ಲಿ ಬಂದೂಕು ಹಿಡಿದುಕೊಂಡು ತನ್ನ ದಿಟ್ಟ ನೋಟದಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ, ಬೋಲ್ಡ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿರುವ ಅವರ ಪೋಸ್ಟರ್ ಈಗ  ಸಾಕಷ್ಟು ಸದ್ದು ಮಾಡಿದೆ.

Last Updated : Jun 15, 2019, 07:46 PM IST
  ಪೋಲಿಸ್ ಪಾತ್ರ ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ -ಶ್ರದ್ಧಾ ಕಪೂರ್ title=

ನವದೆಹಲಿ: ಬಾಲಿವುಡ್  ನಟಿ ಶ್ರದ್ಧಾ ಕಪೂರ್ ಈಗ ತಮ್ಮ ಬಹು ನಿರೀಕ್ಷಿತ ಮುಂಬರುವ ಚಲನಚಿತ್ರ 'ಸಾಹೋ' ನ ಪೋಸ್ಟರ್‌ನಲ್ಲಿ ಬಂದೂಕು ಹಿಡಿದುಕೊಂಡು ತನ್ನ ದಿಟ್ಟ ನೋಟದಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ, ಬೋಲ್ಡ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿರುವ ಅವರ ಪೋಸ್ಟರ್ ಈಗ  ಸಾಕಷ್ಟು ಸದ್ದು ಮಾಡಿದೆ.

ಈಗ ಇದೇ ಮೊದಲ ಬಾರಿಗೆ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಶ್ರದ್ಧಾ ಕಪೂರ್ " “ನಾನು ಮೊದಲ ಬಾರಿಗೆ ಪೋಲೀಸ್ ಪಾತ್ರವನ್ನು ನಿರ್ವಹಿಸಲು ಉತ್ಸುಕನಾಗಿದ್ದೇನೆ. ಇಂದೊಂದು ಮಹತ್ವದ ಪಾತ್ರ . ಪೊಲೀಸರು ದೇಶಕ್ಕಾಗಿ ತ್ಯಾಗ ಮಾಡುತ್ತಾರೆ ಈಗ ಸಿನಿಮಾದಲ್ಲಿ ಅವರನ್ನು ಪ್ರತಿನಿಧಿಸುವುದು ನನಗೆ ಗೌರವವಾಗಿದೆ. "ಎಂದು ಹೇಳಿದ್ದಾರೆ. ಇನ್ನು ಮುಂದುವರೆದು  "ಆದರೆ ಖಂಡಿತವಾಗಿಯೂ ಪೊಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸುವುದು ವಿಶೇಷವಾದದ್ದು ಏಕೆಂದರೆ ನೀವು ದೇಶದ ಅವಿಭಾಜ್ಯ ಭಾಗವನ್ನು ಪ್ರತಿನಿಧಿಸುತ್ತಿದ್ದೀರಿ" ಎಂದು ಹೇಳಿದರು.

ಈ ವರ್ಷ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿರುವ ಶ್ರದ್ದಾ ಕಪೂರ್ ಪೂರ್ಣ ಬ್ಯುಸಿಯಾಗಿರುವ ವೇಳಾ ಪಟ್ಟಿಯನ್ನು ಹೊಂದಿದ್ದಾರೆ. ಇನ್ನೂಂದೆಡೆಗೆ ಸಾಹೋ ಚಿತ್ರದ ನಾಯಕ ಪ್ರಭಾಸ್ ಬಾಹುಬಲಿ ಸರಣಿ ಪಾತ್ರದ ಚಿತ್ರಗಳ ನಂತರ ಇದೆ ಮೊದಲ ಬಾರಿಗೆ ಫುಲ್ ಫ್ಯಾಕ್ ಆಕ್ಷನ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.ಈಗಾಗಲೇ ಈ ಚಿತ್ರ ಟೀಸರ್ ನಿಂದಲೇ ಚಿತ್ರ ರಸಿಕರ ಗಮನ ಸೆಳೆದಿದೆ ಎನ್ನಬಹುದು. ಒಟ್ಟಿನಲ್ಲಿ ಈ ಚಿತ್ರ ಇಬ್ಬರು ನಟಿ ನಟಿಯರಿಗೆ ಬಹು ನಿರೀಕ್ಷಿತ ಚಿತ್ರ ಎಂದು ಹೇಳಬಹುದು.
 

Trending News