Kantara vs Ram Setu : ರಾಮ ಸೇತು ಎದುರು ಕಾಂತಾರ ಶೋ ಸಂಖ್ಯೆ ಹೆಚ್ಚಳ, ಮತ್ತೆ ಮುಗ್ಗರಿಸಿದ ಅಕ್ಷಯ್ ಕುಮಾರ್

Kantara vs Ram Setu : ಕಾಂತಾರ ಚಿತ್ರಕ್ಕೆ ಹೆಚ್ಚುವರಿ ಸ್ಲಾಟ್‌ಗಳನ್ನು ನೀಡುತ್ತಿರುವಾಗ ರಾಮಸೇತು ಮತ್ತು ಥ್ಯಾಂಕ್ ಗಾಡ್‌ ಶೋ ಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೊಸ ವರದಿ ಹೇಳುತ್ತದೆ. 

Written by - Chetana Devarmani | Last Updated : Oct 31, 2022, 08:42 PM IST
  • ರಾಮ ಸೇತು ಎದುರು ಕಾಂತಾರ ಶೋ ಸಂಖ್ಯೆ ಹೆಚ್ಚಳ
  • ಕಾಂತಾರ ಚಿತ್ರಕ್ಕೆ ಹೆಚ್ಚುವರಿ ಸ್ಲಾಟ್‌
  • ಮತ್ತೆ ಮುಗ್ಗರಿಸಿದ ಅಕ್ಷಯ್ ಕುಮಾರ್
Kantara vs Ram Setu : ರಾಮ ಸೇತು ಎದುರು ಕಾಂತಾರ ಶೋ ಸಂಖ್ಯೆ ಹೆಚ್ಚಳ, ಮತ್ತೆ ಮುಗ್ಗರಿಸಿದ ಅಕ್ಷಯ್ ಕುಮಾರ್  title=
ರಾಮ ಸೇತು

Kantara vs Ram Setu : ಕಾಂತಾರ ಚಿತ್ರಕ್ಕೆ ಹೆಚ್ಚುವರಿ ಸ್ಲಾಟ್‌ಗಳನ್ನು ನೀಡುತ್ತಿರುವಾಗ ರಾಮಸೇತು ಮತ್ತು ಥ್ಯಾಂಕ್ ಗಾಡ್‌ ಶೋ ಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೊಸ ವರದಿ ಹೇಳುತ್ತದೆ. ಹೊಸ ವರದಿಯನ್ನು ನಂಬುವುದಾದರೆ, ಥಿಯೇಟರ್ ಮಾಲೀಕರು ರಾಮ್ ಸೇತು ಮತ್ತು ಥ್ಯಾಂಕ್ ಗಾಡ್ ಪ್ಲೇ ಮಾಡುವ ಸ್ಕ್ರೀನ್‌ಗಳನ್ನು ಕಾಂತಾರ ಹಿಂದಿ ಆವೃತ್ತಿಯ ಶೋ ಗೆ ನೀಡುತ್ತಿದ್ದಾರೆ. ಮೂರು ವಾರಗಳ ಹಿಂದೆ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆಯಾದ ಕನ್ನಡ ಚಿತ್ರ ಹಿಂದಿ ವಲಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತರುತ್ತಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್‌ ಬಗ್ಗೆ ಅನುಷ್ಕಾ ಅಸಮಾಧಾನ

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಕಾಂತಾರ ಟಿಕೆಟ್ ದರವು ರಾಮಸೇತು ಮತ್ತು ಥ್ಯಾಂಕ್ ಗಾಡ್‌ಗಿಂತ 40 ಪ್ರತಿಶತ ಕಡಿಮೆಯಾಗಿದೆ ಮತ್ತು ಇದು ಚಿತ್ರದ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದಿನದಿಂದ ದಿನಕ್ಕೆ ವ್ಯಾಪಾರದ ಏರುಗತಿಯನ್ನು ಕಂಡ ಚಿತ್ರಮಂದಿರಗಳ ಮಾಲೀಕರು ಮೌನವಾಗಿ ರಾಮ್ ಸೇತು ಮತ್ತು ಥ್ಯಾಂಕ್ ಗಾಡ್‌ ಎರಡರ ಪ್ರದರ್ಶನಗಳನ್ನು ಕಡಿಮೆ ಮಾಡುವ ಮೂಲಕ ಕಾಂತಾರ ಪ್ರದರ್ಶನವನ್ನು ಹೆಚ್ಚಿಸಲು ಪ್ರಾರಂಭಿಸಿದ್ದಾರೆ ಎಂದು ವರದಿ ಹೇಳಿದೆ.

ಎರಡೂ ಚಿತ್ರಗಳ ಪ್ರದರ್ಶನಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಕಾಂತಾರಕ್ಕೆ ಹೆಚ್ಚುವರಿ ಶೋ ಗಳನ್ನು ನಿಗದಿಪಡಿಸಲಾಗಿದೆ ಎಂದು ವರದಿ ಹೇಳಿದೆ. ಕಾಂತಾರ ಚಿತ್ರವನ್ನು ಪ್ರೇಕ್ಷಕರು ಆನಂದಿಸುತ್ತಿದ್ದಾರೆ ಮಾತ್ರವಲ್ಲದೆ ಹಲವಾರು ತಾರೆಗಳು ಉತ್ತಮ ವಿಮರ್ಶೆಗಳನ್ನು ಸಹ ನೀಡಿದ್ದಾರೆ. 

ಇದನ್ನೂ ಓದಿ : ಮಂಸೋರೆ ನಿರ್ದೇಶನದ ‘19.20.21’ ತೆರೆಗೆ ಬರಲು ಸಜ್ಜು.. ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News