ಬೆಂಗಳೂರು: ಬಹು ನಿರೀಕ್ಷಿತ 'ದಿ ವಿಲನ್' ಸಿನಿಮಾದ ನಿರ್ದೇಶಕ ಜೋಗಿ ಪ್ರೇಮ್ ಮಲ್ಟಿಫ್ಲೆಕ್ಸ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಟಿಪೆಕ್ಸ್ಗಳು ಕನ್ನಡ ಸಿನಿಮಾಗಳ ಪ್ರದರ್ಶನಗಳ ಗಳಿಕೆಯಲ್ಲಿ ಪಾಲುಕೊಡುವಾಗ ತಾರತಮ್ಯ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲ್ಟಿಫ್ಲೆಕ್ಸ್ಗಳ ವಿರುದ್ದ ಸರಣಿ ಟ್ವೀಟ್ ಮಾಡಿರುವ ನಿರ್ದೇಶಕ ಪ್ರೇಮ್, ಚಿತ್ರದ ಪ್ರದರ್ಶನದ ಪರ್ಸೆಂಟೇಜ್ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್‌ಗಳ(PVR, Cinipolis, inox) ಮಹಾಮೋಸಕ್ಕೆ ನನ್ನ ಧಿಕ್ಕಾರ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಟಿಫ್ಲಕ್ಸ್ ಗಳಲ್ಲಿ ಎಲ್ಲಾ ಭಾಷೆಯ ಸಿನಿಮಾಗಳೂ ಬಿಡುಗಡೆಯಾಗುತ್ತವೆ. ಉಳಿದೆಲ್ಲ ಭಾಷೆಯ ಚಿತ್ರಗಳ ನಿರ್ಮಾಪಕರಿಗೆ ಶೇ.60ರಷ್ಟು ಪಾಲು ಕೊಡುತ್ತವೆ. ಆದರೆ, ಕನ್ನಡ ಸಿನಿಮಾದವರಿಗೆ ಕೇವಲ ಶೇ.50 ನೀಡುತ್ತಿವೆ. ಇದರಿಂದ ತುಂಬ ಅನ್ಯಾಯವಾಗುತ್ತಿದೆ. ನಾವು ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರುತ್ತೇವೆ. ಇವರು 15 ದಿನ ಪ್ರದರ್ಶನ ಮಾಡುತ್ತಾರೆ. ಅಷ್ಟಕ್ಕೇ 50-50 ಪರ್ಸೆಂಟ್ ಎನ್ನುತ್ತಾರೆ. ಇದು ಎಷ್ಟು ಸರಿ? ಈ ಬಗ್ಗೆ ಕನ್ನಡ ಚಲನಚಿತ್ರರಂಗದವರು, ವೀಕ್ಷಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಚಿತ್ರದ ಪ್ರದರ್ಶನದ ಪರ್ಸೆಂಟೇಜ್ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್‌ಗಳ(PVR, Cinipolis, inox) ಮಹಾಮೋಸಕ್ಕೆ ನನ್ನ ಧಿಕ್ಕಾರ. ವಾಣಿಜ್ಯಮಂಡಳಿಗೆ ಮನವಿ ಸಲ್ಲಿಸಿದ್ರು ಪ್ರಯೋಜನವಾಗ್ಲಿಲ್ಲ. ಉದ್ಯಮದ ಒಳಿತಿಗಾಗಿ ಮಂಡಳಿ ಇರುವುದೇ ಆದರೆ ದಯವಿಟ್ಟು, ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಿ. pic.twitter.com/eZTKlMo3LY
— PREM❣️S (@directorprems) October 10, 2018
ಅ.18ರಂದು 'ದಿ ವಿಲನ್' ಚಲನಚಿತ್ರ ಬಿಡುಗಡೆಯಾಗುತ್ತಿದ್ದು ಆ ಸಿನಿಮಾಕ್ಕೂ ಕೂಡ ಶೇ.50ರಷ್ಟು ಪಾಲು ನೀಡಲು ಮಲ್ಟಿಫ್ಲೆಕ್ಸ್ಗಳು ಮುಂದಾಗಿರುವ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ಪ್ರೇಮ್, ಚಿತ್ರದ ಪ್ರದರ್ಶನದ ಪರ್ಸೆಂಟೇಜ್ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್‌ಗಳ ಮಹಾಮೋಸಕ್ಕೆ ನನ್ನ ಧಿಕ್ಕಾರ. ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ರು ಪ್ರಯೋಜನವಾಗ್ಲಿಲ್ಲ. ಉದ್ಯಮದ ಒಳಿತಿಗಾಗಿ ಮಂಡಳಿ ಇರಲಿ, ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಿ ಎಂದು ಕೂಡ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.