close

News WrapGet Handpicked Stories from our editors directly to your mailbox

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಚೋಪ್ರಾರ ಈ ವಿಡಿಯೋ ಸಖತ್ ವೈರಲ್

ಪ್ರಿಯಾಂಕಾ ಚೋಪ್ರಾ ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Updated: Oct 21, 2019 , 10:07 AM IST
ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಚೋಪ್ರಾರ ಈ ವಿಡಿಯೋ ಸಖತ್ ವೈರಲ್
Photo Courtesy: Instagram@priyankachopra

ನವದೆಹಲಿ: ಬಾಲಿವುಡ್‌ನಿಂದ ಹಾಲಿವುಡ್‌ಗೆ ಕಾಲಿಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರ ಕೆಲವು ಚಿತ್ರಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಚಿತ್ರಗಳಲ್ಲಿ ಪ್ರಿಯಾಂಕಾ ಪತಿ ಅಮೆರಿಕದ ಪಾಪ್ ಗಾಯಕ ನಿಕ್ ಜೊನಸ್ ಕೂಡ ಪ್ರಿಯಾಂಕಾ ಅವರೊಂದಿಗೆ ಕಾಣಿಸಿಕೊಂಡಿದ್ದರು.

ವಾಸ್ತವವಾಗಿ, ಈ ಚಿತ್ರಗಳು ಕರ್ವಾ ಚೌತ್ ಆಚರಣೆಯದಾಗಿತ್ತು. ಇದೀಗ ಪ್ರಿಯಾಂಕಾ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಅವರು ಹಂಚಿಕೊಂಡಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಇದುವರೆಗೆ 82 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವೈರಲ್ ವೀಡಿಯೊದಲ್ಲಿ, ಪ್ರಿಯಾಂಕಾ ಸಣ್ಣ ಹುಡುಗಿಯ ಜೊತೆ ನೀರಿನಲ್ಲಿ ಮೋಜು ಮಾಡುತ್ತಿರುವುದು ಕಂಡುಬರುತ್ತದೆ. ಪ್ರಿಯಾಂಕಾ ಅವರ ಈ ಶೈಲಿಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರು ಈ ವೀಡಿಯೊವನ್ನು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಈ ವೀಡಿಯೊವನ್ನು ವೀಕ್ಷಿಸಿ...

 
 
 
 

 
 
 
 
 
 
 
 
 

We’re so cute ! @sky.krishna ❤️ #positiveaffirmations #blessednotstressed #girllove 📸 @divya_jyoti

A post shared by Priyanka Chopra Jonas (@priyankachopra) on

ಇತ್ತೀಚೆಗೆ ಪ್ರಿಯಾಂಕಾ ಫರ್ಹಾನ್ ಅಖ್ತರ್ ಅವರೊಂದಿಗೆ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಜೈರಾ ವಾಸಿಮ್ ಮತ್ತು ರೋಹಿತ್ ಸಾರಾಫ್ ಮುಖ್ಯ ಪಾತ್ರಗಳಲ್ಲಿದ್ದರು. ಈ ಚಿತ್ರದ ಕಥೆ ತುಂಬಾ ಭಾವನಾತ್ಮಕವಾಗಿತ್ತು, ಆದರೆ ಗಲ್ಲಾಪೆಟ್ಟಿಗೆಯಲ್ಲಿ ಇದು ನಿರೀಕ್ಷೆಯ ಮಟ್ಟದಲ್ಲಿ ಸದ್ದು ಮಾಡಲಿಲ್ಲ. 'ಸ್ಕೈ ಈಸ್ ಪಿಂಕ್' ಪ್ರೇರಕ ಭಾಷಣಕಾರ ಆಯೆಷಾ ಚೌಧರಿ ಅವರ ಜೀವನವನ್ನು ಆಧರಿಸಿದ ಚಿತ್ರವಾಗಿದ್ದು, ಆಯೆಷಾ ಪಲ್ಮನರಿ ಫೈಬ್ರೋಸಿಸ್ ನಿಂದ ಬಳಲುತ್ತಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಮತ್ತು ಫರ್ಹಾನ್ ಆಯೆಷಾ ಅವರ ಪೋಷಕರಾಗಿ ನಟಿಸಿದ್ದಾರೆ. ಪ್ರಿಯಾಂಕಾ ಅದಿತಿ ಚೌಧರಿ ಮತ್ತು ಫರ್ಹಾನ್ ಅಖ್ತರ್ ನಿರೇನ್ ಚೌಧರಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಜೈರಾ ಆಯೆಷಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.