ಕರುನಾಡ ಚಕ್ರವತಿ ಮನೆಗೆ ಆಗಮಿಸಿದ ಟಾಲಿವುಡ್‌ ಸ್ಟಾರ್‌: ನಾನಿಯ ʻಹಾಯ್ ನಾನಾʼ ಚಿತ್ರಕ್ಕೆ ಶಿವಣ್ಣನ ವಿಶಸ್!

Nani Meets Shivanna: ತೆಲುಗು ಸ್ಟಾರ್‌ ನಟ ನಾನಿ ಇಂದು ಬೆಳಗ್ಗೆ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ಮನೆಗೆ ಆಗಮಿಸಿದ್ದಾರೆ. ಹಾಗಾದ್ರೆ ಈ ಟಾಲಿವುಡ್‌ ನಟ ಶಿವಣ್ಣನ ಭೇಟಿ ಮಾಡಿದ್ದಾದರೂ ಯಾಕೆ?  ನಾನಿ ಬೆಂಗಳೂರಿಗೆ ಬಂದಿರುವ ಸಮಾಚಾರವಾದರು ಏನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Dec 5, 2023, 12:49 PM IST
  • ತೆಲುಗು ಸ್ಟಾರ್‌ ನಟ ನಾನಿ ತಮ್ಮ ʻಹಾಯ್ ನಾನಾʼ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ.
  • ಇಂದು ಬೆಳಗ್ಗೆ ನಾನಿ ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ರವರ ನಾಗವಾರ ನಿವಾಸಕ್ಕೆ ಆಗಮಿಸಿದ್ದಾರೆ.
  • ನಾನಿ ಅಭಿನಯನ ʻಹಾಯ್‌ ನಾನಾʼ‌ ಚಿತ್ರ ಇದೇ ಡಿಸೆಂಬರ್‌ 7ರಂದು ಬಿಡುಗಡೆಯಾಗಲಿದೆ.
ಕರುನಾಡ ಚಕ್ರವತಿ ಮನೆಗೆ ಆಗಮಿಸಿದ ಟಾಲಿವುಡ್‌ ಸ್ಟಾರ್‌: ನಾನಿಯ ʻಹಾಯ್ ನಾನಾʼ ಚಿತ್ರಕ್ಕೆ ಶಿವಣ್ಣನ ವಿಶಸ್! title=

Actor Nani Visits Shivarajkumar House: ಟಾಲಿವುಡ್‌ನ ಸ್ಟಾರ್‌ ನಟ ನಾನಿ ತಮ್ಮ ʻಹಾಯ್ ನಾನಾʼ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ  ಬಂದಿಳಿದವರು, ಇಂದು ಬೆಳಗ್ಗೆ ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ರವರ  ನಾಗವಾರ ನಿವಾಸಕ್ಕೆ ಆಗಮಿಸಿದ್ದಾರೆ. ʻಹಾಯ್‌ ನಾನಾʼ ಚಿತ್ರವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು,ಈ ಸಿನಿಮಾ ಕನ್ನಡದಲ್ಲೂ ಡಬ್‌ ಆಗಿ ಬಿಡುಗಡೆಯಾಗುತ್ತಿದೆ. 

ಇಂದು ಬೆಂಗಳೂರಿನಲ್ಲಿ ‘ಹಾಯ್ ನಾನ್ನ’ ಸಿನಿಮಾದ ಸುದ್ದಿಗೋಷ್ಠಿ ಇದ್ದು, ಇದರ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ನಾನಿ  ಬೆಂಗಳೂರಿಗೆ ಆಗಮಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಹಾಗೂ ನಾನಿ ಮಧ್ಯೆ ಒಳ್ಳೆಯ ಗೆಳೆತನ ಇದ್ದು, ಶಿವಣ್ಣ  ಪ್ರೀತಿಯಿಂದ ಅಪ್ಪುಗೆ ಕೊಟ್ಟು ನಾನಿಯನ್ನು ಮನೆಗೆ ಸ್ವಾಗತಿಸಿ, ಬಳಿಕ ಇಬ್ಬರೂ ಉಭಯ ಕುಶಲೋಪರಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ?

ಹಾಯ್​ ನಾನ್ನ’ ಸಿನಿಮಾ ಕುರಿತು ನಾನಿ ಹಾಗೂ ಶಿವಣ್ಣ ಮಾತನಾಡಿದ್ದಾರೆ. ನಟ ನಾನಿ ಶಿವರಾಜ್ ಕುಮಾರ್ ಭೇಟಿ ಮಾಡುವುದ ಜೊತೆಗೆ ಸಚಿವ ಮಧು ಬಂಗಾರಪ್ಪರನ್ನು ಸಹ ಶಿವಣ್ಣನ ಮನೆಯಲ್ಲಿಯೇ ಭೇಟಿಯಾಗಿದ್ದಾರೆ. ನಾನಿ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಹಾಯ್ ನಾನ್ನ’ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಶಿವರಾಜ್‌ಕುಮಾರ್ ನಾನಿಯ ಚಿತ್ರಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ನಾನಿ ಅಭಿನಯನ ʻಹಾಯ್‌ ನಾನಾʼ‌ ಚಿತ್ರ ಇದೇ ಡಿಸೆಂಬರ್‌ 7ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಹಾಡುಗಳು, ಟೀಸರ್‌ ಹಾಗೂ ಟ್ರೇಲರ್‌ ಸಹ ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನೇನು ಸಿನಿಮಾ ತೆರೆಗೆ ಅಪ್ಪಳಿಸುವುದು ಬಾಕಿಯಿದ್ದು, ಸಿನಿಪ್ರಿಯರ ಮೆಚ್ಚುಗೆ ಪಡೆಯುವುದಕ್ಕಾಗಿ ಚಿತ್ರತಂಡ ಹಾತೋರೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News