TRAILER: 'ಲವ್ ಆಜ್ ಕಲ್' ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ ಸಾರಾ-ಕಾರ್ತಿಕ್

ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ.

Updated: Jan 17, 2020 , 06:05 PM IST
TRAILER: 'ಲವ್ ಆಜ್ ಕಲ್' ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ ಸಾರಾ-ಕಾರ್ತಿಕ್

ನವದೆಹಲಿ: ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ 'ಲವ್ ಆಜ್ ಕಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ. ಈ ಎರಡು ಹೊಸ ಮುಖಗಳನ್ನು ಒಟ್ಟಿಗೆ ಕಾಣಬಯಸುವ ಇವರ ಅಭಿಮಾನಿಗಳ ಪಾಲಿಗೆ ಈ ಟ್ರೈಲರ್ ಉತ್ಸಾಹಭರಿತವಾಗಿದೆ. ಈ ಟ್ರೈಲರ್ ನಲ್ಲಿ ಇಬ್ಬರು ಪರಸ್ಪರ ಲಿಪ್ ಲಾಕ್ ಮಾಡಿದ್ದಾರೆ. ಟ್ರೈಲರ್ ನಲ್ಲಿ ಒಟ್ಟು ಎರಡು ಲವ್ ಸ್ಟೋರಿಗಳನ್ನು ತೋರಿಸಲಾಗಿದೆ. ಮೊದಲ ಲವ್ ಸ್ಟೋರಿ 1990ರ ಲವ್ ಸ್ಟೋರಿ ಆಗಿದ್ದು ಆಗ ಕಾರ್ತಿಕ್ ಸ್ಕೂಲ್ ನಲ್ಲಿರುವುದನ್ನು ತೋರಿಸಲಾಗಿದೆ. ಎರಡನೇ ಲವ್ ಸ್ಟೋರಿ 2020 ಕಥಾ ಹಂದರ ಹೊಂದಿದೆ. ಟ್ರೈಲರ್ ನಲ್ಲಿ ಕಾರ್ತಿಕ್ ಅವರಿಗೆ ಸಾರಾ ಜೊತೆ ಲವ್ ಆಗುವುದನ್ನು ತೋರಿಸಲಾಗಿದೆ. ಆದರೆ, ಸಾರಾ ಪಾಲಿಗೆ ಅವರ ಕರಿಯರ್ ತುಂಬಾ ಮಹತ್ವದ್ದಾಗಿರುತ್ತದೆ. ಆದರೂ ಸಹ ಕಾರ್ತಿಕ್ ಸಾರಾ ಮನಸ್ಸಿನಲ್ಲಿ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಟ್ರೈಲರ್ ನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕಸ್ಮಿಕವಾಗಿ ಟ್ರೈಲರ್ ನಲ್ಲಿ ಟ್ವಿಸ್ಟ್ ಎದುರಾಗುತ್ತಿದ್ದು, ಇದರಲ್ಲಿ ಸಾರಾ ತಾನು ಕರಿಯರ್ ಹಾಗೂ ಕಾರ್ತಿಕ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಸಂಬಂಧ ಮುರಿದುಹೋಗುವ ಹಂತ ತಲುಪುತ್ತದೆ.

ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರುಷಿ ಜೊತೆ ಕಾರ್ತಿಕ್ ಅವರ 1990 ಲವ್ ಸ್ಟೋರಿ ಅನ್ನು ತೋರಿಸಲಾಗಿದೆ.

ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಪೋಸ್ಟರ್ ನಲ್ಲಿ ಸಾರಾ, ಕಾರ್ತಿಕ್ ಅವರ ಬೆನ್ನಿನ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಪೋಸ್ಟರ್ ಹಾಗೂ ಇದೀಗ ಟ್ರೈಲರ್ ಗೆ ಸಿಕ್ಕ ರಿಸ್ಪಾನ್ಸ್ ನೋಡುತ್ತಿದ್ದರೆ, ಈ ಇಬ್ಬರನ್ನು ಒಟ್ಟಿಗೆ ಬೆಳ್ಳಿ ಪರದೆಯ ಮೇಲೆ ನೋಡಲು ಅಭಿಮಾನಿಗಳು ಎಷ್ಟು ಕಾತರರಾಗಿದ್ದಾರೆ ಎಂಬುದು ತಿಳಿಯುತ್ತದೆ. ಈ ಚಿತ್ರ ವ್ಯಾಲೆಂಟೈನ್ ಡೇ ಅಂದರೆ ಫೆಬ್ರುವರಿ 14ಕ್ಕೆ ಬಿಡುಗಡೆಯಾಗಲಿದೆ. ಸಾರಾ-ಕಾರ್ತಿಕ್ ಜೊತೆ ಈ ಚಿತ್ರದಲ್ಲಿ ರಣದೀಪ್ ಹುಡ್ಡಾ ಅವರೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರನ್ನು ಮೊದಲ ಟ್ರೈಲರ್ ನಲ್ಲಿ ತೋರಿಸಲಾಗಿಲ್ಲ. ಈ ಚಿತ್ರ ದೀಪಿಕಾ ಪಡುಕೋಣೆ ಹಾಗೂ ಸೈಫ್ ಅಲಿ ಖಾನ್ ಅಭಿನಯದ 'ಲವ್ ಆಜ್ ಕಲ್' ಚಿತ್ರದ ಸಿಕ್ವಲ್ ಆಗಿದೆ.