ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಶುಭಕಾರ್ಯಕ್ಕೆ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿರುವ ಸಂದರ್ಭದಲ್ಲಿಯೇ ತಿರುಮಲ ತಿರುಪತಿ ಟ್ರಸ್ಟ್‌ನಿಂದ ನೋಟೀಸ್ ಕೂಡ ಜಾರಿಯಾಗಿದೆ. ಇದಕ್ಕೆ ಕಾರಣ ಇಲ್ಲಿದೆ.
ಇದನ್ನೂ ಓದಿ: Pranitha Subhash: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಣಿತಾ ಸುಭಾಷ್
ಕಳೆದ ಎರಡು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ ಮದುವೆಯ ಸಂಭ್ರಮದಲ್ಲಿಯೇ ಇದ್ದಾರೆ. ಈ ಸಂದರ್ಭದಲ್ಲಿ ಕಳೆದ ದಿನ ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋಗಳೇ ಜೋಡಿಗೆ ಸಂಕಷ್ಟ ತಂದೊಡ್ಡಿದೆ ಎನ್ನಬಹುದು. ಹೌದು, ತಿರುಮಲ ದೇವಸ್ಥಾನದ ಬೀದಿಗಳಲ್ಲಿ ನಯನತಾರಾ ಚಪ್ಪಲಿ ಧರಿಸಿ ತಿರುಗಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಫೋಟೋಗಳಲ್ಲಿ ಈ ದೃಶ್ಯಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಟಿಟಿಡಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
#Nayanthara in #Controversy after walked with chappals in #Tirumala maada veedhi. #TTD #BREAKING #BreakingNews #NayantharaVigneshShivan #NayanWikki pic.twitter.com/iFWcbQvVuM
— Medi Samrat (@Journo_Samrat) June 10, 2022
ಟಿಟಿಡಿ ನಿಯಮಗಳ ಪ್ರಕಾರ ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಬಾರದು. ಆದರೆ ನಿಯಮ ಉಲ್ಲಂಘಿಸಿ ಜೋಡಿ ಚಪ್ಪಲಿ ಧರಿಸಿ ಬೀದಿಗಳಲ್ಲಿ ತಿರುಗಾಡಿದ್ದಾರೆ. ಹೀಗಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಇನ್ನು ನೋಟೀಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತ ಜೋಡಿ, ಸೋಶಿಯಲ್ ಮೀಡಿಯಾದಲ್ಲಿ ಕ್ಷಮಾಪಣೆ ಕೇಳಿದೆ. ತಿರುಪತಿ ತಿರುಮಲದ ಬಗ್ಗೆ ನಮ್ಮಲ್ಲಿ ಅಪಾರ ಭಕ್ತಿ-ನಂಬಿಕೆ ಇದೆ. ಮದುವೆಯ ನಂತರ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕಾಗಿ ಮಂಟಪದಿಂದ ಇಲ್ಲಿಗೆ ಬಂದಿದ್ದೆವು. ಆದರೆ ದೇವಸ್ಥಾನದ ಹೊರಗೆ ಭಕ್ತಾದಿಗಳು ಹೆಚ್ಚಾಗಿ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಅಚಾತುರ್ಯ ಜರುಗಿದ್ದು, ಈ ತಪ್ಪಿಗಾಗಿ ಕ್ಷಮೆ ಕೇಳುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್
ಜೂನ್ 9ರಂದು ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಳಿಕ ಶುಕ್ರವಾರದಂದು ಶ್ರೀವಾರಿ ಸೇವೆಯಲ್ಲಿ ದಂಪತಿ ಪಾಲ್ಗೊಂಡಿದ್ದರು. ಆ ಬಳಿಕ ದೇವಸ್ಥಾನದ ಗಾಳಿಗೋಪುರದ ಮುಂದೆ ತೊಂಬತ್ತರ ದಶಕದ ಫೋಟೋ ಶೂಟ್ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಚಪ್ಪಲಿ ಧರಿಸಿದ್ದರು ಎಂದು ಭಾರೀ ವಿವಾದ ಸೃಷ್ಟಿಯಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.