ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್ : ಪವಿತ್ರಾ ಗೌಡ ಖಾತೆಗೆ ಜಗದೀಶ್ ಅಕೌಂಟ್ ನಿಂದ ವರ್ಗಾವಣೆಯಾಗಿತ್ತು 2 ಕೋಟಿ ರೂಪಾಯಿ

ಕಳೆದ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಗೆ ಉದ್ಯಮದ ಪಾಲುದಾರರಿಂದ ವಂಚನೆ ಸಂಬಂಧ ಮಹಾಲಕ್ಷ್ಮೀ ಲೇಟೌಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

Written by - VISHWANATH HARIHARA | Last Updated : Jun 24, 2024, 04:13 PM IST
  • ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್
  • ಮನೆ ಖರೀದಿ ಪತ್ರಕ್ಕೆ ಸಾಕ್ಷಿದಾರರಾಗಿ ಸೌಂದರ್ಯ ಜಗದೀಶ್ ಸಹಿ
  • ನಟ ದರ್ಶನ್ ಹಾಗೂ ಸೌಂದರ್ಯ ಜಗದೀಶ್ ಇಬ್ಬರು ಪರಸ್ಪರ ಸ್ನೇಹಿತರಾಗಿದ್ದರು
ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್  : ಪವಿತ್ರಾ ಗೌಡ ಖಾತೆಗೆ ಜಗದೀಶ್ ಅಕೌಂಟ್ ನಿಂದ ವರ್ಗಾವಣೆಯಾಗಿತ್ತು 2 ಕೋಟಿ ರೂಪಾಯಿ  title=

ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಸಾಕಷ್ಟು ಚರ್ಚೆ ಗ್ರಾಸವಾಗಿತ್ತು.ವ್ಯವಹಾರದಲ್ಲಿ ನಷ್ಟವಾಗಿದ್ದಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿತ್ತು.ಸದ್ಯ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆ ಜೈಲು ಸೇರಿರುವ  ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಹಣ ಪಾವತಿ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. 

ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್ :
ಕಳೆದ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಗೆ ಉದ್ಯಮದ ಪಾಲುದಾರರಿಂದ ವಂಚನೆ ಸಂಬಂಧ ಮಹಾಲಕ್ಷ್ಮೀ ಲೇಟೌಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಮತ್ತೊಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪವಿತ್ರಾಗೌಡಗೆ ಎರಡು ಕೋಟಿ ಹಣವನ್ನ ಜಗದೀಶ್  ನೀಡಿದ್ದರು ಎನ್ನಲಾಗಿದೆ.ಇದಕ್ಕೆ ಪೂರಕವೆಂಬಂತೆ ದಾಖಲೆಗಳು ಕೂಡಾ ದೊರೆತಿದೆ.ಆರ್.ಆರ್.ನಗರದ ಕೆಂಚೇನಹಳ್ಳಿಯಲ್ಲಿ 2 ಕೋಟಿ ರೂಪಾಯಿ ನೀಡಿ ಪವಿತ್ರಾಗೌಡ ಮನೆ ಖರೀದಿಸಿದ್ದರು.ಇದಕ್ಕಾಗಿ 2017 ಹಾಗೂ 2018 ರಲ್ಲಿ ಎರಡು ಕೋಟಿ ಹಣ ಪಡೆದಿರುವ ಬಗ್ಗೆ ಸೆಲ್ ಡೀಡ್ ನಲ್ಲಿ ಸ್ಪಷ್ಪವಾಗಿ ತಿಳಿಸಲಾಗಿದೆ. 

ಇದನ್ನೂ ಓದಿ : ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂ

ಹೌದು, ಮನೆ ಖರೀದಿ ಪತ್ರಕ್ಕೆ ಸಾಕ್ಷಿದಾರರಾಗಿ ಸೌಂದರ್ಯ ಜಗದೀಶ್ ಸಹಿ ಹಾಕಿದ್ದಾರೆ.ಜಗದೀಶ್ ಸಾವಿಗೆ ಉದ್ಯಮದಲ್ಲಿ ನಷ್ಟವಾಗಿದ್ದು, ಇದಕ್ಕೆ ಪಾಲುದಾರರೇ ಕಾರಣರಾಗಿರುವುದಾಗಿ ಎಂದು ಜಗದೀಶ್ ಕುಟುಂಬಸ್ಥರು ಆರೋಪಿಸಿದ್ದರು.ಈ ಬಗ್ಗೆ ಜಗದೀಶ್ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಕೋರಿದ್ದರು. ಈ ಸಂಬಂಧ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ. ಹಾಗೂ ಸುಧೀಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.ಸದ್ಯ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪವಿತ್ರಾ ಜೈಲಿಗೆ ಹೋಗುತ್ತಿದ್ದಂತೆ ಜಗದೀಶ್ 2 ಕೋಟಿ ಸಾಲ ನೀಡಿದ್ದರು ಎಂಬುದು ಬಹಿರಂಗವಾಗಿದೆ. 

ಇನ್ನು ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಪವಿತ್ರಾಗೌಡಗೆ ಹಣ ಸಂದಾಯವಾಗಿದೆಯಷ್ಟೇ.ದರ್ಶನ್ ಆಗಲಿ,ಪವಿತ್ರಾಗೌಡ ಕಡೆಯಿಂದ ವಾಪಸ್ ಹಣ ಸಂದಾಯವಾಗಿಲ್ಲ ಎನ್ನಲಾಗಿದೆ.ಹೀಗಾಗಿ ಯಾಕೆ ಹಣ ಸಂದಾಯವಾಗಿಲ್ಲ,ದರ್ಶನ್ ಏನಾದರೂ ಸೌಂದರ್ಯ ಜಗದೀಶ್ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದಾರಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?

ಒಟ್ಟಿನಲ್ಲಿ ನಟ ದರ್ಶನ್ ಹಾಗೂ ಸೌಂದರ್ಯ ಜಗದೀಶ್ ಇಬ್ಬರು ಪರಸ್ಪರ ಸ್ನೇಹಿತರಾಗಿದ್ದರು.ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿಯೂ ಜಗದೀಶ್ ಒಡೆತನದ ಜೆಟ್ ಲ್ಯಾಕ್ ಪಬ್ ನಲ್ಲಿ ನಡೆದಿತ್ತು.ಆನಂತರ ಕೆಲವೇ ದಿನಗಳಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದರು.ಸದ್ಯ ಪವಿತ್ರಾಗೌಡ ಜೊತೆಗೆ ಸೌಂದರ್ಯ ಜಗದೀಶ್ ಹಣದ ವ್ಯವಹಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News