ಮುಂಬೈ: ಸ್ವಜನ ಪಕ್ಷಪಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಖ್ಯಾತ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ (Karan Johar) ಅವರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ. ಈ ಕುರಿತು ಅವರು ಬಹಿರಂಗವಾಗಿ ಹೇಳಿಕೆ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಚಿತ್ರಗಳಲ್ಲಿ ಯಾರನ್ನು ಲಾಂಚ್ ಮಾಡಬೇಕು ಹಾಗೂ ಯಾರಿಗೆ ಅವಕಾಶ ನೀಡಬೇಕು ಇದು ಅವರ ವೈಯಕ್ತಿಕ ನಿರ್ಣಯವಾಗಿದೆ. ಇದರ ಮೇಲೆ ಬೇರೆಯೋಬ್ಬರಿಗೆ ಕಾಮೆಂಟ್ ಮಾಡುವ ಅಧಿಕಾರ ಇಲ್ಲ. ಆದರೆ, ಸುಶಾಂತ್ ಸಿಂಗ್ ರಾಜ್ಪುತ್ ಸಾವು ಪ್ರಕರಣದ ಬಳಿಕ, ಜನರು ಅವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯ ಕರಣ್ ಅವರು ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅವರ ಮೇಲೆ ಬಾಲಿವುಡ್ ನಲ್ಲಿ ಗುಂಪುಗಾರಿಕೆಯ ಆರೋಪ ಮಾಡಿ ಅವರನ್ನು ಬಾಲಿವುಡ್ ನ ಮಾಫಿಯಾ ಎಂದು ಹೇಳಿದ್ದಾರೆ.
ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು
ಕರಣ್ ಮೇಲೆ ಡ್ರಗ್ಸ್ ಪಾರ್ಟಿ ಆಯೋಜಿಸಿದ ಆರೋಪ
ಸುಶಾಂತ್ ಸಿಂಗ್ ಪ್ರಕರಣದ ಇತ್ತೀಚಿನ ತನಿಖೆಯಲ್ಲಿ ಎನ್‌ಸಿಬಿ ಅನೇಕ ಬಾಲಿವುಡ್ ಖ್ಯಾತನಾಮರನ್ನು ವಿಚಾರಣೆಗೆ ಕರೆಸಿದೆ. ಇದು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಧರ್ಮಾ ಪ್ರೊಡಕ್ಷನ್ ಜೊತೆಗೆ ಸಂಬಂಧ ಹೊಂದಿರುವ ಜನರನ್ನು ಸಹ ಒಳಗೊಂಡಿದೆ. ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ಸ್ ಮಾಲೀಕರಾಗಿದ್ದಾರೆ. ಅವರ ಚಿತ್ರ ನಿರ್ಮಾಣ ಕಂಪನಿಗೆ ಸಂಬಂಧಿಸಿದ ಕ್ಷಿತಿಜ್ ಪ್ರಸಾದ್ ಅವರನ್ನು ಈಗಾಗಲೇ ಎನ್‌ಸಿಬಿ ಪ್ರಶ್ನಿಸಿದೆ. ಕರಣ್ ಜೋಹರ್ ಅವರು ನೀಡಿರುವ ಡ್ರಗ್ ಪಾರ್ಟಿ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ವಿಶೇಷವಾಗಿ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ, ತನಿಖೆಯ ಸೂಜಿ ಇದೀಗ ಕರಣ್ ಕಡೆಗೆ ತಿರುಗುವುದುಇದೀಗ ಕಂಡುಬರುತ್ತದೆ. ಕ್ಷಿತಿಜ್ ಹಲವಾರು ಮಾದಕವಸ್ತು ಪೆಡ್ಲರ್ ಗಳ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಕರಣ್ ಜೋಹರ್ ಅವರು 2019 ರಲ್ಲಿ ತಮ್ಮ ಮನೆಯಲ್ಲಿ ಡ್ರಗ್ ಪಾರ್ಟಿ ಆಯೋಜಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕರಣ್ ಹೊರತಾಗಿ ಬಾಲಿವುಡ್‌ನ ಅನೇಕ ಖ್ಯಾತನಾಮ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ- Exclusive: ಕರಣ್ ಜೋಹರ್ Party Video ತನಿಖೆಯ ಕುರಿತು Zee News ಬಳಿ ಪ್ರಮುಖ ಅಪ್ಡೇಟ್
ವಿವಾದಾತ್ಮಕ ಔತಣಕೂಟದ ಕುರಿತು ಹೇಳಿಕೆ ನೀಡಿದ ಕರಣ್
ಈ ವಿವಾದಾತ್ಮಕ ಔತಣಕೂಟದ ಕುರಿತು ನಿನ್ನೆ ತಡರಾತ್ರಿ ಕರಣ್ ಜೋಹರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಈ ಹೇಳಿಕೆಯಲ್ಲಿ ಅವರು, " ಕೆಲ ನ್ಯೂಸ್ ಚಾನೆಲ್, ಪ್ರಿಂಗ್/ಇಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳು ಹಾಗೂ ಭ್ರಮೆ ಹುಟ್ಟಿಸುವಂತಹ ವರದಿಗಳನ್ನು ಬಿತ್ತರಿಸುತ್ತಿವೆ. ಜುಲೈ 28, 2019ರಲ್ಲಿ ನನ್ನ ಮನೆಯಲ್ಲಿ ಪಾರ್ಟಿಯೊಂದು ನಡೆದಿದ್ದು ಈ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಆದರೆ, 2019 ರಲ್ಲಿಯೇ ನಾನು ನನ್ನ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದೇನೆ ಮತ್ತು ಆರೋಪಗಳು ಸತ್ಯಕ್ಕೆ ದೂರವಾಗಿವೆ. ದುರ್ಭಾಗ್ಯವಶಾತ್ ನನ್ನ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ನಿರಾಧಾರವಾಗಿವೆ ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಮತ್ತೊಮ್ಮೆ ನಾನು ಪುನರುಚ್ಛರಿಸುತ್ತಿದ್ದೇನೆ. ಔತಣ ಕೂಟದಲ್ಲಿ ಯಾವುದೇ ರೀತಿಯ ಡ್ರಗ್ಸ್ ಸೇವನೆ ನಡೆಸಳಗಿರಲಿಲ್ಲ. ನಾನು ಡ್ರಗ್ಸ್ ಸೇವಿಸುವುದಿಲ್ಲ ಮತ್ತು ಈ ರೀತಿಯ ಯಾವುದೇ ಮಾದಕ ಪದಾರ್ಥ ಸೇವನೆಗೆ ಕುಮ್ಮಕ್ಕು ನೀಡುವುದಿಲ್ಲ" ಎಂದು ಹೇಳಿದ್ದಾರೆ.
ಇದನ್ನು ಓದಿ- ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡ Rakul Preet ಸಿಂಗ್, ಆದರೆ..?
ನಿಂದನೀಯ ಹಾಗೂ ದೌರ್ಭಾಗ್ಯದಿಂದ ಕೂಡಿರುವ ಲೇಖನಗಳು ನನ್ನ ಕುಟುಂಬ ಹಾಗೂ ಸಹಚರರು ಮತ್ತು ಧರ್ಮಾ ಪ್ರೊಡಕ್ಷನ್ ಕಂಪನಿ ವಿರುದ್ಧ ಕಾರಣವಿಲ್ಲದೆ ದ್ವೇಷ ಹುಟ್ಟುಹಾಕುತ್ತಿವೆ ಹಾಗೂ ಅಪಹಾಸ್ಯಕ್ಕೆ ಪಾತ್ರರನ್ನಾಗಿಸುತ್ತವೆ. ಹಲವು ಸುದ್ದಿ ಮಾಧ್ಯಮಗಳು ಕ್ಷಿತಿಜ್ ಪ್ರಸಾದ್ ಹಾಗೂ ಅನುಭವ ಚೋಪಡಾ ಅವರನ್ನು ನನ್ನ ಆಪ್ತರು ಎಂದು ಹೇಳಲಾಗುತ್ತಿದೆ. ನನಗೆ ಈ ವ್ಯಕ್ತಿಗಳ ಪರಿಚಯ ಕೂಡ ಇಲ್ಲ ಹಾಗೂ ಈ ವ್ಯಕ್ತಿಗಳು ನನ್ನ ಆಪ್ತರೂ ಕೂಡ ಅಲ್ಲ. ಯಾವ ವ್ಯಕ್ತಿ ತನ್ನ ವೈಯಕ್ತಿಕ ಜೀವನದಲ್ಲಿ ಎಂದು ಮಾಡುತ್ತಾರೆ ಇದಕ್ಕೆ ನಾನು ಹಾಗೂ ನನ್ನ ಧರ್ಮಾ ಪ್ರೊಡಕ್ಷನ್ ಹೊಣೆಗಾರರಲ್ಲ. ಈ ಆರೋಪಗಳ ಜೊತೆಗೆ ಧರ್ಮಾ ಪ್ರೊಡಕ್ಷನ್ ಯಾವುದೇ ರೀತಿಯ ಸಂಬಂಧವಿಲ್ಲ.
ಅನುಭವ ಚೋಪಡಾ ಧರ್ಮಾ ಪ್ರೊಡಕ್ಷನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅವರು ಕೇವಲ ಎರಡು ತಿಂಗಳಗೋಸ್ಕರ ಧರ್ಮಾ ಪ್ರೊಡಕ್ಷನ್ ಜೊತೆಗೆ ಕೆಲಸ ಮಾಡಿದ್ದರು. ನವಂಬರ್ 2011 ಹಾಗೂ ಜನವರಿ 2012ರ ಮಧ್ಯೆ ಅವರು ಶಾರ್ಟ್ ಫಿಲ್ಮ್ ವೊಂದಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಇದಾದ ಬಳಿಕ ಧರ್ಮಾ ಪ್ರೊಡಕ್ಷನ್ ನ ಬೇರೆ ಪ್ರಾಜೆಕ್ಟ್ಸ್ ಗಳ ಮೇಲೆ ಅವರು ಎಂದಿಗೂ ಕಾರ್ಯನಿರ್ವಹಿಸಿಲ್ಲ. ಕ್ಷಿತಿಜ್ ರವಿ ಪ್ರಸಾದ್ ಅವರನ್ನು ನವೆಂಬರ್ 2019ರಲ್ಲಿ ಧರ್ಮಾಟಿಕ್ ಎಂಟರ್ಟೈನ್ಮೆಂಟ್ ನ ಒಂದು ಪ್ರಾಜೆಕ್ಟ್ ಗಾಗಿ ಸಹಿ ಹಾಕಿಸಲಾಗಿತ್ತು. ಈ ಪ್ರಾಜೆಕ್ಟ್ ಗಾಗಿ ಅವರು ಒಂದು ಕಾರ್ಯನಿರ್ವಾಹಕ ಪ್ರೊಡ್ಯೂಸರ್ ಆಗಿ ಸೇರಿಕೊಂಡಿದ್ದರು. ಈ ಪ್ರಾಜೆಕ್ಟ್ ಕೂಡ ಪೂರ್ಣವಾಗಲೇ ಇಲ್ಲ ಎಂದು ಕರಣ್ ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.
ಮಾಧ್ಯಮದವರು ತಾಳ್ಮೆ ವಹಿಸಬೇಕು. ಇಲ್ಲದೆ ಹೋದರೆ ನನ್ನ ಬಳಿ ಈ ಆರೋಪಗಳ ವಿರುದ್ಧ ಕಾನೂನು ಮಾರ್ಗ ಅನುಸರಿಸುವುದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ ಎಂದು ಅವರು ಹೇಳಿದ್ದಾರೆ.