ಬಾಲಿವುಡ್ ನಟ ವರುಣ್ ಧವನ್-ನಟಾಷಾ ದಲಾಲ್ ಮದುವೆ ಸ್ಥಳ ಹೇಗೆಲ್ಲ ಇರಲಿದೆ ಗೊತ್ತೇ?

ನಟ ವರುಣ್ ಧವನ್ ಮತ್ತು ಪ್ರೇಯಸಿ ನತಾಶಾ ದಲಾಲ್ ಈ ವಾರಾಂತ್ಯದಲ್ಲಿ ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಕಡಲತೀರದ ಪಟ್ಟಣವಾದ ಅಲಿಬಾಗ್‌ನಲ್ಲಿ ವಿವಾಹವಾಗಲಿದ್ದಾರೆ.

Last Updated : Jan 23, 2021, 10:05 PM IST
  • ಕಾಫಿ ವಿಥ್ ಕರಣ್ ಅವರ ಆರನೇ ಋತುವಿನಲ್ಲಿ ಕಾಣಿಸಿಕೊಂಡಾಗ, ವರುಣ್ ತಾನು ಮತ್ತು ನತಾಶಾ ಎಂಬ ಡಿಸೈನರ್ ನ್ನು ಡೇಟಿಂಗ್ ಮಾಡುತ್ತಿದ್ದೇವೆ ಮತ್ತು ಅವರು ಮದುವೆಯಾಗಲು ಉದ್ದೇಶಿಸಿದ್ದಾರೆ ಎಂದು ದೃಢಪಡಿಸಿದರು.
  • ವರುಣ್ ಧವನ್ 2012 ರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು
ಬಾಲಿವುಡ್ ನಟ ವರುಣ್ ಧವನ್-ನಟಾಷಾ ದಲಾಲ್ ಮದುವೆ ಸ್ಥಳ ಹೇಗೆಲ್ಲ ಇರಲಿದೆ ಗೊತ್ತೇ?

ನವದೆಹಲಿ: ನಟ ವರುಣ್ ಧವನ್ ಮತ್ತು ಪ್ರೇಯಸಿ ನತಾಶಾ ದಲಾಲ್ ಈ ವಾರಾಂತ್ಯದಲ್ಲಿ ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಕಡಲತೀರದ ಪಟ್ಟಣವಾದ ಅಲಿಬಾಗ್‌ನಲ್ಲಿ ವಿವಾಹವಾಗಲಿದ್ದಾರೆ.

ಇದನ್ನೂ ಓದಿ: ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ ! ವೀಡಿಯೋ ವೈರಲ್

COVID-19 ಹಿನ್ನಲೆಯಲ್ಲಿ ಅತಿಥಿಗಳ ಪಟ್ಟಿಯನ್ನು 40 ರಿಂದ 50 ರವರೆಗೆ ಸೀಮಿತಗೊಳಿಸಲಾಗಿದೆ,ಆದರೆ ಪಂಜಾಬಿ ಸಂಪ್ರದಾಯದ ಪ್ರಕಾರ ಮೆಹೆಂದಿ ಮತ್ತು ಸಂಗೀತ ಇರುತ್ತದೆ.ಈಗಾಗಲೇ ವರುಣ್ ಧವನ್ (Varun Dhawan) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಬಾಲಿವುಡ್ ವಿವಾಹ ಕೂಟವು ನಿರೀಕ್ಷಿಸಬಹುದಾದ ರೀತಿಯ ಅಲಂಕಾರದ ಚಿತ್ರಣವನ್ನು ನೀಡುತ್ತದೆ.

ಇದನ್ನೂ ಓದಿ: ಕಂಗನಾ ರಣಾವತ್ ಜೊತೆ 'ಪಂಗಾ'ಗಿಳಿದ ವರುಣ್ ಧವನ್, ಮುಂದೇನಾಯ್ತು?

ಕಳೆದ ವರ್ಷ COVID-19 ನಿಂದ ಚೇತರಿಸಿಕೊಂಡ ವರುಣ್ ಧವನ್ ಕರೀನಾ ಕಪೂರ್ ಅವರ ರೇಡಿಯೊ ಶೋ ವಾಟ್ ವುಮೆನ್ ವಾಂಟ್ ನಲ್ಲಿ ಅವರು ನತಾಶಾ ಅವರನ್ನು ಹೇಗೆ ಭೇಟಿಯಾದರು ಎಂದು ಅವರು ವಿವರಿಸಿದರು "ನಾನು ನತಾಶಾ ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಆರನೇ ತರಗತಿಯಲ್ಲಿ. ಅಂದಿನಿಂದ ನಾವು ಡೇಟಿಂಗ್ ಮಾಡುತ್ತಿರಲಿಲ್ಲ. ನಾವು ಹನ್ನೊಂದನೇ ಅಥವಾ ಹನ್ನೆರಡನೇ ತರಗತಿಯವರೆಗೆ ಸ್ನೇಹಿತರಾಗಿದ್ದೇವೆ. ಆದರೆ ನಾನು ಅವಳನ್ನು ನೋಡಿದ ಕ್ಷಣ ನನಗೆ ಇನ್ನೂ ನೆನಪಿದೆ, ನಾವು ಮಾನೆಕ್ಜಿ ಕೂಪರ್‌ಗೆ ಹೋದೆವು, ಅವಳು ಹಳದಿ ಮನೆಯಲ್ಲಿದ್ದಳು ಮತ್ತು ನಾನು ಕೆಂಪು ಮನೆಯಲ್ಲಿದ್ದೆ. ಅದು ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿತ್ತು, ಊಟದ ವಿರಾಮದಲ್ಲಿ, ಕ್ಯಾಂಟೀನ್‌ನಲ್ಲಿ ಊಟ ಮತ್ತು ಎನರ್ಜಿ ಡ್ರಿಂಕ್ ನೀಡಿದಳು.ನನಗೆ ಅವಳ ನಡಿಗೆ ಇನ್ನೂ ನೆನಪಿದೆ, ನಾನು ಅವಳನ್ನು ನೋಡಿದಾಗ, ಆ ದಿನ ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಭಾವಿಸಿದೆ" ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ಕಾಫಿ ವಿಥ್ ಕರಣ್ ಅವರ ಆರನೇ  ಋತುವಿನಲ್ಲಿ ಕಾಣಿಸಿಕೊಂಡಾಗ, ವರುಣ್ ತಾನು ಮತ್ತು ನತಾಶಾ ಎಂಬ ಡಿಸೈನರ್ ನ್ನು ಡೇಟಿಂಗ್ ಮಾಡುತ್ತಿದ್ದೇವೆ ಮತ್ತು ಅವರು ಮದುವೆಯಾಗಲು ಉದ್ದೇಶಿಸಿದ್ದಾರೆ ಎಂದು ದೃಢಪಡಿಸಿದರು.ವರುಣ್ ಧವನ್ 2012 ರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ, ಎಬಿಸಿಡಿ 2, ಬದ್ಲಾಪುರ, ದಿಲ್ವಾಲೆ ಮತ್ತು ಸುಯಿ ಧಾಗಾ ಮುಂತಾದ ಚಿತ್ರಗಳಲ್ಲಿ ನಟಿಸಿರುವ ವರುಣ್ ಧವನ್ ಇತ್ತೀಚಿಗಷ್ಟೇ ಸಾರಾ ಅಲಿ ಖಾನ್ ಅವರೊಂದಿಗೆ ಕೂಲಿ ನಂ 1 ರ ರಿಮೇಕ್ನಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News