'ತೂತು ಕಾಸು' ಸಿನಿಮಾದ ಹಾಡಿಗೆ ಧ್ವನಿಯಾದ ವಾಸಕಿ ವೈಭವ್

Tutu Kasu Movie: 'ತೂತು ಕಾಸು' ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾ. ಹೊಸಬರು ಸೇರಿಕೊಂಡು ಮಾಡಿರುವ ಈ ಸಿನಿಮಾ ಇದಾಗಿದ್ದು ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿತ್ತು. 

Written by - Chetana Devarmani | Last Updated : Mar 20, 2024, 01:28 PM IST
  • ಹಂಸಲೇಖ ಶಿಷ್ಯಂದಿರ ಹೊಸ ಪ್ರಯತ್ನ
  • ತೆರೆಗೆ ಬರಲು ಸಿದ್ಧವಾಗಿದೆ 'ತೂತು ಕಾಸು'
  • 'ತೂತು ಕಾಸು' ಸಿನಿಮಾ ಶೀಘ್ರದಲ್ಲೇ ರಿಲೀಸ್‌
'ತೂತು ಕಾಸು' ಸಿನಿಮಾದ ಹಾಡಿಗೆ ಧ್ವನಿಯಾದ ವಾಸಕಿ ವೈಭವ್  title=

vasuki vaibhav songs: 'ತೂತು ಕಾಸು' ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾ. ಹೊಸಬರು ಸೇರಿಕೊಂಡು ಮಾಡಿರುವ ಈ ಸಿನಿಮಾ ಇದಾಗಿದ್ದು ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿತ್ತು. ವಿಶೇಷ ಎಂದರೆ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ. ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ರವಿತೇಜಸ್ ಅವರಿಗೆ ಇದು ಮೊದಲ ಸಿನಿಮಾ.

ಇದನ್ನೂ ಓದಿ: 'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬಂದ ಖ್ಯಾತ ನಟಿ... ಆ ಜಾಗಕ್ಕೆ ಈ ಬ್ಯೂಟಿ ಎಂಟ್ರಿ !!

'ತೂತು ಕಾಸು' ಚಿತ್ರದಲ್ಲಿ ನಾಯಕನಾಗಿ ವರುಣ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಮಿಂಚಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರವಿ ತೇಜಸ್ 'ತೂತ್ ಕಾಸು' 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ' ಎಂದು ಹೇಳಿದರು.

ಇನ್ನು ನಾಯಕ ವರುಣ್ ದೇವಯ್ಯ ಮಾತನಾಡಿ, '10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದೇವೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ' ಎಂದರು. ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ಪುಷ್ಪ 2 ಶ್ರೀವಲ್ಲಿ ಫಸ್ಟ್ ಲುಕ್ ಲೀಕ್.. ಕೆಂಪು ಸೀರೆಯುಟ್ಟು ನಡು ರಸ್ತೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ!! ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News