ನವದೆಹಲಿ : ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆಯ ಸುದ್ದಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಕೇಳಿ ಬರುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ ಮತ್ತು ಶೀಘ್ರದಲ್ಲೇ ಇಬ್ಬರೂ ಮದುವೆಯಾಗುತ್ತಾರೆ ಎನ್ನಲಾಗಿದೆ.ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ನಡುವೆ ಇವರಿಬ್ಬರೂ ಮದುವೆಯ ನಂತರ ವಾಸಿಸಲು ಮನೆ ಹುಡುಕುತ್ತಿರುವ ವರದಿಗಳು ಮುನ್ನೆಲೆಗೆ ಬಂದಿವೆ.
ಈ ಪ್ರದೇಶದಲ್ಲಿರಲಿದೆ ವಿಕ್ಕಿ ಕತ್ರಿನಾ ಮನೆ :
ಇಬ್ಬರೂ ಮುಂಬೈನ ಜುಹು ಪ್ರದೇಶದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಇದೇ ಅಪಾರ್ಟ್ಮೆಂಟ್ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ ಕೂಡ ವಾಸಿಸುತ್ತಿದ್ದಾರೆ. ವರದಿಯ ಪ್ರಕಾರ, ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ ಈ ಐಷಾರಾಮಿ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ.
ಇದನ್ನೂ ಓದಿ : Happy Birthday Anushka: Baahubali ಚಿತ್ರದ 'ದೇವಸೇನಾ' ಮೊದಲ ಪ್ರೀತಿ ಈ ಕನ್ನಡಿಗ ! MMS ಸೋರಿಕೆ ಭಾರಿ ಸುದ್ದಿಯೇ ಮಾಡಿತ್ತು
ಎಷ್ಟಿರಲಿದೆ ಬಾಡಿಗೆ ?
ರಿಯಲ್ ಎಸ್ಟೇಟ್ ಪೋರ್ಟಲ್ ಅನ್ನು ನಿರ್ವಹಿಸುವ ವರುಣ್ ಸಿಂಗ್ (Varun Singh), ಎಂಬವರ ಪ್ರಕಾರ ಈ ಅಪಾರ್ಟ್ಮೆಂಟ್ ಗಾಗಿ 'ವಿಕ್ಕಿ ಕೌಶಲ್ ಸುಮಾರು 1.75 ಕೋಟಿ ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ನೀಡಿದ್ದಾರೆ. ಆರಂಭದ 36 ವಾರಗಳಿಗೆ ತಿಂಗಳಿಗೆ 8 ಲಕ್ಷ ರೂ. ಬಾಡಿಗೆ ನೀಡಲಿದ್ದಾರೆ. ಇದರ ನಂತರ, ಮುಂದಿನ 12 ತಿಂಗಳಿಗೆ ತಿಂಗಳಿಗೆ 8.40 ಲಕ್ಷ ಮತ್ತು ನಂತರ ಮುಂದಿನ 12 ತಿಂಗಳವರೆಗೆ ಪ್ರತಿ ತಿಂಗಳು 8.82 ಲಕ್ಷ ರೂ. ಪಾವತಿಸಲಿದ್ದಾರೆ.
ವೃತ್ತಿ ಜೀವನ :
ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ ಇಬ್ಬರೂ ಅತ್ಯಂತ ಯಶಸ್ವಿ ನಟರು. ಇತ್ತೀಚೆಗಷ್ಟೇ ಬಿಡುಗಡೆಯಾದ ವಿಕ್ಕಿ ಕೌಶಲ್ ಅಭಿನಯದ ಉಧಮ್ ಸಿಂಗ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕತ್ರಿನಾ ಕೈಫ್ ಅಭಿನಯದ ‘ಸೂರ್ಯವಂಶಿ’ (Sooryavanshi) ಸಿನಿಮಾ ಕೂಡ ಭಾರೀ ಗಳಿಕೆ ಮಾಡುತ್ತಿದೆ.
ಇದನ್ನೂ ಓದಿ : Janhvi Kapoor: ಸಹೋದರಿಯೊಂದಿಗೆ ಜಾಹ್ನವಿ ಕಪೂರ್ ಹಾಟ್ ಪೋಸ್, ನೆಟಿಜನ್‌ಗಳಿಂದ ಟ್ರೋಲ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ