Janhvi Kapoor: ಸಹೋದರಿಯೊಂದಿಗೆ ಜಾಹ್ನವಿ ಕಪೂರ್ ಹಾಟ್ ಪೋಸ್, ನೆಟಿಜನ್‌ಗಳಿಂದ ಟ್ರೋಲ್..!

ಇತ್ತೀಚೆಗೆ ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್ ಅವರ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

Written by - Puttaraj K Alur | Last Updated : Nov 7, 2021, 10:28 AM IST
  • ಜಾಹ್ನವಿ ಕಪೂರ್​ & ಖುಷಿ ಕಪೂರ್ ಅವರ ಕೆಲವು ಚಿತ್ರಗಳು ಸಖತ್ ವೈರಲ್ ಆಗಿವೆ
  • ಫೋಟೋದಲ್ಲಿ ಹಾಟ್ ಫೋಸ್ ನೀಡಿರುವ ಜಾಹ್ನವಿ ಕಪೂರ್ ಟ್ರೋಲ್ ಮಾಡಿದ ನೆಟಿಜನ್‌ಗಳು
  • ಈ ರೀತಿಯ ಹಾಟ್ ಪೋಸ್ ನೀಡುವ ಅಗತ್ಯವೇನಿತ್ತು ಎಂದು ನಟಿಗೆ ಅನೇಕರಿಂದ ಪ್ರಶ್ನೆ
Janhvi Kapoor: ಸಹೋದರಿಯೊಂದಿಗೆ ಜಾಹ್ನವಿ ಕಪೂರ್ ಹಾಟ್ ಪೋಸ್, ನೆಟಿಜನ್‌ಗಳಿಂದ ಟ್ರೋಲ್..! title=
ಸಹೋದರಿ ಜೊತೆ ಜಾಹ್ನವಿ ಕಪೂರ್ ಹಾಟ್ ಪೋಸ್

ನವದೆಹಲಿ: ಖ್ಯಾತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್(Janhvi Kapoor)​ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾಹ್ನವಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ, ಆದರೆ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಬೇಡಿಕೆ ಇದೆ. ದೊಡ್ಡ ಯಶಸ್ಸಿಗಾಗಿ ಈ ಯುವನಟಿ ಕಾಯುತ್ತಿದ್ದಾರೆ.

ಇತ್ತೀಚೆಗೆ ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್(Khushi And Jhanvi) ಅವರ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಚಿತ್ರಗಳಲ್ಲಿ ಖುಷಿ ಮತ್ತು ಜಾಹ್ನವಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಒಬ್ಬ ಅಪರಿಚಿತ ವ್ಯಕ್ತಿ ಕೂಡ ಇದ್ದಾನೆ. ಈತನ ಬಗ್ಗೆ ಜಾಹ್ನವಿ ಏನನ್ನೂ ಉಲ್ಲೇಖಿಸಿಲ್ಲ. ಆದರೆ ಈ ಫೋಟೋ ವೈರಲ್ ಆಗಲು ಕಾರಣ ಈ ಮಿಸ್ಟರಿ ಬಾಯ್ ಅಲ್ಲ.

ಇದನ್ನೂ ಓದಿ: Kangana Ranaut: ಪಾಕ್ ನಲ್ಲಿ ಥಲೈವಿ ಟ್ರೆಂಡ್ ಆಗಿದ್ದಕ್ಕೆ ಕಂಗನಾ ಹೇಳಿದ್ದೇನು ಗೊತ್ತೇ?

ಕಪೂರ್ ಸಹೋದರಿಯರನ್ನು ಟ್ರೋಲ್ ಮಾಡಲಾಗಿದೆ

ಈ ಫೋಟೋ ವೈರಲ್(Photo Viral) ಆಗಲು ಕಾರಣ ಇದರಲ್ಲಿ ಜಾಹ್ನವಿ ಕಪೂರ್ ನೀಡಿರುವ ಹಾಟ್ ಪೋಸ್(Bold Photos). ವಾಸ್ತವವಾಗಿ ಜಾಹ್ನವಿ ಕಪೂರ್ ಟ್ಯೂಬ್ ಟಾಪ್ ಧರಿಸಿದ್ದು, ಒಂದು ಕಾಲನ್ನು ಮೇಲಕ್ಕೆ ಎತ್ತಿದ್ದಾರೆ. ಅವರ ಕಿರಿಯ ಸಹೋದರಿ ಖುಷಿ ಜಾಹ್ನವಿ ಕಾಲಿನ ಮೇಲೆ ಕೈ ಮತ್ತು ಮುಖವನ್ನಿಟ್ಟು ಒರಗಿದ್ದಾರೆ. ಇವರಿಬ್ಬರೂ ನೀಡಿರುವ ಈ ಪೋಸ್ ತುಂಬಾ ವಿಚಿತ್ರವಾಗಿದೆ. ಜಾಹ್ನವಿ ಮತ್ತು ಖುಷಿ ಜೊತೆಗಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಅವರ ಹೆಗಲ ಮೇಲೆ ಜಾಹ್ನವಿ ಕೈ ಇಟ್ಟು ಪೋಸ್ ನೀಡಿದ್ದಾಳೆ.

ಪೋಸ್ ಪ್ರಶ್ನಿಸಿ ವಿವಿಧ ರೀತಿಯಲ್ಲಿ ಕಾಮೆಂಟ್

ಗಮನಿಸಬೇಕಾದ ವಿಷಯವೆಂದರೆ ಈ ಫೋಟೋದಲ್ಲಿ ಜಾಹ್ನವಿ ಕಪೂರ್(Janhvi Kapoor) ತನ್ನ ತೊಡೆಯ ಮೇಲಿರುವ ಉಡುಪನ್ನು ಸ್ಲಿಪ್ ಮಾಡಿದ್ದಾಳೆ. ಖುಷಿ ತನ್ನ ಕೈ ಮತ್ತು ಮುಖವನ್ನು ಆಕೆಯ ತೊಡೆಗೆ ಒರಗಿಸಿ ಪೋಸ್ ನೀಡಿದ್ದಾಳೆ. ನಟಿಯ ಈ ಚಿತ್ರಗಳನ್ನು ಪ್ರಸಿದ್ಧ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅಸಂಖ್ಯಾತ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ ಕಾಮೆಂಟ್ ವಿಭಾಗದಲ್ಲಿ ಅನೇಕ ಜನರು ಅವರ ಪೋಸ್ ಅನ್ನು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ನಿಮ್ಮ ಡೈವೋರ್ಸ್ ಯಾವಾಗ ಆಗುತ್ತೆ ಎಂದು ನಮಗೆ ಹೇಳಿ' ಎಂದ ವ್ಯಕ್ತಿಗೆ ನಟಿ ರಿಚಾ ಚಡ್ಡಾ ಹೇಳಿದ್ದೇನು ಗೊತ್ತೇ?

ಅನೇಕ ಜನರು ಆಕ್ಷೇಪಾರ್ಹ ವಿಷಯಗಳನ್ನು ಬರೆದಿದ್ದಾರೆ. ಕೆಲವರು ಇಂತಹ ಪೋಸ್ ನ ಅಗತ್ಯವೇನೆಂದು ಕೇಳಿದ್ದಾರೆ. ಈ ಜಾಹ್ನವಿ ಈ ರೀತಿ ಫೋಟೋಗೆ ಏಕೆ ಪೋಸ್ ನೀಡಬೇಕಿತ್ತು ಎಂದು ಪ್ರಶ್ನಿಸಿ ಅನೇಕರು ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ. ಸದ್ಯ ಜಾಹ್ನವಿ ಕಪೂರ್ ವೃತ್ತಿಜೀವನದ ಗ್ರಾಫ್ ತುಂಬಾ ವೇಗವಾಗಿ ಏರುತ್ತಿದೆ. ‘ಧಡಕ್’ ಚಿತ್ರದ ಮೂಲಕ ಬಾಲಿವುಡ್(Bollywood) ಪ್ರವೇಶಿಸಿದ ನಟಿ ಸದ್ಯ ಬ್ಯುಸಿಯಾಗಿದ್ದಾರೆ. ಮರಾಠಿಯ ‘ಸೈರಾಟ್’ ಚಿತ್ರದ ಹಿಂದಿ ರಿಮೇಕ್ ನಲ್ಲಿ ಜಾಹ್ನವಿ ಜೊತೆ ಇಶಾನ್ ಖಟ್ಟರ್ ಕಾಣಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News