VIDEO: ಪತಿಯೊಂದಿಗೆ ಮೊದಲ ದೀಪಾವಳಿ ಆಚರಿಸಿದ ನಟಿ ಅಮೂಲ್ಯ!

ಪತಿ ಜಗದೀಶ್ ಜೊತೆ ದೀಪ ಬೆಳಗಿಸುತ್ತಿರುವ ಅಮೂಲ್ಯ, ಹಳದಿ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತಾರೆ. 

Last Updated : Nov 8, 2018, 04:20 PM IST
VIDEO: ಪತಿಯೊಂದಿಗೆ ಮೊದಲ ದೀಪಾವಳಿ ಆಚರಿಸಿದ ನಟಿ ಅಮೂಲ್ಯ!  title=

ಬೆಂಗಳೂರು: ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಕನ್ನಡ ಚಿತ್ರ ರಂಗದ ಅಮುಲ್ ಬೇಬಿ ಎಂದೇ ಹೆಸರಾದವರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಪತಿ ಜಗದೀಶ್ ಜೊತೆ, ಮಾವನ ಜೊತೆ ರಾಜಕೀಯದಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. 

ಅಮೂಲ್ಯ ಅವರು ನಟಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ, ಮದುವೆಯ ನಂತರ ಯಾವುದೇ ಸಿನಿಮಾ ಮಾಡಿಲ್ಲ. ಆದಾಗ್ಯೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದ ಅಮೂಲ್ಯ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ದೀಪಾವಳಿ ಹಬ್ಬವನ್ನು ಪತಿಯೊಂದಿಗೆ ಆಚರಿಸಿದ ವೀಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪತಿ ಜಗದೀಶ್ ಜೊತೆ ದೀಪ ಬೆಳಗಿಸುತ್ತಿರುವ ಅಮೂಲ್ಯ, ಹಳದಿ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. 

ನಟಿ ಅಮೂಲ್ಯ-ಜಗದೀಶ್ ಅವರ ವಿವಾಹವು 2017ರ ಮೇ 12 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ನೆರವೇರಿತ್ತು. 

Trending News