Salaar Leaked Scene : ಸಲಾರ್ ಸೆಟ್‌ನಿಂದ ವಿಡಿಯೋ ಲೀಕ್‌! ಪ್ರಭಾಸ್‌ ಮಾಸ್ ಲುಕ್ ಹೀಗಿದೆ..

Salaar Leaked Scene : ಈ ಹಿಂದೆ ಸಲಾರ್ ಚಿತ್ರದ ಹಲವು ಫೋಟೋಗಳು ಮತ್ತು ಕೆಲವು ವಿಡಿಯೋಗಳು ಲೀಕ್ ಆಗಿದ್ದವು. ಇದೀಗ ಮತ್ತೊಮ್ಮೆ ಈ ಲೀಕೇಜ್ ಸಮಸ್ಯೆ ಸಲಾರ್ ತಯಾರಕರಿಗೆ ತಲೆನೋವಾಗಿ ಪರಿಣಮಿಸಿದೆ.

Written by - Chetana Devarmani | Last Updated : Sep 26, 2022, 01:27 PM IST
  • ಸಲಾರ್ ಸೆಟ್‌ನಿಂದ ವಿಡಿಯೋ ಲೀಕ್‌
  • ಹೀಗಿದೆ ನೋಡಿ ಪ್ರಭಾಸ್‌ ಮಾಸ್ ಲುಕ್
  • ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್
Salaar Leaked Scene : ಸಲಾರ್ ಸೆಟ್‌ನಿಂದ ವಿಡಿಯೋ ಲೀಕ್‌! ಪ್ರಭಾಸ್‌ ಮಾಸ್ ಲುಕ್ ಹೀಗಿದೆ.. title=
ಸಲಾರ್

Salaar Leaked Scene : ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್ ಚಿತ್ರದ ಶೂಟಿಂಗ್‌ ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆಯಿದೆ. ಕೆಜಿಎಫ್, ಕೆಜಿಎಫ್ 2 ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುಪಾಲು ಮುಗಿದಿದೆಯಂತೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ 12 ಸೆಟ್‌ಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಆದರೆ ಚಿತ್ರತಂಡ ಪ್ರಭಾಸ್ ಗಾಗಿ ಕಾಯುತ್ತಿದೆ.

ಇದನ್ನೂ ಓದಿ : Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!

ಆದರೆ ಇತ್ತೀಚೆಗಷ್ಟೇ ಈ ಚಿತ್ರದ ಲೀಕ್ ಆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಭಾಸ್ ತಮ್ಮ ಫಾಲೋವರ್ಸ್ ಜೊತೆ ನಿಂತು ಶೂಟಿಂಗ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಭಾಸ್ ಮತ್ತು ಸಲಾರ್ ಚಿತ್ರದ ಹಲವು ಫೋಟೋಗಳು ಮತ್ತು ಕೆಲವು ವಿಡಿಯೋಗಳು ಈಗಾಗಲೇ ಈ ಹಿಂದೆ ಲೀಕ್ ಆಗಿವೆ. ಇದೀಗ ಮತ್ತೊಮ್ಮೆ ಈ ಲೀಕೇಜ್ ಸಮಸ್ಯೆ ಸಲಾರ್ ತಯಾರಕರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್‌ನಲ್ಲಿ ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 

ಇದನ್ನೂ ಓದಿ : Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!

ಈ ಸಿನಿಮಾಗಳಲ್ಲದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆದಿ ಪುರುಷ, ಪ್ರಾಜೆಕ್ಟ್ ಕೆ, ಸ್ಪಿರಿಟ್ ಚಿತ್ರಗಳಲ್ಲಿಯೂ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಪ್ರಚಾರವೂ ನಡೆಯುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಮಾರುತಿ ಕಾಂಬಿನೇಷನ್ ನಲ್ಲಿ ತಯಾರಾಗಲಿರುವ ಸಿನಿಮಾದಲ್ಲಿ ಬಾಲಿವುಡ್ ನ ಹಿರಿಯ ನಾಯಕರೊಬ್ಬರು ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News