Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!

Bigg Boss Kannada Season 9 : ಬಿಗ್‌ ಬಾಸ್‌ ಮನೆಯಲ್ಲಿ 18 ಸ್ಪರ್ಧಿಗಳು ಲಾಕ್‌ ಆಗಿದ್ದು, ಮೊದಲ ದಿನ ಬಲು ರೋಚಕವಾಗಿತ್ತು. 

Written by - Chetana Devarmani | Last Updated : Sep 26, 2022, 10:37 AM IST
  • ಬಿಗ್‌ ಬಾಸ್‌ ಮನೆಯಲ್ಲಿ 18 ಸ್ಪರ್ಧಿಗಳು ಲಾಕ್‌
  • ಮೊದಲ ವಾರವೇ 12 ಮಂದಿ ನಾಮಿನೇಟ್
  • ಮೊದಲ ವಾರದಲ್ಲೇ ಯಾರಾಗ್ತಾರೆ ಔಟ್?
Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!  title=
ಬಿಗ್‌ ಬಾಸ್‌

Bigg Boss Kannada Season 9 : ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯಲಿದೆ. ಎಲ್ಲರೂ ಅಂತಿಮ ಹಂತದವರೆಗೆ ಸ್ಪರ್ಧಿಸಲು ಬಯಸುತ್ತಾರೆ. ಟ್ರೋಫಿ ಗೆಲ್ಲಲು ಎಲ್ಲರೂ ಪೈಪೋಟಿ ನಡೆಸುತ್ತಾರೆ. ಮೊದಲ ವಾರದಲ್ಲೇ ಎಲಿಮಿನೇಟ್ ಆಗಿಬಿಟ್ಟರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಎಲಿಮಿನೇಷನ್ ತಪ್ಪಿಸಲು ಸಾಧ್ಯವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿದೆ. ಇದರಲ್ಲಿ ಮೊದಲ ವಾರದಲ್ಲೇ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ. 18 ಮಂದಿ 18 ಸ್ಪರ್ಧಿಗಳು ಲಾಕ್‌ ಆಗಿದ್ದು, ಮೊದಲ ದಿನ ಬಲು ರೋಚಕವಾಗಿತ್ತು. ಅಚ್ಚರಿ ಎಂದರೆ ಮೊದಲ ವಾರದಲ್ಲಿ 12 ಮಂದಿ ನಾಮಿನೇಟ್ ಆಗಿದ್ದಾರೆ.

 

 

ಇದನ್ನೂ ಓದಿ : Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್‌ ಇಶ್ಯೂ ಇದೆ...!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಒಟ್ಟು 18 ಮಂದಿ ದೊಡ್ಮನೆ ಸೇರಿದ್ದಾರೆ. ಪ್ರತಿ ವಾರ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗುತ್ತದೆ. ನಿನ್ನೆ ಬಿಗ್‌ಬಾಸ್‌ ಮೊದಲ ದಿನ ಈ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯ, ಪ್ರಶಾಂತ್ ಸಂಬರಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಇತರ ಸ್ಪರ್ಧಿಗಳಾದ ರಾಕೇಶ್ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ ಸದ್ಯಕ್ಕೆ ಸೇಫ್ ಆಗಿದ್ದಾರೆ.

 

 

12 ಜನ ನಾಮಿನೇಟ್‌ ಆಗಿರುವ ಸ್ಪರ್ಧಿಗಳಿಗೆ ಈ ವಾರ ಅಗ್ನಿ ಪರೀಕ್ಷೆಯಂತೆ. ಒಂದೆಡೆ ಮನೆಯ ಇತರ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳುವ ಪ್ರಯತ್ನದ ಜೊತೆಗೆ ಈ ವಾರ ಕೊಡುವ ಟಾಸ್ಕ್‌ಗಳನ್ನು ಚೆನ್ನಾಗಿ ಮಾಡಬೇಕು. ಅಲ್ಲದೇ ತಮ್ಮ ಅಸ್ತಿತ್ವ ಉಳಿಸಕೊಳ್ಳಲು ಈ ವಾರ ಪೂರ್ತಿ 12 ಸ್ಪರ್ಧಿಗಳು ಹೋರಾಡಬೇಕಾಗುತ್ತದೆ. ಇತರ ಸ್ಪರ್ಧಿಗಳ ಜೊತೆ ಹೇಗೆ ವರ್ತಿಸಬೇಕು ಎಂಬುದು ಸಹ ಈ ವಾರ ನಾಮಿನೇಟ್‌ ಆದವರಿಗೆ ಬಹುಮುಖ್ಯವಾಗಿದೆ. ನೋಡುಗರಿಗೆ ಎಷ್ಟು ಮನರಂಜನೆ ಸಿಗುತ್ತದೆ ಎಂಬುದು ಕೂಡ ಇಲ್ಲಿ ಪರಿಗಣನೆಗೆ ಬರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಟವಾಡಲು ಎಲ್ಲ ಸ್ಪರ್ಧಿಗಳು ತಯಾರಾಗಿದ್ದಾರೆ. 

 

 

ಇದನ್ನೂ ಓದಿ : BBK9: ಶುರುವಾಯ್ತು ಅಸಲಿ ಆಟ! ಸಂಬರಗಿಗೆ ಎಡಗಾಲಲ್ಲಿ ಗುದ್ದಿ ಹೋಗ್ತೀನಿ ಎಂದ ಗುರೂಜಿ!

ಈ ಬಾರಿ ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಬಿಗ್ ಬಾಸ್ ನಲ್ಲಿ ಪರಿಚಯಿಸಲಾಗಿದೆ. ಹೊಸ ಕಂಟೆಸ್ಟಂಟ್‌ಗಳು ಮತ್ತು ಅನುಭವಿಗಳನ್ನು ಒಂದೇ ಮನೆಯಲ್ಲಿ ಬಿಡುವ ಮೂಲಕ ಬಿಗ್‌ ಬಾಸ್‌ ಆಟ ಶುರುವಾಗಿದೆ. ಮೊದಲ ದಿನ ನಡೆದ ಟಾಸ್ಕ್ ನಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ವಿನೋದ್ ಗೊಬ್ಬರ್ಗಾಲ ಗೆಲುವು ಸಾಧಿಸಿದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News