Tamannaah: ತಮನ್ನಾ ತೊಡೆ ಮೇಲೆ ವಿಜಯ್‌ ವರ್ಮಾ... ಹಾಟ್‌ ಫೋಟೋಸ್‌ ವೈರಲ್!

Vijay Varma Tamannaah Bhatia : ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ರೋಮ್ಯಾಂಟಿಕ್‌ ಫೋಟೋಸ್‌ ಕಂಡು ಅವರ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಈ ಫೋಟೋದಲ್ಲಿ ವಿಜಯ್‌ ವರ್ಮಾ, ತಮನ್ನಾ ತೊಡೆಯ ಮೇಲೆ ಮಲಗಿದ್ದಾರೆ.   

Written by - Chetana Devarmani | Last Updated : Jun 18, 2023, 03:43 PM IST
  • ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ
  • ರೋಮ್ಯಾಂಟಿಕ್‌ ಫೋಟೋಸ್‌ ವೈರಲ್‌
  • ತಮನ್ನಾ ತೊಡೆ ಮೇಲೆ ವಿಜಯ್‌ ವರ್ಮಾ
Tamannaah: ತಮನ್ನಾ ತೊಡೆ ಮೇಲೆ ವಿಜಯ್‌ ವರ್ಮಾ... ಹಾಟ್‌ ಫೋಟೋಸ್‌ ವೈರಲ್!  title=

Lust Stories 2: ಲಸ್ಟ್ ಸ್ಟೋರೀಸ್ 2 ಗಾಗಿ ಗ್ಲಾಮರಸ್ ಫೋಟೋ ಶೂಟ್‌ನಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಮಿಂಚಿದ್ದಾರೆ. ಈ ರೋಮ್ಯಾಂಟಿಕ್‌ ಫೋಟೋಸ್‌ ಕಂಡು ಅವರ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ವಿಚಾರ್ವನ್ನು ಇತ್ತೀಚೆಗೆ ಖಚಿತಪಡಿಸಿದರು. ಲಸ್ಟ್ ಸ್ಟೋರೀಸ್ 2 ನಲ್ಲಿ ವಿಜಯ್‌ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ನಟಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನ್ಯೂ ಇಯರ್‌ ಪಾರ್ಟಿಯಲ್ಲಿ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆಗ ತಮನ್ನಾ ಮತ್ತು ವಿಜಯ್ ಡೇಟಿಂಗ್‌ ವದಂತಿಗಳು ಶುರುವಾದವು. ಆಗ ಇಬ್ಬರೂ ಆ ಬಗ್ಗೆ ಮಣವ ಮುರಿದಿರಲಿಲ್ಲ. ಇತ್ತೀಚೆಗೆ ಇಬ್ಬರೂ ಸಹ ತಮ್ಮ ಪ್ರೇಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಜೂ. 30ಕ್ಕೆ ತೆರೆಗೆ ಬರ್ತಿದೆ ಮಹಿಳಾ ಪ್ರಧಾನ ಚಿತ್ರ ‘ನಾನು ಕುಸುಮ’

ಶನಿವಾರ ನೆಟ್‌ಫ್ಲಿಕ್ಸ್ ಇಂಡಿಯಾದ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ನಾಲ್ಕು ಫೋಟೋಗಳನ್ನು ಶೇರ್ ಮಾಡಲಾಗಿದೆ. ಮೊದಲ ಚಿತ್ರದಲ್ಲಿ, ವಿಜಯ್ ವರ್ಮಾ ಅವರ ಮುಖವನ್ನು ತಮನ್ನಾ ಭಾಟಿಯಾ ಅವರ ಹಿಮ್ಮಡಿಗಳ ಪಕ್ಕದಲ್ಲಿ ಇರಿಸಲಾಗಿದೆ. ಈ ಫೋಟೋದಲ್ಲಿ ವಿಜಯ್‌ ವರ್ಮಾ, ತಮನ್ನಾ ತೊಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಫೋಟೋಶೂಟ್‌ಗಾಗಿ, ವಿಜಯ್ ಕಪ್ಪು ಬ್ಲೇಜರ್ ಮತ್ತು ಬೂದು ಬಣ್ಣದ ಶರ್ಟ್ ಅನ್ನು ಧರಿಸಿದ್ದು, ತಮನ್ನಾ ಕಪ್ಪು ಗೌನ್‌ ಹಾಕಿದ್ದಾರೆ. ಲೈಟ್ ಮೇಕ್ಅಪ್‌ನಲ್ಲಿ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Netflix India (@netflix_in)

 

ನೆಟ್‌ಫ್ಲಿಕ್ಸ್ ತನ್ನ ಹಿಟ್ ವೆಬ್‌ ಸಿರೀಸ್ ಲಸ್ಟ್ ಸ್ಟೋರೀಸ್‌‌ ಎರಡನೇ ಭಾಗವನ್ನು ಜೂನ್ 29 ರಂದು ರಿಲೀಸ್‌ ಮಾಡಲಿದೆ. ಇದು ನಾಲ್ಕು ಹೊಸ ಕಥೆಗಳನ್ನು ಒಟ್ಟುಗೂಡಿಸುತ್ತದೆ. ಇದನ್ನು ನಾಲ್ಕು ಚಲನಚಿತ್ರ ನಿರ್ಮಾಪಕರು ನಿರ್ದೇಶಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ವರ್ಮಾ, ಕಾಜೋಲ್, ನೀನಾ ಗುಪ್ತಾ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: "ಕಿಸ್​ ಮಾಡಿ, ಪ್ಯಾಂಟ್ ಬಿಚ್ಚು ಅಂದ್ರು ಆ ಡೈರೆಕ್ಟರ್‌" : ಖ್ಯಾತ ನಟನಿಗೂ ಕಾಸ್ಟಿಂಗ್‌ ಕೌಚ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News