Vikrant Rona: ನಾಳೆ ಮತ್ತೊಂದು ಸಾಂಗ್‌ ರಿಲೀಸ್‌.. ಇಲ್ಲಿದೆ ʻಹೇ ಫಕೀರಾʼ ಗ್ಲಿಂಪ್ಸ್

Vikrant Rona: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರರಾಗಿದ್ದಾರೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ಮತ್ತೊಂದು ಹಾಡು ನಾಳೆ ರಿಲೀಸ್‌ ಆಗಲಿದೆ. 

Written by - Chetana Devarmani | Last Updated : Jul 11, 2022, 04:56 PM IST
  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ
  • ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರ
  • ಈ ಸಿನಿಮಾದ ಮತ್ತೊಂದು ಹಾಡು ನಾಳೆ ರಿಲೀಸ್‌ ಆಗಲಿದೆ
Vikrant Rona: ನಾಳೆ ಮತ್ತೊಂದು ಸಾಂಗ್‌ ರಿಲೀಸ್‌.. ಇಲ್ಲಿದೆ ʻಹೇ ಫಕೀರಾʼ ಗ್ಲಿಂಪ್ಸ್  title=
ವಿಕ್ರಾಂತ್‌ ರೋಣ 

Vikrant Rona: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರರಾಗಿದ್ದಾರೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ಮತ್ತೊಂದು ಹಾಡು ನಾಳೆ ರಿಲೀಸ್‌ ಆಗಲಿದೆ. 

ಇದನ್ನೂ ಓದಿ: Vikrant Rona: ಆಪರೇಷನ್‌ ಥಿಯೇಟರ್‌ನಲ್ಲೂ ರಕ್ಕಮ್ಮನದ್ದೇ ಹವಾ!

ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೀಗ ಈ ಸಿನಿಮಾದ ಮೂರನೇ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಲಿದೆ. ʻಹೇ ಫಕೀರಾʼ ಲಿರಿಕಲ್‌ ಸಾಂಗ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. 

 

 

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.  

'ವಿಕ್ರಾಂತ್‌ ರೋಣ' ಸಿನಿಮಾ ಹವಾ ಎಲ್ಲೆಲ್ಲೂ ಹಬ್ಬಿದ್ದು, ಈಗಾಗಲೇ ಎರಡು ಸಾಂಗ್‌ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿ ಯುಟ್ಯೂಬ್‌ ಟ್ರೆಂಡ್‌ ಆಗಿವೆ. ಇದೀಗ ಸಿನಿಮಾದ ಮೂರನೇ ಲಿರಿಕಲ್‌ ಸಾಂಗ್‌ ನಾಳೆ ಸಂಜೆ 5:02 ಕ್ಕೆ ಬಿಡುಗಡೆಯಾಗಲಿದೆ. ಇಂದು ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದಾರೆ. 

ಇದನ್ನೂ ಓದಿ: Kiccha Sudeep: ಮುದ್ದಾದ ಶ್ವಾನದ ಜೊತೆ ಕಿಚ್ಚ ಸುದೀಪ್‌ ಆಟ, ಇಲ್ಲಿದೆ ಕ್ಯೂಟ್‌ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News