Kiccha Sudeep: ನಟ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಎಲ್ಲಾ ಭಾಷೆಗಳಲ್ಲಿಯೂ ಗ್ರ್ಯಾಂಡ್ ಆಗಿ ಲಾಂಚ್ ಆಗಿತ್ತು.
ಇದನ್ನೂ ಓದಿ: Yash: ಸೋಷಿಯಲ್ ಮೀಡಿಯಾದಲ್ಲಿ #Yash19 ಟ್ರೆಂಡಿಂಗ್.! ಏನಿದು?
ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟ್ರೇಲರ್ ನೋಡಿದ ಜನರಿಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಆಗಿದ್ದೇನೋ ಸತ್ಯ. ಆದರೆ ಅದರ ಜೊತೆಗೆ ಸಿನಿಮಾದಲ್ಲಿರುವ ಟ್ವಿಸ್ಟ್‌ಗಳ ಬಗ್ಗೆ ತಲೆಗೆ ಹುಳ ಬಿಟ್ಟಿದೆ. 3ಡಿ ಅಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಲಿದೆ.
ಇದೀಗ ಸುದೀಪ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸುದೀಪ್ ಮುದ್ದಾದ ಶ್ವಾಮನದ ಜೊತೆ ಆಡುತ್ತಿದ್ದಾರೆ. ಈ ವಿಡಿಯೋ ಕಂಡು ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪುಟ್ಟ ಬಾಲ್ ಹಿಡಿದುಕೊಂಡು ಅದರ ಜೊತೆ ನಾಯಿಯೊಂದಿಗೆ ಕಿಚ್ಚ ಸುದೀಪ್ ಆಡುವ ದೃಶ್ಯ ತುಂಬಾ ಕ್ಯೂಟ್ ಆಗಿದೆ.
This is how cute to see Kiccha Boss Playing with pet😍@KicchaSudeep #KicchaSudeep #VikrantRonaJuly28 #VikrantRona pic.twitter.com/LTrmWyFgOV
— Bidar Kiccha FC (@Bidar_kiccha) July 11, 2022
ಭುರ್ಜ್ ಖಲೀಫಾದಿಂದ ಶುರುವಾದ ವಿಕ್ರಾಂತ್ ರೋಣನ ಹವಾ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಚಿತ್ರತಂಡ ಭರ್ಜರಿ ಪ್ರಮೋಷನ್ ಕೂಡ ಆರಂಭಿಸಿದೆ. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಈಗಾಗಲೇ ರಿಲೀಸ್ ಆದ ಹಾಡು, ಟ್ರೈಲರ್ ಮೂಲಕ ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಭಾರತ ಸಿನಿರಂಗದ ಖ್ಯಾತ ನಾಮರು ವಿಕ್ರಾಂತ್ ರೋಣನಿಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: Kiccha Sudeep: ನಟ ಸುದೀಪ್ ಕಾಲಿಗೆ ಪೆಟ್ಟು.. ಉಪೇಂದ್ರ ಅವರಿಗೆ ಕ್ಷಮೆ ಕೇಳಿದ ಕಿಚ್ಚ
ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್ ಡಿಕೋಸ್ಟ ಉರ್ಫ್ ಗಡಂಗ್ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಜುಲೈ 28 ರಂದು ಬಿಡುಗಡೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.