Vikrant Rona Release Date: ಫೆ.24ರಂದು ಬಿಡುಗಡೆಯಾಗಲಿದೆ ಸುದೀಪ್​ ನಟನೆಯ ಬಹುನಿರೀಕ್ಷಿತ ಚಿತ್ರ

Vikrant Rona Release Date: ಬಾದ್ ಷಾ ಅಭಿಮಾನಿಗಳ ಕಾತುರಕ್ಕೆ ಇಂದು ತೆರೆಬಿದ್ದಿದೆ. ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವಾದ 'ವಿಕ್ರಾಂತ್ ರೋಣ' ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಹೇಳಿದ್ದಾರೆ.

Edited by - ZH Kannada Desk | Last Updated : Dec 7, 2021, 02:07 PM IST
  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ
  • 'ವಿಕ್ರಾಂತ್ ರೋಣ' ರಿಲೀಸ್ ದಿನಾಂಕ ಪ್ರಕಟಿಸಿದ ಚಿತ್ರತಂಡ
  • 2022ರ ಫೆ.24ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಚಿತ್ರ
Vikrant Rona Release Date: ಫೆ.24ರಂದು ಬಿಡುಗಡೆಯಾಗಲಿದೆ ಸುದೀಪ್​ ನಟನೆಯ ಬಹುನಿರೀಕ್ಷಿತ ಚಿತ್ರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ದಿನಾಂಕದ (Vikrant Rona Release Date)ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದರು.  ಕಿಚ್ಚನ ಅಭಿಮಾನಿಗಳಿಗೆ ಇಂದು ವಿಶೇಷ ದಿನವಾಗಿದೆ. 'ವಿಕ್ರಾಂತ್ ರೋಣ' ರಿಲೀಸ್ ದಿನಾಂಕ ಪ್ರಕಟಗೊಂಡಿದೆ. 

ಬಾದ್ ಷಾ ಅಭಿಮಾನಿಗಳ ಕಾತುರಕ್ಕೆ ಇಂದು ತೆರೆಬಿದ್ದಿದೆ. ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವಾದ 'ವಿಕ್ರಾಂತ್ ರೋಣ' ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಹೇಳಿದ್ದಾರೆ.

 

 

ಚಿತ್ರಕ್ಕಾಗಿ ಸುದೀಪ್​ ವಿಭಿನ್ನ ಅವತಾರ ತಾಳಿದ್ದಾರೆ. 'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಆ್ಯಕ್ಷನ್​-ಕಟ್​ ಹೇಳಿದ್ದು, ಜಾಕ್​ ಮಂಜುನಾಥ್​ ಹಾಗೂ ಅಲಂಕಾರ್​ ಪಾಂಡಿಯನ್​ ನಿರ್ಮಾಣ ಮಾಡಿದ್ದಾರೆ.  ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.  

ಚಿತ್ರತಂಡದಿಂದ ಇದೀಗ ರಿಲೀಸ್​ ದಿನಾಂಕ (Vikrant Rona Release Date) ಕೂಡ ಘೋಷಣೆ ಮಾಡಿದೆ. 2022ರ ಫೆ.24ರಂದು ವಿಶ್ವಾದ್ಯಂತ 'ವಿಕ್ರಾಂತ್​ ರೋಣ' ಬೆಳ್ಳಿ ಪರದೆ ಮೇಲೆ ಮಿಂಚಲಿದೆ. ಈ ವಿಚಾರವನ್ನು ಕಿಚ್ಚ ಸುದೀಪ್​ ಮತ್ತು ಚಿತ್ರತಂಡದವರು ಸೋಷಿಯಲ್​ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.

ದಟ್ಟ ಕಾನನದ ಮಧ್ಯೆ ಬರುವ ಚಿತ್ರದ ರಿಲೀಸ್​ ದಿನಾಂಕ ಮತ್ತು  ಕಿಚ್ಚ ಸುದೀಪ್​ (Kichcha Sudeep) ಅವರು ಬೈಕ್​ ಏರಿ ಖಡಕ್​ ಪೋಸ್​ ನೀಡಿರುವ ವಿಡಿಯೋದ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ವಿಡಿಯೋಗೆ "2022ರ ಫೆ.24ರಂದು ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ" ಎಂಬ ಕ್ಯಾಪ್ಷನ್​  ನೀಡಿದ್ದು, ಎಲ್ಲರ ಗಮನಸೆಳೆಯುತ್ತಿದೆ.

 

 

ಹೈದರಾಬಾದ್‌, ಕೇರಳದಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ 'ವಿಕ್ರಾಂತ್ ರೋಣ'.  ವಿಕ್ರಾಂತ್ ರೋಣವನ್ನು 3ಡಿ ರೂಪದಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ಬಹುತಾರಾಗಣದ ಈ ಸಿನಿಮಾದಲ್ಲಿ ವಿಭಿನ್ನ ಅವತಾರದಲ್ಲಿ 'ಕಿಚ್ಚ'ನನ್ನು ತೆರೆ ಮೇಲೆ ನೋಡುವುದಕ್ಕೆ ಅಬಿಮಾನಿಗಳು ಕಾತುರರಾಗಿದ್ದಾರೆ. 

More Stories

Trending News