ನವದೆಹಲಿ: ನಟಿಯರು ವಿವಾಹವಾದ ಬಳಿಕ ಅವರ ವೃತ್ತಿ ಜೀವನ ಕೊನೆಗೊಳ್ಳುವ ಒಂದು ಕಾಲ ಇತ್ತು. ಆದರೆ ಈ ದಿನಗಳಲ್ಲಿ ಅನೇಕ ಜನಪ್ರಿಯ ಬಾಲಿವುಡ್ ನಟಿಯರು ಮದುವೆಯ ಬಂಧದೊಳಗೆ ಬಂಧಿಸಲ್ಪಟ್ಟಿದ್ದಾರೆ. ಅನುಷ್ಕಾ, ಸೋನಮ್ ಕಪೂರ್ ಇತ್ತೀಚೆಗೆ ವಿವಾಹವಾದ ದೀಪಿಕಾ ಪಡುಕೋಣೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿರುವ ಪ್ರಿಯಾಂಕಾ ಚೋಪ್ರಾ ಈ ಪಟ್ಟಿಯಲ್ಲಿದ್ದಾರೆ. ಆದರೆ ಈ ಮೊದಲ ಹೆಸರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದದ್ದು ಕರೀನಾ ಕಪೂರ್. ಅವರು ಸೈಫ್ ಅಲಿ ಖಾನ್ ಅವರ ಬೇಗಂ ಆದರು. ಬಾಲಿವುಡ್ನ ಜನಪ್ರಿಯ ಮತ್ತು ಯಶಸ್ವಿ ನಟಿ ಕರೀನಾ ಕಪೂರ್ ಮದುವೆಯ ನಂತರವೂ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಸಕ್ರಿಯ ಮತ್ತು ಅತ್ಯಂತ ಯಶಸ್ವಿಯಾಗಿದ್ದಾರೆ.
ಕರೀನಾ ತನ್ನ ವೃತ್ತಿಜೀವನ ಮತ್ತು ಮದುವೆಯನ್ನು ಎರಡರ ಬಗ್ಗೆಯೂ ನಿರ್ಧರಿಸಲು ಸುಲಭವಾಗಿರಲಿಲ್ಲ. ಕರೀನಾ ಮದುವೆಯಾಗಲು ತೀರ್ಮಾನಿಸಿದಾಗ, ಅನೇಕ ಜನರು ಆಕೆಗೆ ಮದುವೆಯಾಗಬೇಡ ಎಂದು ಸಲಹೆ ನೀಡಿದ್ದೂ ಇದೆಯಂತೆ. "ನಾನು ಯಾವಾಗಲೂ ನನ್ನ ಹೃದಯವನ್ನು ಕೇಳಿರುತ್ತೇನೆ" ಎಂದು ಕರೀನಾ ಹೇಳಿದರು. ನನ್ನ ಮದುವೆಯ ಪ್ರಸ್ತಾಪವಾದಗಲೆಲ್ಲ ಅನೇಕ ಜನರು ನನ್ನನ್ನು ಮದುವೆಯಾಗಬೇಡಿ, ನಿಮ್ಮ ವೃತ್ತಿ ಕೊನೆಗೊಳ್ಳುತ್ತದೆ, ನಿರ್ಮಾಪಕರು ನಿನ್ನೊಂದಿಗೆ ಯಾವುದೇ ಸಿನಿಮಾಗಾಗಿ ಸಹಿ ಮಾಡಿಸಿಕೊಳ್ಳುವುದಿಲ್ಲ, ನಿಮಗೆ ಯಾವುದೇ ಕೆಲಸ ಸಿಗುವುದಿಲ್ಲ" ಎನ್ನುತ್ತಿದ್ದರು.
ಆದರೆ "ಮದುವೆಯ ನಂತರ ನಾನು ಈಗ ಹೆಚ್ಚು ಕೆಲಸ ಪಡೆಯುತ್ತಿದ್ದೇನೆ, ಕೆಲವೊಮ್ಮೆ ನಾನು ಕೆಲವನ್ನು ಕೈಬಿಟ್ಟಿದ್ದೇನೆ. ನಾನು ಹೆಚ್ಚು ಕೆಲಸ ಮಾಡುವುದಿಲ್ಲ. ಹಾಗಾಗಿ ನಾನು ಯಾವಾಗಲೂ ಮಾಡಲು ಬಯಸಿದ್ದನ್ನು ಮಾಡುತ್ತಿದ್ದೇನೆ, ಯಾರನ್ನೂ ನಾನು ಕೇಳುವುದಿಲ್ಲ" ಎಂದು ವಿವರಿಸಿದರು.
ಯಶಸ್ವೀ ನಟಿಯಾಗಿರುವ ಕರೀನಾ ಕಪೂರ್ ಈಗ ರೇಡಿಯೊದಲ್ಲಿ ಪಾಲ್ಗೊಳ್ಳಲು ತಯಾರಿ ಮಾಡುತ್ತಿದ್ದಾರೆ. 104.8 ಎಫ್ಎಂ ಶೋ 'ವಾಟ್ ವುಮೆನ್ ವಾಂಟ್' ನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕರೀನಾ ಮಾತನಾಡಲಿದ್ದಾರೆ. "ನಾನು ಎಂದಿಗೂ ರೇಡಿಯೊದಲ್ಲಿ ಬಂದಿಲ್ಲವೆಂದು ನಾನು ಯೋಚಿಸುತ್ತಿದ್ದೆ. ನಾನು ಎಂದಿಗೂ ರೇಡಿಯೋ ಜಾಕಿಯಾಗಿಲ್ಲ, ನಾನು ಬಹಳ ನರ್ವಸ್ ಆಗಿದ್ದೆ, ಆದರೆ ನಾನು ಈ ಪರಿಕಲ್ಪನೆಯನ್ನು ಕೇಳಿದಾಗ, ಇದು ಸರಿಯಾದ ಅವಕಾಶ ಎಂದು ನಾನು ಭಾವಿಸಿದೆ. ಈ ರೀತಿಯ ವಿಷಯವನ್ನು ಯಾಕೆ ಪ್ರಯತ್ನಿಸಬಾರದು ಎಂದೆನಿಸಿತು" ಎಂದು ಕರೀನಾ ತಮ್ಮ ಭಾವನೆಗಳನ್ನು ಹಂಚಿಕೊಂಡರು.
#KareenaKapoor dancing on bole chudiya at the launch of her debut radio show #WhatWomenWant on @IshqFM pic.twitter.com/3dWiYzZ9AX
— Bhawna Munjal (@bhawnamunjal) November 20, 2018
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕರೀನಾ, "ಇದು ನನಗೆ ಹೊಸದು, ಆದರೆ ಇವುಗಳ ಬಗ್ಗೆ ಮಾತನಾಡಬೇಕು ಈ ವಿಷಯಗಳ ಬಗ್ಗೆ ಚರ್ಚೆ ಮುಖ್ಯವಾಗಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಖುಷಿಯಿಂದಿದ್ದೇನೆ. ಏಕೆಂದರೆ ನಾನು ಯಾವಾಗಲೂ ಈ ಬಗ್ಗೆ ಮಾತನಾಡುತ್ತಿದ್ದೆ. ಈ ಬಗ್ಗೆ ನನಗೆ ಬಲವಾದ ಅಭಿಪ್ರಾಯಗಳಿವೆ ಮತ್ತು ಈಗ ಮಹಿಳೆಯರಿಗಾಗಿ ಮಾತನಾಡುವ ಸಮಯ ಬಂದಿದೆ" ಎಂದರು.