ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಈ ವ್ಯವಸ್ಥೆಯಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಾಗಲೇ ವ್ಯವಸ್ಥೆಯಲ್ಲಿ ಒಂದು ಜವಾಬ್ದಾರಿ ಬರುತ್ತದೆ. ಹಾಗಾಗಿ ಎಲ್ಲರೂ ಮತದಾನ ಮಾಡಿ ಎಂದು ಯಶ್ ಹೇಳಿದ್ದಾರೆ.

Updated: Apr 18, 2019 , 06:10 PM IST
ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಬೆಂಗಳೂರು: ನಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ನಮ್ಮ ಅಸ್ತಿತ್ವವನ್ನು ನಾವು ಸಾಬೀತುಪಡಿಸಬೇಕು ಎಂದು ನಟ ಯಶ್ ಹೇಳಿದ್ದಾರೆ.

ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಕೆಲವರು ಯಾರಿಗೆ ವೋಟ್ ಮಾಡುವುದು, ನಮಗೆ ಯಾರೂ ಉತ್ತಮ ಅಭ್ಯರ್ಥಿ ಎನಿಸಿಲ್ಲ ಎಂದು ಹೇಳುತ್ತಾರೆ. ಆದರೆ ಮೊದಲು ಮತ ಚಲಾಯಿಸಿ. ನಂತರ ಅವರ ಕೈಯಲ್ಲಿ ಯಾವ ರೀತಿ ಕೆಲಸ ಮಾಡಿಸಬೇಕು ಎಂಬುದನ್ನು ನಿರ್ಧರಿಸಿ. ಯಾರೂ ಸಹ ಕೆಲಸ ಮಾಡಲ್ಲ ಅಂತಾ ಸುಮ್ಮನೆ ಕುಳಿತುಕೊಳ್ಳಬಾರದು. ಈ ವ್ಯವಸ್ಥೆಯಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಾಗಲೇ ವ್ಯವಸ್ಥೆಯಲ್ಲಿ ಒಂದು ಜವಾಬ್ದಾರಿ ಬರುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡುತ್ತಾ, ನಾವು ಯಾರನ್ನೇ ಪ್ರಶ್ನೆ ಮಾಡುವುದಕ್ಕೂ ಮೊದಲು ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡಬೇಕು. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ದಯವಿಟ್ಟು ಎಲ್ಲರೂ ಹೋಗಿ ಮತದಾನ ಮಾಡಿ ಎಂದು ಯಶ್ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆ ಮತದಾನ ಮಾಡಿರುವ ಪೋಟೋವೊಂದನ್ನು ಶೇರ್ ಮಾಡಿದ್ದಾರೆ.