Weekend With Ramesh : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕೊನೆಗೊಂಡಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಕಲರ್‌ಫುಲ್ ರಾಜಕಾರಣಿ ಡಿ ಕೆ ಶಿವಕುಮಾರ್ ಅವರ ಎಪಿಸೋಡ್‌ನೊಂದಿಗೆ ಸೀಸನ್ 5 ಕೊನೆಯಾಗಿದೆ. ಹಲವಾರು ಸಾಧಕರು, ಅವರ ಜೀವನ ನಡೆದು ಬಂದ ಹಾದಿ, ಅವರ ಸ್ಫೂರ್ತಿದಾಯಕ ಮಾತು, ಎಲ್ಲವೂ ಪ್ರೇಕ್ಷಕರ ಮನಸ್ಸಿನಲ್ಲಿ ಉತ್ಸಾಹದ ಜೊತೆಗೆ ಜೀವನದ ಸತ್ಯವನ್ನು ತಿಳಿಸಿವೆ.
ಮೋಹಕತಾರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ವೀಕೆಂಡ್ ವಿಥ್ ರಮೇಶ್ ಸೀಸನ್ 5ನಲ್ಲಿ ಮೊದಲನೆ ಸಾಧಕರು. ಕೊನೆಯಲ್ಲಿ ಕರ್ನಾಟಕದ ಪ್ರಭಾವಿ ನಾಯಕ ಎಲ್ಲರು ಕನಕಪುರ ಬಂಡೆ ಎಂದು ಕರೆಯುವ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶೀವಕುಮಾರ್ ಸಾಧಕರ ಕುರ್ಚಿಯಲ್ಲಿ ಆಸೀನರಾಗಿದ್ದರು. ಅವರು ತಮ್ಮ ಜೀವನದ ಸಿಹಿ ಕಹಿಯಾದ ಘಟನೆಗಳನ್ನು ಹಂಚಿಕೊಂಡಿದ್ದು, ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗಿನ ಅವರ ಜೀವನದ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ-Bollywood Actors : ಇವ್ರೆ ನೋಡಿ ಅಂತರರಾಷ್ಟ್ರೀಯ ಟಾಕ್ ಶೋಗಳಲ್ಲಿ ʼಸೈ ಎನಿಸಿಕೊಂಡ ಬಾಲಿವುಡ್ ಸ್ಟಾರ್ಸ್..!
ಬಾಲ್ಯದ ದಿನಗಳ ಕುರಿತು ಮಾತನಾಡಿರುವ ಡಿ ಕೆ ಶಿವಕುಮಾರ್ ಅವರು ಒಟ್ಟು ಮೂರು ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಹುಟ್ಟಿದ್ದು ಕನಕಪುರದಲ್ಲಾದರೂ ಅವರು ಓದಿದ್ದು ಬೆಂಗಳೂರಿನಲ್ಲಿ. ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಾರ್ಮೆಲ್ ಹೈಸ್ಕೂಲ್ ಮತ್ತು ವಿದ್ಯಾವರ್ಧಕ ಶಾಲೆಗಳಲ್ಲಿ ಡಿಕೆ ಶಿವಕುಮಾರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ.
ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಡಿ ಕೆ ಶಿವಕುಮಾರ್ ಅವರು ಆರನೇ ತರಗತಿಯಲ್ಲಿಯೇ ಚುನಾವಣೆಯಲ್ಲಿ ಸ್ಫರ್ಧಿಸಿ ಗೆದ್ದಿದ್ದರು. ತಾವು ಐಸ್ ಕ್ಯಾಂಡಿ ಮಾರುವವನ ಹತ್ತಿರ ಭಾಷಣ ಬರೆಸಿಕೊಂಡು ಅದೇ ಭಾಷಣದಿಂದ ವೋಟ್ ಪಡೆದುಕೊಂಡಿದ್ದನ್ನು ಮೆಲುಕುಹಾಕಿದ್ದಾರೆ. ಜೊತೆಗೆ ಶಾಲಾ ಚುನಾವಣೆಯ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ-Darling Krishna : ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ!
ತಮ್ಮ ಜೀವನದ ಸಿಹಿ ಕಹಿ ಮತ್ತು ಬಾಲ್ಯದ ದಿನಗಳನ್ನು ರಿಕಾಲ್ ಮಾಡಿಕೊಂಡ ಡಿ ಕೆ ಶಿವಕುಮಾರ್ ಅವರು ತಮ್ಮ ಹೆಂಡತಿ, ಮಕ್ಕಳು, ತಮ್ಮ, ತಾಯಿ ತಂದೆಯ ಕುರಿತು ಹಲವಾರು ವಿಚಾರಗಳ ಬಗ್ಗೆ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಚತುರ ಎಂದು ಅಂದೇ ಕರೆಸಿಕೊಂಡವರು. ಇವರ ಬಗ್ಗೆ ಸಿಎಂ ಸಿದ್ದರಾಮಯ್ಯ, ಹಾಗೂ ಮಾಜಿ ಸಿ ಎಂ ಕೃಷ್ಣ ಸೇರಿದಂತೆ ಹಲವಾರು ದಿಗ್ಗಜರು ಮಾತನಾಡಿದ್ದಾರೆ. ಇದೇ ಸಂಚಿಕೆಯ ಮೂಲಕ ವೀಕೆಂಡ್ ವಿಥ್ ರಮೇಶ್ ಸೀಸನ್ 5 ಮುಕ್ತಾಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಸೀಸನ್ ಶುರುವಾಗುವ ನಿರೀಕ್ಷೆಯಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.