ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಏನಂದ್ರೂ ಅನುರಾಗ್ ಕಶ್ಯಪ್?

ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಕಾಂಬೋದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿತ್ತು. 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೊದಲು ಮೂರು ದಿನಗಳಲ್ಲಿಗಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಇದೀಗ ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಅನುರಾಗ್ ಕಶ್ಯಪ್ ಮೆಚ್ಚಿಕೊಂಡಿದ್ದಾರೆ.

Written by - Zee Kannada News Desk | Last Updated : Jan 27, 2022, 09:56 PM IST
  • ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಕಾಂಬೋದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ.
  • ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿತ್ತು
ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಏನಂದ್ರೂ ಅನುರಾಗ್ ಕಶ್ಯಪ್? title=

ಬೆಂಗಳೂರು: ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಕಾಂಬೋದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿತ್ತು. 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೊದಲು ಮೂರು ದಿನಗಳಲ್ಲಿಗಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಇದೀಗ ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಅನುರಾಗ್ ಕಶ್ಯಪ್ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ನನಸಾಯ್ತು ಅಭಿಮಾನಿಗಳ ಕನಸು..! ʼಜೇಮ್ಸ್‌ʼ ಚಿತ್ರದಲ್ಲಿ ಅಣ್ಣಾವ್ರ ಮಕ್ಕಳ ಸಮ್ಮಿಲನ..!

ಗಮನ ವೃಷಭ ವಾಹನ ಸಿನಿಮಾ ಚಿತ್ರಪ್ರೇಮಿಗಳು ಮಾತ್ರ ಸಿನಿಮಾರಂಗದ ಸೆಲೆಬ್ರಿಟಿಗಳಿಗೂ ಇಷ್ಟವಾಗಿದೆ.ಗಮನ ಗಮನ ವೃಷಭ ವಾಹನ ಸಿನಿಮಾವನ್ನು‌ ಅನುರಾಗ್ ಮನಸಾರೆ ಹಾಡಿಹೊಗಳಿದ್ದಾರೆ. ರಾಜ್ ಬಿ ಶೆಟ್ಟಿ ನನ್ನ ನೆಚ್ಚಿನ‌ ನಿರ್ದೇಶಕ. ನ್ಯೂ ಫೇವರೆಟ್ ಫಿಲ್ಮ್ ಮೇಕರ್ ಎಂದಿರುವ ಅನುರಾಗ್ ಕಶ್ಯಪ್, ಅಂಗಮಲಿ ಡೈರೀಸ್, ಪರುತಿವೀರನ್ ಈ ಜಾನರ್ ನಲ್ಲಿ ಮೂಡಿ ಬಂದಿರುವ ಗರುಡು ಗಮನ ವೃಷಭ ವಾಹನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಕನ್ನಡದ ಒಟಿಟಿ‌ ಫ್ಲಾರ್ಟ್ ಫಾರಂ ಜೀ 5ನಲ್ಲಿರುವ GGVV ಸಿನಿಮಾವನ್ನು ಪ್ರತಿಯೊಬ್ಬರೂ ನೋಡಿ. ಗ್ಯಾಂಗ್ ಕಥೆಯಾಧಾರಿತ ಸಿನಿಮಾವಾಗಿರುವ ಗರುಡ ಗಮನ ವೃಷಭ ವಾಹನ ಸಿನಿಮಾದ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಹೇಳಿದ್ದೆ. ಪ್ರತಿಯೊಬ್ಬರಿಗೂ ಸಿನಿಮಾ ನೋಡುವಂತೆ ತಿಳಿಸಿದ್ದೇ ಎಂದಿದ್ದಾರೆ.

ಇದನ್ನೂ ಓದಿ: Suraj Nambiar ಜೊತೆ ಸಪ್ತಪದಿ ತುಳಿದ Mouni Roy, ವಿವಾಹದ ವಿಡಿಯೋ ಇಲ್ಲಿದೆ

ಅನುರಾಗ್ ಕಶ್ಯಪ್ ಅವರಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಇಷ್ಟಪಟ್ಟಿದ್ದರು.ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಎಂಟ್ರಿ ಕೊಟ್ಟಿದ್ದ ಗಮನ ವೃಷಭ ವಾಹನ ಸಿನಿಮಾ ಥಿಯೇಟರ್ ನಲ್ಲೂ ಧೂಳ್ ಎಬ್ಬಿಸಿತ್ತು.ಈಗ ಜೀ5 ಒಟಿಟಿಯಲ್ಲಿ ಧಮಾಲ್ ಮಾಡ್ತಿದೆ.

ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News