ಟ್ರೋಲ್‌ಗೊಳಗಾದ ಈ ಗುರೂಜಿ ಕಿಚ್ಚನ ಬಳಿ ಮಗಳ ಬಗ್ಗೆ ಹೇಳಿದ್ದೇನು?

ಇನ್ನು ಕಿಚ್ಚನ ಬಳಿ ಮಾತನಾಡುವ ಸಂದರ್ಭದಲ್ಲಿ ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಖ್ಯಾತಿಯ ಆರ್ಯವರ್ಧನ್ ಗುರೂಜಿ ʼನನ್ನ ಮಗಳು ಪ್ರಧಾನಿಯಾಗುತ್ತಾಳೆ. ನನ್ನ ಮಗಳ ಜಾತಕ ತುಂಬಾ ಅದ್ಭುತವಾಗಿದೆ. ಆ ತರಹದ ಜಾತಕವನ್ನ ನಾನು ಎಲ್ಲೂ ನೋಡಿಲ್ಲʼ ಎಂದು ಹೇಳಿಕೊಂಡರು.

Written by - YASHODHA POOJARI | Edited by - Bhavishya Shetty | Last Updated : Aug 7, 2022, 12:34 PM IST
  • ಅತೀ ಹೆಚ್ಚು ಟ್ರೋಲ್‌ಗೆ ಒಳಗಾದ ಗುರೂಜಿ ಅಂದ್ರೆ ಆರ್ಯವರ್ಧನ್ ಗುರೂಜಿ
  • ಬಿಗ್ ಬಾಸ್ ಮನೆಯೊಳಗೆ 16 ಸ್ಪರ್ಧಿಗಳಿದ್ದಾರೆ
  • ಬಿಗ್‌ಬಾಸ್ ಒಟಿಟಿ ಸೀಸನ್‌ಗೆ ಮೊದಲ ಸ್ಪರ್ಧಿಯಾಗಿ ಪ್ರವೇಶ ಪಡೆದ ಗುರೂಜಿ
ಟ್ರೋಲ್‌ಗೊಳಗಾದ ಈ ಗುರೂಜಿ ಕಿಚ್ಚನ ಬಳಿ ಮಗಳ ಬಗ್ಗೆ ಹೇಳಿದ್ದೇನು?  title=
Aryavardhan Guruji

ಆರ್ಯವರ್ಧನ್ ಗುರೂಜಿ. ಈ ಹೆಸರು ಚಿರಪರಿಚಿತ. ಅದರಲ್ಲೂ ಅತೀ ಹೆಚ್ಚು ಟ್ರೋಲ್‌ಗೆ ಒಳಗಾದ ಗುರೂಜಿ ಅಂದ್ರೆ ಇವ್ರೇ ನೋಡಿ. ಪ್ರತಿನಿತ್ಯ ಆರ್ಯವರ್ಧನ್ ಗುರೂಜಿಯ ಕಾಲೆಳೆಯುವ ಕೆಲಸವನ್ನ ಚಾಚು ತಪ್ಪದೆ  ಮಾಡುತ್ತಿದ್ದರು ಟ್ರೋಲ್ ಮಾಡುವ ಹುಡುಗರು. ಟ್ರೋಲ್ ಆಗಿಯೇ ಫೇಮಸ್ ಆದ ಗುರೂಜಿ ಇದೀಗ ಬಿಗ್ ಬಾಸ್ ಒಟಿಟಿ ಸೀಸನ್‌ಗೆ ಮೊದಲ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ: Bigg Boss OTT: ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು? ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ

ಇನ್ನು ಕಿಚ್ಚನ ಬಳಿ ಮಾತನಾಡುವ ಸಂದರ್ಭದಲ್ಲಿ ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಖ್ಯಾತಿಯ ಆರ್ಯವರ್ಧನ್ ಗುರೂಜಿ ʼನನ್ನ ಮಗಳು ಪ್ರಧಾನಿಯಾಗುತ್ತಾಳೆ. ನನ್ನ ಮಗಳ ಜಾತಕ ತುಂಬಾ ಅದ್ಭುತವಾಗಿದೆ. ಆ ತರಹದ ಜಾತಕವನ್ನ ನಾನು ಎಲ್ಲೂ ನೋಡಿಲ್ಲʼ ಎಂದು ಹೇಳಿಕೊಂಡರು. ʼನಾನು ಹೇಳುವುದೆಲ್ಲವೂ ಸತ್ಯ. ನನ್ನ ಕಂಡ್ರೆ ಆಗದವರು ನನ್ನ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳೋದಿಲ್ಲʼಎಂದರು. ಜೀವನಕ್ಕಾಗಿ ಮಾಡಿದ ಕೆಲಸದ ಬಗ್ಗೆಯೂ ಗುರೂಜಿ ಸುದೀಪ್ ಜೊತೆ ಮಾತನಾಡುವ ವೇಳೆ ಈ ಮಾತುಗಳನ್ನು ಹಂಚಿಕೊಂಡರು.

ʼಬಿಗ್‌ಬಾಸ್ ಮನೆಯಲ್ಲಿ ನಾನು ಬಿಗ್‌ಬಾಸ್ ಹೇಳಿದ್ದನ್ನ ಪಾಲಿಸುವೆ. ನನಗೆ ಮಗಳು ಅಂದ್ರೆ ತುಂಬಾ ಇಷ್ಟ. ಅವಳನ್ನ ಬಿಟ್ಟಿರೋದು ಕಷ್ಟʼ ಎಂದು ಕಣ್ಣೀರು ಹಾಕುತ್ತಾ ಹೇಳಿದರು. ನನಗೆ ಬಿಗ್‌ಬಾಸ್ ಮನೆಯಲ್ಲಿ ಸಿಟ್ಟು ಬಾರದೆ ಇದ್ರೆ ಸಾಕು ಅಂತ ಕಿಚ್ಚನ ಮುಂದೆ ಹೇಳಿ ಮಗಳನ್ನ ಬಿಗಿದಪ್ಪಿ ಮನೆಯೊಳಗೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ: CWG 2022: ಕಾಮನ್‌ವೆಲ್ತ್‌ನಲ್ಲಿ ಭಾರತೀಯರ ಅಬ್ಬರ: ಪದಕ ಬೇಟೆಯಾಡಿದ ಕ್ರೀಡಾಪಟುಗಳ ವಿವರ ಹೀಗಿದೆ

ಈ ಬಾರಿ ಬಿಗ್ ಬಾಸ್ ಮನೆಯೊಳಗೆ 16 ಸ್ಪರ್ಧಿಗಳಿದ್ದು, ಯಾರ್ಯಾರು ಯಾವ ರೀತಿ ತಮ್ಮ ಇರುವಿಕೆಗಾಗಿ ಏನೆಲ್ಲಾ ಐಡಿಯಾ ಮಾಡುತ್ತಾರೆ ಅನ್ನೋದನ್ನ ಕಾದುನೋಡಬೇಕಾಗಿದೆ. ಈ ಬಾರಿ ಟಿವಿಯಲ್ಲಿ ಬಿಗ್ ಬಾಸ್ ಬರೋದಿಲ್ಲ. ಬದಲಾಗಿ ಒಟಿಟಿ ಮೂಲಕ ದಿನದ 24 ಗಂಟೆಯೂ ಬಿಗ್‌ಬಾಸ್ ನೋಡೋದರ ಮೂಲಕ ಮನರೆಂಜನೆ ಪಡೆಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News