Rajinikanth: ರಜಿನಿಕಾಂತ್ ಐಸಿಯುನಲ್ಲಿ ಪಡೀತಿರುವ ಚಿಕಿತ್ಸೆ ಏನು? ಹೆಲ್ತ್‌ ಬುಲೆಟಿನ್‌ ರಿಲೀಸ್‌

Rajinikanth Health Condition: ಸೂಪರ್ ಸ್ಟಾರ್ ಆಸ್ಪತ್ರೆಗೆ ಯಾಕೆ ದಾಖಲಾದರು? ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಎಂದು ಯೋಚಿಸುತ್ತಿದ್ದಾರೆ. 

Written by - Chetana Devarmani | Last Updated : Oct 2, 2024, 12:20 PM IST
  • ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು
  • ರಜನಿಕಾಂತ್ ಆಸ್ಪತ್ರೆಗೆ ಯಾಕೆ ದಾಖಲಾದರು?
  • ರಜನಿಕಾಂತ್ ಅವರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ?
Rajinikanth: ರಜಿನಿಕಾಂತ್ ಐಸಿಯುನಲ್ಲಿ ಪಡೀತಿರುವ ಚಿಕಿತ್ಸೆ ಏನು? ಹೆಲ್ತ್‌ ಬುಲೆಟಿನ್‌ ರಿಲೀಸ್‌ title=

Rajinikanth Health Condition: ಭಾರತ ಮಾತ್ರವಲ್ಲದೆ ವಿಶ್ವದ ಜನಪ್ರಿಯ ನಟನಾಗಿ ಹಲವು ವರ್ಷಗಳಿಂದ ಸಿನಿರಂಗದಲ್ಲಿ ತೊಡಗಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಸೆ.30 ರಂದು ಚೆನ್ನೈನ ಕ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದಾಗಿನಿಂದ ಅಭಿಮಾನಿಗಳು ಅವರಿಗೆ ಏನಾಯಿತು ಎಂದು ಚಿಂತೆ ಮಾಡಲು ಪ್ರಾರಂಭಿಸಿದ್ದಾರೆ. ಸೂಪರ್ ಸ್ಟಾರ್ ಆಸ್ಪತ್ರೆಗೆ ಯಾಕೆ ದಾಖಲಾದರು? ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಎಂದು ಯೋಚಿಸುತ್ತಿದ್ದಾರೆ.  

ಸೂಪರ್‌ಸ್ಟಾರ್ ರಜನಿಕಾಂತ್ ಹೃದಯಕ್ಕೆ ಸಂಬಂಧಿಸಿದ ಪ್ರಮುಖ ರಕ್ತನಾಳಗಳಲ್ಲಿ ಊತ ಕಂಡುಬಂದಿದೆ ಎಂದು ವರದಿಯಾಗಿದೆ. ಈ ಊತವನ್ನು ಕಡಿಮೆ ಮಾಡಲು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. Transcatheter  ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಎಂಡೋವಾಸ್ಕುಲರ್ ರಿಪೇರಿ ಎಂಬ ತಂತ್ರವನ್ನು ವೈದ್ಯರು ಬಳಸಿದ್ದಾರೆ ಎಂದು ಹೇಳಲಾಗುತ್ತದೆ. ಸದ್ಯ ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿಶಿರ್‌ ಶಾಸ್ತ್ರಿಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್‌ ಗೊತ್ತಾ?

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸಮಸ್ಯೆಯನ್ನು ಮಹಾಪಧಮನಿಯ ಅನ್ಯೂರಿಸಂ ಎಂದು ಕರೆಯಲಾಗುತ್ತದೆ. ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ಮುಖ್ಯ ರಕ್ತನಾಳದ (ಮಹಾಪಧಮನಿಯ) ಗೋಡೆಯು ದುರ್ಬಲಗೊಂಡಾಗ ಈ ಸಮಸ್ಯೆ ಉಂಟಾಗುತ್ತದೆ. 

ರಜನಿಕಾಂತ್ ಆರೋಗ್ಯ ಈಗ ಹೇಗಿದೆ?

ರಜನಿಕಾಂತ್ ಚಿಕಿತ್ಸೆಗೆ ಸ್ಪದಿಸುತ್ತಿದ್ದಾರೆ. ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.  

ಇದನ್ನೂ ಓದಿ: ತಂದೆ ತಾಯಿ ಇಬ್ಬರೂ ಇಲ್ಲ.. ನಿಜ ಜೀವನದಲ್ಲೇ ನರಕ ಕಂಡ ಐಶ್ವರ್ಯಾ ಸಿಂಧೋಗಿ ಮದುವೆ ಆಗಿದೆಯಾ? ನಿಜವಾದ ವಯಸ್ಸೆಷ್ಟು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News