ಬಾಲಿವುಡ್ ನಲ್ಲಿ ಕೆಲಸವಿಲ್ಲದೆ ಕುಳಿತಿದ್ದ ನೃತ್ಯ ನಿರ್ದೇಶಕಿಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತೇ?

ಬಾಲಿವುಡ್ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಖಾತ್ಯಿ ಪಡೆದಿರುವ ಸಲ್ಮಾನ್ ಖಾನ್ ಇತ್ತೀಚಿಗೆ ಹಿರಿಯ ನೃತ್ಯ ನಿರ್ದೇಶಕಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಿವುಡ್ ನಲ್ಲಿ ಯಾವುದೇ ಕೆಲಸವಿಲ್ಲವೆಂದು ಕುಳಿತಿದ್ದ ಡ್ಯಾನ್ಸ್ ಕೊರಿಯೋಗ್ರಾಪರ್ ಗೆ ತಮ್ಮ ಚಿತ್ರದಲ್ಲಿ ಆಫರ್ ನೀಡುವುದಾಗಿ ಹೇಳಿದ್ದಾರೆ.

Last Updated : Mar 31, 2019, 04:12 PM IST
ಬಾಲಿವುಡ್ ನಲ್ಲಿ ಕೆಲಸವಿಲ್ಲದೆ ಕುಳಿತಿದ್ದ ನೃತ್ಯ ನಿರ್ದೇಶಕಿಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತೇ?  title=
Photo courtesy: Instagram

ನವದೆಹಲಿ: ಬಾಲಿವುಡ್ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಖಾತ್ಯಿ ಪಡೆದಿರುವ ಸಲ್ಮಾನ್ ಖಾನ್ ಇತ್ತೀಚಿಗೆ ಹಿರಿಯ ನೃತ್ಯ ನಿರ್ದೇಶಕಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಿವುಡ್ ನಲ್ಲಿ ಯಾವುದೇ ಕೆಲಸವಿಲ್ಲವೆಂದು ಕುಳಿತಿದ್ದ ಡ್ಯಾನ್ಸ್ ಕೊರಿಯೋಗ್ರಾಪರ್ ಗೆ ತಮ್ಮ ಚಿತ್ರದಲ್ಲಿ ಆಫರ್ ನೀಡುವುದಾಗಿ ಹೇಳಿದ್ದಾರೆ.

ಖಾಸಗಿ ವೆಬ್ ಪೋರ್ಟ್ಲ್ ವೊಂದರ ಜೊತೆಗೆ ಮಾತನಾಡುತ್ತಾ ಈ  ಬಗ್ಗೆ ಹಿರಿಯ ನೃತ್ಯ ನಿರ್ದೇಶಕಿ ಸರೋಜ ಖಾನ್ ಹೀಗೆ ಹೇಳಿಕೊಂಡಿದ್ದಾರೆ.

 
 
 
 

 
 
 
 
 
 
 
 
 

It was a pleasure meeting you after so long @beingsalmankhan ! God bless you always my darling! ❣️

A post shared by Saroj Khan (@sarojkhanofficial) on

"ನಾನು ಸಲ್ಮಾನ್ ಖಾನ್ ನನ್ನು ಭೇಟಿ ಮಾಡಿದಾಗ ಅವನು ಇತ್ತೀಚಿನ ದಿನಗಳಲ್ಲಿ ನಾನು ಮಾಡುತ್ತಿರುವ ಕೆಲಸದ ಬಗ್ಗೆ ವಿಚರಿಸಿದ್ದಾನೆ ಆಗ ನಾನು ಅವನಿಗೆ ಪ್ರಾಮಾಣಿಕವಾಗಿ ನನಗೆ ಈಗ ಯಾವುದೇ ಕೆಲಸವಿಲ್ಲ ಆದ್ದರಿಂದ ಹೊಸ ನಟಿಯರಿಗೆ ಭಾರತೀಯ ಕ್ಲಾಸಿಕಲ್ ಡ್ಯಾನ್ಸ್ ನ್ನು ಕಳಿಸುತ್ತಿದ್ದೇನೆ ಎಂದು ಹೇಳಿದೆ.ಇದನ್ನು ಕೇಳಿದ ತಕ್ಷಣ ಸಲ್ಮಾನ್ ನೀವು ನನ್ನ ಜೊತೆ ಇನ್ನ್ಮುಂದೆ ಕಾರ್ಯ ನಿರ್ವಹಿಸುತ್ತಿರಿ ಎಂದು ಹೇಳಿದ. ಸಲ್ಮಾನ್ ಖಾನ್ ಹೇಳಿದ್ದನ್ನು ಮಾಡುತ್ತಾರೆ ಅವರ ಮಾತನ್ನು ಉಳಿಸಿಕೊಳ್ಳುತ್ತಾರೆ "ಎಂದು ಹೇಳಿದರು.

ಸರೋಜ್ ಖಾನ್ 90 ರ ದಶಕದಲ್ಲಿ ತಮ್ಮ ನೃತ್ಯ ನಿರ್ದೇಶನದಿಂದಲೇ ಖ್ಯಾತಿಯನ್ನು ಪಡೆದಿದ್ದರು.ಸಲ್ಮಾನ್ ಖಾನ್ ಜೊತೆ ಬಿವಿ ಹೋ ತೋ ಐಸಿ(1988) ಅಂದಾಜ್ ಅಪ್ನಾ ಅಪ್ನಾ ಚಿತ್ರಕ್ಕಾಗಿ ಕಾರ್ಯನಿರ್ವಹಿಸಿದ್ದರು.

Trending News