ಜಿಮ್ ಮಾಡಲು ಮಗ ವಿಯಾನ್ ತೂಕ ಬಳಸಿದ ಶಿಲ್ಪಾ ಶೆಟ್ಟಿ....! ವೀಡಿಯೋ ವೈರಲ್

ಶಿಲ್ಪಾ ಶೆಟ್ಟಿ ಅಂದ್ರೇನೆ ಫಿಟ್ ನೆಸ್, ಫಿಟ್ ನೆಸ್ ಅಂದ್ರೆನೇ ಶಿಲ್ಪಾ ಶೆಟ್ಟಿ ಹೌದು ಅಷ್ಟರ ಮಟ್ಟಿಗೆ ಇವತ್ತಿಗೂ ಕೂಡ ಅವರು ವ್ಯಾಯಾಮದ ಮೂಲಕ ದೇಹವನ್ನು ಫಿಟ್ ಆಗಿ ಇಟ್ಟಿದ್ದಾರೆ.

Updated: Apr 17, 2019 , 03:58 PM IST
ಜಿಮ್ ಮಾಡಲು ಮಗ ವಿಯಾನ್ ತೂಕ ಬಳಸಿದ ಶಿಲ್ಪಾ ಶೆಟ್ಟಿ....! ವೀಡಿಯೋ ವೈರಲ್
Photo courtesy: Instagram

ನವದೆಹಲಿ: ಶಿಲ್ಪಾ ಶೆಟ್ಟಿ ಅಂದ್ರೇನೆ ಫಿಟ್ ನೆಸ್, ಫಿಟ್ ನೆಸ್ ಅಂದ್ರೆನೇ ಶಿಲ್ಪಾ ಶೆಟ್ಟಿ ಹೌದು ಅಷ್ಟರ ಮಟ್ಟಿಗೆ ಇವತ್ತಿಗೂ ಕೂಡ ಅವರು ವ್ಯಾಯಾಮದ ಮೂಲಕ ದೇಹವನ್ನು ಫಿಟ್ ಆಗಿ ಇಟ್ಟಿದ್ದಾರೆ.

ಈ ಹಿಂದೆ ಯೋಗಾಭ್ಯಾಸ ಮಾಡುವುದರ ಮೂಲಕ ಅವರು ಸಾಕಷ್ಟು ಖ್ಯಾತಿ ಪಡೆದಿದ್ದರು.ಅವರ ಯೋಗಾಸನದ ಸಿಡಿ ಗಳು ಕೂಡ ಅಷ್ಟೇ ಜನಪ್ರೀಯವಾಗಿದ್ದವು.ಈಗ ಜಿಮ್ ವೊಂದರಲ್ಲಿ ಆರು ವರ್ಷದ ಮಗನನ್ನು ಕಾಲ ಮೇಲೆ ಕೂರಿಸಿಕೊಂಡು ವ್ಯಾಯಾಮ್ ಮಾಡುತ್ತಿರುವ ವಿಡಿಯೋವೊಂದನ್ನು ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಮಗ ವಿಯಾನ್ ನನ್ನು ಮೇಲೆ ಕೂರಿಸಿಕೊಂಡು ಟ್ರೈಸೇಪ್ಸ್ ಮಾಡುತ್ತಿರುವ ಅವರು ಮಕ್ಕಳನ್ನು ನಿಭಾಯಿಸಲು ಇನ್ನು ಹೆಚ್ಚಿನ ಶಕ್ತಿ ಬೇಕೆಂದು ಅವರು ಇನ್ಸ್ಟಾ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.