ನಿಖಿಲ್ ಕುಮಾರಸ್ವಾಮಿಯನ್ನೇ ಆಯ್ಕೆ ಮಾಡಿದ್ಯಾಕೆ ಲೈಕಾ ಪ್ರೊಡಕ್ಷನ್ಸ್‌?

Nikhil Kumaraswamy : ನಿಖಿಲ್ ಸಿನಿಮಾ ಮೂಲಕ ಕಾಲಿವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದೆ. ನಿಖಿಲ್ ಜೊತೆ ಸಿನಿಮಾ ಮಾಡಲು ನಾಲ್ಕು ವರ್ಷ ಲೈಕಾ ಸಂಸ್ಥೆ ಕಾಯ್ದಿದೆ. 

Written by - Chetana Devarmani | Last Updated : Aug 22, 2023, 04:16 PM IST
  • ಯುವರಾಜನ ಸ್ಟಂಟ್ಸ್ ಗೆ ಮನಸೋತ ಬಿಗ್ ಪ್ರೊಡಕ್ಷನ್ ಹೌಸ್
  • ಎರಡು ವರ್ಷದ ಬಳಿಕ ಸಿನಿಮಾ ಅಖಾಡಕ್ಕಿಳಿದ ನಿಖಿಲ್ ಕುಮಾರಸ್ವಾಮಿ
  • ರೈಡರ್ ಚಿತ್ರದ ನಂತ್ರ ಮತ್ತೆ ಕ್ಯಾಮೆರಾ ಮುಂದೆ ನಿಖಿಲ್ ಎಂಟ್ರಿ
ನಿಖಿಲ್ ಕುಮಾರಸ್ವಾಮಿಯನ್ನೇ ಆಯ್ಕೆ ಮಾಡಿದ್ಯಾಕೆ ಲೈಕಾ ಪ್ರೊಡಕ್ಷನ್ಸ್‌?  title=

Nikhil Kumaraswamy : ನಿಖಿಲ್ ಕುಮಾರಸ್ವಾಮಿ ಮಾಸ್ ಲುಕ್ ಹಾಗೂ ಸ್ಟಂಟ್ಸ್ ಗೆ ಮನಸೋತ ಬಿಗ್ ಪ್ರೊಡಕ್ಷನ್ ಹೌಸ್ ಸಿನಿಮಾ ಮಾಡಲು ಸಜ್ಜಾಗಿದೆ. ಎರಡು ವರ್ಷದ ಬಳಿಕ ಸಿನಿಮಾರಂಗದ ಅಖಾಡಕ್ಕಿಳಿದ ನಿಖಿಲ್ ಕುಮಾರಸ್ವಾಮಿ ಅವರ ಹಿಸ ಚಿತ್ರಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. 

ರೈಡರ್ ಚಿತ್ರದ ನಂತರ ಮತ್ತೆ ಕ್ಯಾಮೆರಾ ಮುಂದೆ ನಿಖಿಲ್ ಎಂಟ್ರಿ ಕೊಡುತ್ತಿದ್ದಾರೆ. ರಾಜಕೀಯದ ನಂತರ ಮತ್ತೆ ಚಿತ್ರರಂಗದಲ್ಲಿ ನಿಖಿಲ್‌ ಕುಮಾರಸ್ವಾಮಿ ಸಕ್ರಿಯರಾಗಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮಾಜಿ ಸಿಎಂ ಪುತ್ರ ನಿಖಿಲ್‌ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಖ್ಯಾತ ನಿರ್ದೇಶಕ!

ನಿಖಿಲ್ ಸಿನಿಮಾ ಮೂಲಕ ಕಾಲಿವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದೆ. ನಿಖಿಲ್ ಜೊತೆ ಸಿನಿಮಾ ಮಾಡಲು ನಾಲ್ಕು ವರ್ಷ ಲೈಕಾ ಸಂಸ್ಥೆ ಕಾಯ್ದಿದೆ. ಸೀತಾ ರಾಮ ಕಲ್ಯಾಣ ಸಿನಿಮಾ ನೋಡಿ ಇಂಪ್ರೆಸ್ ಆಗಿದ್ದ ಲೈಕಾ ಸಂಸ್ಥೆ ಮಾಲೀಕರಾದ ಶುಭಾಷ್ ಕರಣ್ 
ಇದೀಗ ನಿಖಿಲ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಇದೇ ತಿಂಗಳ 23 ರಂದು ನಿಖಿಲ್ ಕುಮಾರ್ ಹೊಸ ಸಿನಿಮಾ ಮಹೂರ್ತ ನಡೆಯಲಿದೆ. ಬೆಂಗಳೂರಿನಲ್ಲೇ ಲೈಕಾ ನಿರ್ಮಾಣದ ಮೊದಲ ಕನ್ನಡ ಸಿನಿಮಾದ ಮುಹೂರ್ತ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತದ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡ ನಾಯಕ ನಟನ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಬಂಡವಾಳ ಹೂಡುತ್ತಿದೆ. ನಿಖಿಲ್ ಕೆರಿಯರ್ ನಲ್ಲೇ ಬಿಗ್ ಬಜೆಟ್ ಸಿನಿಮಾ ಇದಾಗಲಿದೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಭುವನ್ - ಹರ್ಷಿಕಾ ಹೊಸ ಮನೆ ಗೃಹ ಪ್ರವೇಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News