ಸ್ಟಾರ್ ಡೈರೆಕ್ಟರ್ ಅಂದು ಅರ್ಚನಾ ಜೋಯಿಸ್ ಅವರ ಬೇಕರಿಗೆ ಅಂದು ಹೋಗಿದ್ದು ಯಾಕೆ...?

Archana Jois : ಅತ್ಯಂತ ಚಿಕ್ಕ ವಯಸ್ಸಿನಲ್ಲಿ  ತಾಯಿ ಪಾತ್ರ ಮಾಡಿ ಸದ್ದು ಮಾಡಿದ ನಟಿ ಅಂದ್ರೆ ಅದು ಹೆಮ್ಮೆಯ ಕನ್ನಡತಿ ಅರ್ಚನಾ ಜೋಯಿಸ್. ಯೆಸ್ ಅರ್ಚನಾ ಜೋಯಿಸ್ KGF ಪಾರ್ಟ್ ಒಂದು ಮತ್ತು ಪಾರ್ಟ್ ಎರಡರಲ್ಲಿ  ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯದ ತಾಯಿ ಪಾತ್ರದಲ್ಲಿ ನಟಿಸಿ ಇಡೀ ಜಗತ್ತಿನ ಮಂದಿಗೆ ಖುಷಿ ಕೊಟ್ಟ ಸುಂದರ ನಟಿ.  

Written by - YASHODHA POOJARI | Last Updated : Mar 24, 2023, 03:26 PM IST
  • ನಟಿ ಅರ್ಚನಾ ಜೋಯಿಸ್‌ KGF ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
  • KGF ತಾಯಿ ಪಾತ್ರಕ್ಕೆ ಹೇಗೆ ಸೆಲೆಕ್ಟ್ ಆದ್ರು ಅನ್ನೋ ಸಂಗತಿ ನಿಜಕ್ಕೂ ರೋಚಕ.
  • ಅರ್ಚನಾ ಜೋಯಿಸ್ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಹೆಸರು.
ಸ್ಟಾರ್ ಡೈರೆಕ್ಟರ್ ಅಂದು ಅರ್ಚನಾ ಜೋಯಿಸ್ ಅವರ ಬೇಕರಿಗೆ ಅಂದು ಹೋಗಿದ್ದು ಯಾಕೆ...?

KGF Mother : ನಟಿ ಅರ್ಚನಾ ಜೋಯಿಸ್‌ KGF ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ  KGF ತಾಯಿ ಪಾತ್ರಕ್ಕೆ ಹೇಗೆ ಸೆಲೆಕ್ಟ್ ಆದ್ರು ಅನ್ನೋ ಸಂಗತಿ ನಿಜಕ್ಕೂ ರೋಚಕ. ತಾಯಿ ಪಾತ್ರಕ್ಕೆ ಇವರೇ ಬೇಕು ಅಂತ ಎಷ್ಟೇ ಪ್ರಯತ್ನಪಟ್ಟರೂ ನನ್ನ ವಯಸ್ಸು ಸಣ್ಣದು ನಾನು ತಾಯಿ ಪಾತ್ರ ಮಾಡಲ್ಲ ಅಂದಾಗ ಪ್ರಶಾಂತ್ ನೀಲ್ ಅರ್ಚನಾ ಅವರ ಬೇಕರಿಗೆ ತಾವೇ ಸ್ವತಃ ಬಂದು ಒಂದು ಪಪ್ಸ್ ಮತ್ತು ಹನಿಕೇಕ್ ತಿಂದು ಅರ್ಚನಾ ಅವರನ್ನ ಒಪ್ಪಿಸಿ ಹೋದ ನೆನಪನ್ನ ಅರ್ಚನಾ ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡರು.

ಅರ್ಚನಾ ಜೋಯಿಸ್ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಹೆಸರು. ಝೀ ಕನ್ನಡದ `ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಸುವರ್ಣ ವಾಹಿನಿಯ `ದುರ್ಗಾ' ಧಾರಾವಾಹಿಯಲ್ಲಿ `ದುರ್ಗಾ' ಪಾತ್ರದ ಮೂಲಕ ಮನೆ ಮಾತಾದರು. ತಮ್ಮ ಹನ್ನೋಂದನೇ ವಯಸ್ಸಿನಿಂದ ನೃತ್ಯದಲ್ಲಿ ಆಸಕ್ತಿ ತಳೆದ ಇವರು `ಮಾಯಾರಾವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ' ಯಿಂದ ನೃತ್ಯದಲ್ಲಿ ಪದವಿ ಪಡೆದರು.

ಇವರ ನೃತ್ಯಗುರು ಅನುರಾಧಾ ವಿಕ್ರಾಂತ್.ಕಥಕ್ ಮಾತ್ರವಲ್ಲದೇ ಭರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿದ್ದಾರೆ. 

ಇದನ್ನೂ ಓದಿ-ಬ್ಯಾಡ್‌ ಮ್ಯಾನರ್ಸ್ ಅಂತ ಸಖತ್ ಸೌಂಡ್ ಮಾಡುತ್ತಿದ್ದಾರೆ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್..! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News