ಕೆಜಿಎಫ್-2 ಸಿನಿಮಾದ ಶೂಟಿಂಗ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತೇ?

 ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ರ ಶೂಟಿಂಗ್ ಸ್ಥಗಿತಗೊಳಿಸಲು ಕೋಲಾರ್ ಗೋಲ್ಡ್ ಫಿಲ್ಡ್ ನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ ಎಂದು ವರದಿಯಾಗಿದೆ.

Last Updated : Aug 28, 2019, 07:34 PM IST
ಕೆಜಿಎಫ್-2 ಸಿನಿಮಾದ ಶೂಟಿಂಗ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತೇ? title=

ಮುಂಬೈ: ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ರ ಶೂಟಿಂಗ್ ಸ್ಥಗಿತಗೊಳಿಸಲು ಕೋಲಾರ್ ಗೋಲ್ಡ್ ಫಿಲ್ಡ್ ನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಕೆಜಿಎಫ್ 2 ನ್ನು ಕೋಲಾರ್ ಗೋಲ್ಡ್ ಫೀಲ್ಡ್ನ ಸೈನೈಡ್ ಹಿಲ್ಸ್ ನಲ್ಲಿ ಚಿತ್ರೀಕರಿಸಲಾಗಿದೆ, ಆದರೆ ಈಗ ನ್ಯಾಯಾಲಯದ ಆದೇಶದಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬೆಟ್ಟಗಳನ್ನು ನಾಶಮಾಡುವ ಮೂಲಕ ಸೆಟ್ಗಳನ್ನು ತಯಾರಿಸಿದ್ದಕ್ಕಾಗಿ ಶ್ರೀನಿವಾಸ ಎಂಬ ಸ್ಥಳೀಯ ನಿವಾಸಿ ತಯಾರಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ಕೆಜಿಎಫ್ 2 ರ ಮೊದಲ ಪೋಸ್ಟರ್ ನ್ನು ಸಂಜಯ್ ದತ್ ಅವರ 60 ನೇ ಹುಟ್ಟುಹಬ್ಬದಂದು ಅನಾವರಣಗೊಳಿಸಲಾಯಿತು,ಅವರು ಕೆಜಿಎಫ್ ಚಿತ್ರದ ಎರಡನೇ ಭಾಗದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ.ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಮತ್ತು ಸರಣ್ ಶಕ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಕೆಜಿಎಫ್ ಚಿತ್ರದ ಮೊದಲ ಭಾಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. 

Trending News