ಡೈರೆಕ್ಷನ್‌ ಕಡೆ ಮುಖ ಮಾಡಲಿದ್ದಾರಾ ಲೇಡಿ ಸೂಪರ್‌ ಸ್ಟಾರ್?‌ ಹಲ್‌ಚಲ್‌ ಎಬ್ಬಿಸಿದ ಪೋಸ್ಟ್!

Nayanathara: ಬಹುಭಾಷಾ ನಟಿ ನಯನತಾರಾ ಸೋಷಿಯಲ್‌ ಮಿಡಿಯಾದಲ್ಲಿ ಕ್ಯಾಮರಾ ಹಿಂದೆ ನಿಂತಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Written by - Zee Kannada News Desk | Last Updated : Nov 25, 2023, 11:59 AM IST
  • ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮದುವೆ ಬಳಿಕ ಫುಲ್ ತುಂಬಾನೆ ಆಕ್ಟಿವ್ ಆಗಿದ್ದು ಒಂದ್ಕಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ.
  • ಇತ್ತೀಚೆಗೆ ನಯನತಾರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೊವನ್ನು ಹಂಚಿಕೊಂಡಿದ್ದು, ಆ ಫೋಟೊ ಸದ್ಯ ಈ ನಟಿಯ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಾಕಿದೆ.
  • ನಯನತಾರಾ ಕ್ಯಾಮರಾ ಹಿಂದೆ ನಿಂತಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡೈರೆಕ್ಷನ್‌ ಕಡೆ ಮುಖ ಮಾಡಲಿದ್ದಾರಾ ಲೇಡಿ ಸೂಪರ್‌ ಸ್ಟಾರ್?‌ ಹಲ್‌ಚಲ್‌ ಎಬ್ಬಿಸಿದ ಪೋಸ್ಟ್! title=

South Actress Nayanthara: ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮದುವೆ ಬಳಿಕ ಫುಲ್ ತುಂಬಾನೆ ಆಕ್ಟಿವ್ ಆಗಿದ್ದು ಒಂದ್ಕಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ. 39 ವರ್ಷದ ನಟಿ ದಿನದಿಂದ ದಿನಕ್ಕೆ ಹೊಸ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ನಾಲ್ಕೈದು ದಶಕಗಳಿಂದ ಬೇರೆ ಯಾವುದೇ ನಟಿಗೂ ನಯನತಾರಾಗೆ ಸಿಕ್ಕಷ್ಟು ಯಶಸ್ಸು ಸಿಕ್ಕಿಲ್ಲ. ಯಾರೂ ಲೇಡಿ ಸೂಪರ್‌ಸ್ಟಾರ್ ಅಂತ ಅನಿಸಿಕೊಳ್ಳದೆ, ಇದೀಗ ನಯನತಾರಾಗೆ ಆ ಪಟ್ಟ ಸಿಕ್ಕಿದೆ. ಅದನ್ನು ಅಷ್ಟೇ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದು, ಮದುವೆ ಬಳಿಕವೂ ಅದೇ ಕ್ರೇಜ್ ಉಳಿಸಿಕೊಂಡಿರುವುದು ಕೂಡ ಅಷ್ಟೇ ದೊಡ್ಡ ಸಂಗತಿ. 

ಇತ್ತೀಚೆಗೆ ನಯನತಾರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೊವನ್ನು ಹಂಚಿಕೊಂಡಿದ್ದು, ಆ ಫೋಟೊ ಸದ್ಯ ಈ ನಟಿಯ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಾಕಿದೆ. ನಯನಾತಾರಾ ನಿರ್ದೇಶನದ ಕಡೆಗೆ ಮುಖ ಮಾಡಿ, 40 ವರ್ಷಕ್ಕೆ ಹೊಸ ಹೆಚ್ಚು ಇಡುತ್ತಾರೆಂಬ ಒಂದಿಷ್ಟು ಪ್ರಶ್ನೆಗಳು ಫ್ಯಾನ್ಸ್ ಮುಂದಿದೆ. ಈಕೆ  ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ತ್ರಿಶಾ, ಅನುಷ್ಕಾ ಶೆಟ್ಟಿ, ಸಮಂತಾಗೂ ಕೂಡ ನಯನತಾರಾ ಸಂಭಾವನೆಯನ್ನು ಹಿಂದಿಕ್ಕುವುದಕ್ಕೆ ಸಾಧ್ಯವಾಗದೇ, ಚಿತ್ರದ ಸಂಭಾವನೆ ವಿಚಾರದಲ್ಲಿ ಕಟ್ಟು ನಿಟ್ಟಾಗಿರೋ ಈ ನಟಿ ಅದೆಷ್ಟೇ ದೊಡ್ಡ ನಿರ್ದೇಶಕರಾಗಿದ್ದರೂ ಸಂಭಾವನೆ ವಿಚಾರದಲ್ಲಿ ಮಾತ್ರ ರಾಜಿಯಾಗುವುದಿಲ್ಲ ಅನ್ನೋ ಸುದ್ದಿಯಿದೆ. 

 
 
 
 

 
 
 
 
 
 
 
 
 
 
 

A post shared by N A Y A N T H A R A (@nayanthara)

ಇದನ್ನು ಓದಿ: ರಶ್ಮಿಕಾ.. ಪೂಜಾ ಹೆಗ್ಡೆ ಇಬ್ಬರೂ ಅಲ್ಲ... ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿ ಈಕೆ

ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿ,  ಆ ಚಿತ್ರದಲ್ಲಿ ನಟಿಸುವುದಕ್ಕೆ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎನ್ನಲಾಗಿದೆ. ನಿರ್ಮಾಣ ಸಂಸ್ಥೆ ಅದನ್ನು ಒಪ್ಪದೇ ಇದ್ದಾಗ, ಮಣಿರತ್ನಂ ಸಿನಿಮಾಗೆ ಗುಡ್ ಬೈ ಹೇಳಿದ್ದಾರೆನ್ನುವುದು ತಮಿಳು ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿ. ಈ ಬೆನ್ನಲ್ಲೇ ನಯನತಾರಾ ಕ್ಯಾಮರಾ ಹಿಂದೆ ನಿಂತಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಯನತಾರಾ ಶೀಘ್ರದಲ್ಲಿಯೇ ಡೈರೆಕ್ಷನ್ ತೊಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದ್ದು, 40 ವಯಸ್ಸಿನ ಆಸುಪಾಸಿನಲ್ಲಿರುವ ನಟಿ ಶೀಘ್ರದಲ್ಲೇ ನಿರ್ದೇಶನಕ್ಕೆ ಕೈ ಹಾಕಲಿದ್ದಾರೆಂದು ಬಲವಾಗಿ ನಂಬಿಕೊಂಡಿದ್ದಾರೆ. 

ನಯನತಾರಾ ಮದುವೆ ನಂತರ ನಟಿಸುವುದರಲ್ಲಷ್ಟೇ ಅಲ್ಲ, ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಇತ್ತೀಚೆಗೆ ಬ್ಯೂಟಿ ಬ್ರ್ಯಾಂಡ್ 9 ಸ್ಕಿನ್ ನಡೆಸುತ್ತಿದ್ದಾರೆ. ಇದೀಗ ನಯನತಾರಾ ನಿರ್ದೇಶನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ. ನಯನತಾರಾ ಕೂಡ "ಹೊಸ ಆರಂಭದ ಮ್ಯಾಜಿಕ್ ಅನ್ನು ನಂಬಿ" ಎಂದು ಬರೆದುಕೊಂಡಿರೋದು ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ನೂರಾರು ಕಮೆಂಟ್‌ಗಳು ಬಂದಿದ್ದು, "ನೀವು ನಿರ್ದೇಶನ ಮಾಡುತ್ತೀರಾ", "ಯಾವಾಗ ನಿರ್ದೇಶನ ಮಾಡುತ್ತೀರಾ?" ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News