Womens Day 2023 : ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ಸಾಹಸಿ ನಟಿ ; ಹಂಸ ನಂದಿನಿ

Hamsa Nandini : ಮಹಿಳೆಯರನ್ನು ಭೂಮಿಗೆ ಹೋಲಿಸಿ ಮಾತನಾಡುತ್ತಾರೆ. ಏಕೆಂದರೇ ಭೂಮಿಯಷ್ಟೇ ತಾಳ್ಮೆಯುಳ್ಳವಳು ಹೆಣ್ಣು ಎಂದು. ಈ ಮಾತಿಗೆ ಉದಾಹರಣೆಯಾಗಿ ಸಾಕಷ್ಟು ಜನ ಮಹಿಳಾ ಮಣಿಗಳಿದ್ದಾರೆ. ಅವರಲ್ಲಿ ತೆಲುಗು ನಟಿ ಹಂಸಿನಿ ಕೂಡ ಒಬ್ಬರು . ಈ ನಟಿ ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದವರು.

Written by - Zee Kannada News Desk | Last Updated : Mar 8, 2023, 07:53 PM IST
  • ಈ ಮಾತಿಗೆ ಉದಾಹರಣೆಯಾಗಿ ಸಾಕಷ್ಟು ಜನ ಮಹಿಳಾ ಮಣಿಗಳಿದ್ದಾರೆ.
  • ಒಂದಷ್ಟು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಐಟಂ ಸಾಂಗ್‌ ಗಳಿಗೆ ಹೆಜ್ಜೆ ಹಾಕುಬ ಮೂಲಕ ಗುರುತಿಸಿಕೊಂಡವರು.
  • ಕ್ಯಾನ್ಸರ್ ಸಂಪೂರ್ಣವಾಗಿ ಹರಡದಿದ್ದರೂ 16 ಕೀಮೋ ಥೆರಪಿ ಸೆಷೆನ್ಸ್ ಆಕೆ ಧೈರ್ಯವಾಗಿ ಮಾಡಿಸಿಕೊಂಡಿದ್ದರು.
Womens Day 2023 : ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ಸಾಹಸಿ ನಟಿ ; ಹಂಸ ನಂದಿನಿ  title=

ಹಂಸ ನಂದಿನಿ : ಒಂದಷ್ಟು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಐಟಂ ಸಾಂಗ್‌ ಗಳಿಗೆ ಹೆಜ್ಜೆ ಹಾಕುಬ ಮೂಲಕ ಗುರುತಿಸಿಕೊಂಡವರು. ಇವರು ಮೊದಲಿಗೆ ಕ್ಯಾನ್ಸರ್‌ ನಿಂದ ಚೇತರಿಸಿಕೊಂಡ ನಂತರ ಇವರಿಗೆ ಅರಿವಾಗಿರಲಿಲ್ಲ  ಕ್ಯಾನ್ಸರ್‌ ವಂಶವಾಹಿಯಾಗಿ ಬಂದಿರುವುದು ಎಂದು ಆದ್ದರಿಂದ ಇವರು ಮತ್ತೊಮ್ಮೆ ಚಿಕಿತ್ಸೆ ತೆಗೆದುಕೊಳ್ಳಬೇಕಾಯಿತು. 

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ತಲುಗು ನಟಿ ತಮ್ಮ ದುಃಖದ ದಿನಗಳ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಾಕ್‌ ಡೌನ್‌ ನಂತರ ಸಿನಿಮಾ ಕೆಲಸಗಳಲ್ಲಿ ತೊಡಗಬೇಕಾಗಿತ್ತು. 2020ರಲ್ಲಿ ತನಗೆ ಗ್ರೇಡ್ 3 ಕಾರ್ಸಿನೋಮಾ ಇರುವುದು ಗೊತ್ತಾಯಿತು ಎಂದು ಹಂಸಾ ನಂದಿನಿ ತಮ್ಮ ಕಾಯಿಲೆ ಬಗ್ಗೆ ವಿವರಿದ್ದಾರೆ. ಆಕೆಯ ತಾಯಿ ಕೂಡ 18 ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಿದರು. ಆದರೆ ದುರದೃಷ್ಟವಶಾತ್ ಆಕೆ ಮಹಾಮಾರಿ ಎದುರು ಸೋತಿದ್ದರು. ಆದರೂ ಹಂಸ ನಂದಿನಿ ಮಾತ್ರ ಧೈರ್ಯವಾಗಿ ಮನೋಸ್ಥೈರ್ಯದಿಂದ ಚಿಕಿತ್ಸೆ ಪಡೆದರು. ತನಗೆ ಕ್ಯಾನ್ಸರ್ ಇದೆ ಎಂದು ತಿಳಿದ ನಂತರ ಭಯ, ಗೊಂದಲ, ಆತಂಕ ಎಲ್ಲವೂ ನನ್ನನ್ನು ಆವರಿಸಿತು. ಸತತವಾಗಿ ಸ್ಕಾನಿಂಗ್ಸ್ , ಪರೀಕ್ಷೆಯ ನಂತರ ಆಕೆ ಧೈರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

 

ಇದನ್ನೂ ಓದಿ-ʼ95ನೇ ಆಸ್ಕರ್‌ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ..! ನೇರ ಪ್ರಸಾರ ಇಲ್ಲಿ ಮಾತ್ರ 

ಕ್ಯಾನ್ಸರ್ ಸಂಪೂರ್ಣವಾಗಿ ಹರಡದಿದ್ದರೂ 16 ಕೀಮೋ ಥೆರಪಿ ಸೆಷೆನ್ಸ್ ಆಕೆ ಧೈರ್ಯವಾಗಿ ಮಾಡಿಸಿಕೊಂಡಿದ್ದರು. ಎಲ್ಲಾ ಮುಗೀತು ಎಂದುಕೊಳ್ಳುವ ಸಮಯದಲ್ಲಿ ಆಕೆಗೆ BRCA1 (ವಂಶಪಾರಂಪರ್ಯ ಸ್ತನ ಕ್ಯಾನ್ಸರ್) ಪಾಸಿಟಿವ್ ಎನ್ನುವುದು ಗೊತ್ತಾಯಿತು. ಅಂದರೆ ಆಕೆಗೆ ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬಂದಿತ್ತು. ಸದ್ಯಕ್ಕೆ ಇದರಿಂದ ಬಿಡುಗಡೆ ಸಿಗಬಹುದು. ಆದರೆ ಮುಂದೆ ಮತ್ತೆ ಕ್ಯಾನ್ಸರ್ ಬರಬಹುದು ಎಂದು ವೈದ್ಯರು ಹೇಳಿದರು. 70% ರಷ್ಟು ಮತ್ತೆ ಕ್ಯಾನ್ಸರ್ ಬರುತ್ತೆ ಎಂದಾಗ ಅದಕ್ಕೆ ಇದ್ದಿದ್ದು ಒಂದೇ ಮಾರ್ಗ, ಇನ್ವಾಸಿವ್ ಪ್ರೊಫಿಲಾಕ್ಟಿಕ್ ಸರ್ಜರಿ. ಕಳೆದ ವರ್ಷ ಆ ಸರ್ಜರಿಯನ್ನು ಕೂಡ ಮಾಡಿಸಿಕೊಂಡೆ" ಎಂದು ಹಂಸ ನಂದಿನೆ ಹೇಳಿದ್ದಾರೆ. 

ಇದನ್ನೂ ಓದಿ-Andrea jeremiah : ʼಮಹಿಳಾ ದಿನಾಚರಣೆ ದಿನʼವೇ ಟಾಪ್‌ಲೆಸ್‌ ಆದ ʼನಟಿ ಆಂಡ್ರಿಯಾ..! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News