Dhruva Sarja : ಧ್ರುವ ಸರ್ಜಾಗಿರೋ ವೃತ್ತಿಪರತೆ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ!

ಸ್ಯಾಂಡಲ್ವುಡ್.. ಚಂದನವನ ಈಗ ಭಯಂಕರ ಮತ್ತು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗೋ ಮೂಲಕ ಹೆಂಗೇ ನಾವು ಅನ್ನೋ ತರ ಸುದ್ದಿಯಾಗುತ್ತಿದೆ. ನಿಮ್ಗೆ ಗೊತ್ತಿರೋ ಹಾಗೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಎಪಿ ಅರ್ಜುನ್ ಕಾಂಬಿನೇಶನ್ ನ 'ಮಾರ್ಟಿನ್' ಅಪ್ ಕಮಿಂಗ್ ಬಿಗ್ ಬಜೆಟ್ ಸಿನಿಮಾ. ಜೊತೆಗೆ ಅದ್ಭುತ ಕಂಟೆಂಟ್ ಇರೋ ಚಿತ್ರ ಅನ್ನೋ ಮ್ಯಾಟರ್ ನಿಮಗೆಲ್ಲ ಈಗ ಗೊತ್ತೇ ಇದೆ. 

Written by - YASHODHA POOJARI | Last Updated : Feb 18, 2023, 01:31 PM IST
  • ಸ್ಯಾಂಡಲ್ವುಡ್ ಈಗ ಭಯಂಕರ ಮತ್ತು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ
  • ಧ್ರುವ ಸರ್ಜಾ 'ಮಾರ್ಟಿನ್' ಅಪ್ ಕಮಿಂಗ್ ಬಿಗ್ ಬಜೆಟ್ ಸಿನಿಮಾ
  • ಟೀಮ್ ಲೇಟ್ ಆದ್ರೂ ಪರವಾಗಿಲ್ಲ ಲೇಟೆಸ್ಟ್ ಆಗಿ ಅಭಿಮಾನಿಗಳಿಗೆ ಫುಲ್ ಮೀಲ್ಸ್
Dhruva Sarja : ಧ್ರುವ ಸರ್ಜಾಗಿರೋ ವೃತ್ತಿಪರತೆ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ! title=

Sandalwood : ಸ್ಯಾಂಡಲ್ವುಡ್.. ಚಂದನವನ ಈಗ ಭಯಂಕರ ಮತ್ತು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗೋ ಮೂಲಕ ಹೆಂಗೇ ನಾವು ಅನ್ನೋ ತರ ಸುದ್ದಿಯಾಗುತ್ತಿದೆ. ನಿಮ್ಗೆ ಗೊತ್ತಿರೋ ಹಾಗೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಎಪಿ ಅರ್ಜುನ್ ಕಾಂಬಿನೇಶನ್ ನ 'ಮಾರ್ಟಿನ್' ಅಪ್ ಕಮಿಂಗ್ ಬಿಗ್ ಬಜೆಟ್ ಸಿನಿಮಾ. ಜೊತೆಗೆ ಅದ್ಭುತ ಕಂಟೆಂಟ್ ಇರೋ ಚಿತ್ರ ಅನ್ನೋ ಮ್ಯಾಟರ್ ನಿಮಗೆಲ್ಲ ಈಗ ಗೊತ್ತೇ ಇದೆ. 

ಮಾರ್ಟಿನ್ ಸಿನಿಮಾದ ಅಪ್ಡೇಟ್ ಕೊಡ್ರಪ್ಪ ಅಂತ ಚಿತ್ರತಂಡ ಸಾಕಷ್ಟು ಬಾರೀ ಕೇಳಿಕೊಂಡಿದೆ. ಆದ್ರೆ ಮಾರ್ಟಿನ್ ಟೀಮ್ ಲೇಟ್ ಆದ್ರೂ ಪರವಾಗಿಲ್ಲ ಲೇಟೆಸ್ಟ್ ಆಗಿ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಕೊಡೋಣ ಅಂತ ವೇಟ್ ಮಾಡ್ಸಿದ್ರು.ಫೈನಲಿ ಇದೀಗ ಟೀಸರ್ ಫೆಬ್ರವರಿ 23 ರಂದು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಅವರನ್ನ ಪ್ರೀತಿಸೋ ಹೃದಯಗಳು ಲೆಕ್ಕವಿಲ್ಲದಷ್ಟು ಇವೆ.ಅದಕ್ಕಾಗಿ ಟೀಸರ್ ರಿಲೀಸ್ ದಿನ ಮೊದಲೇ ಅಭಿಮಾನಿಗಳಿಗೆ ಥೀಯೇಟರ್ ನಲ್ಲಿ ಟೀಸರ್ ತೋರಿಸೋ ಪ್ಲಾನ್ ಮಾಡಿಕೊಂಡಿದೆ ಮಾರ್ಟಿನ್ ಚಿತ್ರತಂಡ. ಆ ಹಣವನ್ನ ಗೋಶಾಲೆಗಳಿಗೆ ನೀಡೊ ಅದ್ಭುತ ಕೆಲಸಕ್ಕೆ ಮಾರ್ಟಿನ್ ಟೀಮ್ ತಯಾರಿ ನಡೆಸಿದೆ.

ಇದನ್ನೂ ಓದಿ : Shivarajkumar : ಮತ್ತೆ 'ಭೈರತಿ ರಣಗಲ್‌' ಅವತಾರದಲ್ಲಿ ಅಬ್ಬರಿಸಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ!

ಮಾರ್ಟಿನ್ ಸಿನಿಮಾ ಹಲವು ವಿಶೇಷತೆಗಳಿಗೆ ಕಾರಣವಾಗುತ್ತಿದೆ. ಧ್ರುವ ಸರ್ಜಾ ಇಲ್ಲಿ ತನ್ನ ಎಲ್ಲಾ ಎಫರ್ಟ್ ಹಾಕಿ ಕೆಲಸ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.ಫೈಟ್ ಸೀನ್ ಗಳನ್ನ ಮಾಸ್ಟರ್ ಗಳು ಓಕೆ ಮಾಡಿದ್ರೂ ಕೂಡ  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾತ್ರ ಇನ್ನೂ ಏನೋ ಬೇಕು ಅಂತ ಮತ್ತೇ ಮತ್ತೇ ಪ್ರಯತ್ನ ಮಾಡುತ್ತಲೇ ಇದ್ದಾರಂತೆ. ಟೇಕ್ಸ್ ಗಳು 20 ರಿಂದ 40 ಸಲ ಆದರೂ ತಲೆಕೆಡಿಸಿಕೊಳ್ಳದೆ ಮಾಡಿ ಮುಗಿಸಿಯೇ ಹೋಗೋ ವೃತ್ತಿಪರತೆ ಧ್ರುವ ಸರ್ಜಾಗೆ ಇತ್ತು ಅನ್ನೋದನ್ನ ಅವರನ್ನ ಹತ್ತಿರದಿಂದ ನೋಡಿದವರು ಹೇಳಿಕೊಂಡ ಮಾತಿದು. ನಾನು ಮಾಡೋ ಕೆಲಸ ಅಭಿಮಾನಿಗಳಿಗೆ ಮೆಚ್ಚುಗೆಯಾಗಲೇಬೇಕು ಅನ್ನೋ ಮಹದಾಸೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿದೆ. ಇಂತಹ ಪ್ರತಿಭೆಗಳು ನಮ್ಮ ಇಂಡಸ್ಟ್ರಿಯನ್ನ ಉತ್ತುಂಗದ ಶಿಖರಕ್ಕೆ ಏರಿಸೋದರಲ್ಲಿ  ಅನುಮಾನವೇ ಇಲ್ಲ ಬಿಡಿ. ಧ್ರುವ ಸರ್ಜಾ ಅವರ ಇಂತಹ ಅದ್ಭುತ ಗುಣವನ್ನ ಎಷ್ಟೂ ಕೊಂಡಾಡಿದರು ಸಾಲೋಲ್ಲ ನೋಡಿ.

ನೂರು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಮಾರ್ಟಿನ್  ಚಿತ್ರವನ್ನು ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ

ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಚಿತ್ರದ ಮತ್ತೊಂದು ಹೈಲೇಟ್ ಆಗಿದೆ.. ಫೆ.23 ಕ್ಕೆ ಚಿತ್ರದ ಟೀಸರ್ ಜೊತೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಪ್ಲಾನ್ ಮಾಡಿರುವ ಮಾರ್ಟಿನ್ ಚಿತ್ರತಂಡ ಈ ಸಮ್ಮರ್ ಗೆ ಮಾರ್ಟಿನ್ ನ ಬೆಳ್ಳಿತೆರೆ ಮೇಲೆ ಕರ್ಕೊಂಡ್ ಬರೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Kabzaa: ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ ‘ಕಬ್ಜ’ ಚಿತ್ರದಿಂದ ಗೀತನಮನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News