ಹೊಸ ಪರ್ವ! ಯುವರಾಜ್‌ಕುಮಾರ್‌ಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ!?

YuvaRajkumar: ಈಗಾಗಲೇ ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವರಾಜ್‌ಕುಮಾರ್ ಎಂಟ್ರಿಗೆ ಸಕಲ ಪ್ರಯತ್ನವೂ ನಡೆಯುತ್ತಿದೆ.  ಹೊಂಬಾಳೆ ಫಿಲ್ಮ್ಸ್ ಘೋಷಣೆಯ ಬೆನ್ನಲ್ಲೇ ನೆಟ್ಟಿಗರು ತಮ್ಮ ಅನಿಸಿಕೆಗಳ ಮೂಲಕ ಈ ಘೋಷಣೆಯ ಬಗ್ಗೆ ಊಹಿಸುತ್ತಿದ್ದಾರೆ. 

Written by - Chetana Devarmani | Last Updated : Apr 26, 2022, 06:16 PM IST
  • ಹೊಂಬಾಳೆ ಫಿಲ್ಮ್ಸ್ಇಂದು ಒಂದು ಘೋಷಣೆ ಮಾಡಿದೆ
  • ಇದು ಜನರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ
  • ಹೊಂಬಾಳೆ ಫಿಲ್ಮ್ಸ್‌ ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ
ಹೊಸ ಪರ್ವ! ಯುವರಾಜ್‌ಕುಮಾರ್‌ಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ!?  title=
ಹೊಂಬಾಳೆ ಫಿಲ್ಮ್ಸ್‌

ಕೆಜಿಎಫ್ 2 ಯಶಸ್ಸಿನಲ್ಲಿರುವ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾಗಳನ್ನು ಸಹ ಘೋಷಣೆ ಮಾಡಿದೆ. ಈಗಾಗಲೇ ಹಲವು ಬಿಗ್​ಬಜೆಟ್ ಚಿತ್ರಗಳನ್ನು ಘೋಷಿಸಿದೆ. ಇದೀಗ ಮತ್ತೊಂದು ವಿಚಾರ ಸಿನಿಪ್ರಿಯರ ಮನಸ್ಸಲ್ಲಿ ಕುತೂಹಲ ಕೆರಳಿಸಿದೆ. ದೊಡ್ಮನೆ ಉತ್ತರಾಧಿಕಾರಿಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ ಬರೆಯಲಿದೆಯಾ ಎಂಬ ಕಾತುರ ಅಭಿಮಾನಿಗಳನ್ನು ಕಾಡುತ್ತಿದೆ. ಇಂದು ಟ್ವೀಟ್ ಮೂಲಕ ನೂತನ ಘೋಷಣೆ ಮಾಡಿರುವ ಹೊಂಬಾಳೆ ಫಿಲ್ಮ್ಸ್, ಸರ್ಪ್ರೈಸ್ ಕಾಯ್ದುಕೊಂಡಿದೆ. ಈಗಾಗಲೇ ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವರಾಜ್‌ಕುಮಾರ್ ಎಂಟ್ರಿಗೆ ಸಕಲ ಪ್ರಯತ್ನವೂ ನಡೆಯುತ್ತಿದೆ.  ಹೊಂಬಾಳೆ ಫಿಲ್ಮ್ಸ್ ಘೋಷಣೆಯ ಬೆನ್ನಲ್ಲೇ ನೆಟ್ಟಿಗರು ತಮ್ಮ ಅನಿಸಿಕೆಗಳ ಮೂಲಕ ಈ ಘೋಷಣೆಯ ಬಗ್ಗೆ ಊಹಿಸುತ್ತಿದ್ದಾರೆ. 

ಇದನ್ನೂ ಓದಿ: KGF 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?

ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಇಂದು ಒಂದು ಘೋಷಣೆ ಮಾಡಿದೆ.  ಇದು ಜನರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. "ಹೊಸ ಪರ್ವ! ನಾಳೆ ಬೆಳಿಗ್ಗೆ 9:50ಕ್ಕೆ ನಿಮ್ಮ ಮುಂದೆ ತೆರೆದಿಡಲಿದ್ದೇವೆ" ಎಂದು ಬರೆಯಲಾಗಿದೆ. ಈ ಮೂಲಕ ಹೊಸ ಘೋಷಣೆ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಗುಟ್ಟು ಕಾಯ್ದುಕೊಂಡ ಹೊಂಬಾಳೆ ಫಿಲ್ಮ್ಸ್‌ ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇದಕ್ಕಾಗಿ ಚಿತ್ರಪ್ರೇಮಿಗಳು ನಾಳೆ ಅಂದರೆ ಏಪ್ರಿಲ್ 27ರ ಬೆಳಗ್ಗೆ 9.50ರವರೆಗೆ ಕಾಯಲೇಬೇಕು. 

 

 

ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಲಿದೆ ಅನ್ನೋ ಮಾತುಗಳು  ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂಬ ಗಾಸಿಪ್‌ ಕೂಡ ಇತ್ತು. ಇದೀಗ ಹೊಂಬಾಳೆ ಫಿಲ್ಮ್ಸ್‌ನ ಈ ಘೋಷಣೆ ಜನರಲ್ಲಿ ಒಂದು ಅನುಮಾನಕ್ಕೆ ಕಾರಣವಾಗಿದೆ. ಹೊಂಬಾಳೆ ಫಿಲ್ಮ್ಸ್ ಇಂದು ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾದ ಲಾಂಚ್ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದೆ. ಈ ಟ್ವೀಟ್ ಬಳಿಕ ಆ ಯಾವ ಸಿನಿಮಾ ಯಾವುದು? ಅಂತ ಕುತೂಹಲದಿಂದ ಕಾಯುತ್ತಿದ್ದಾರೆ. ನಾಳೆ (ಏಪ್ರಿಲ್ 27) ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡುತ್ತಿರುವ ಹೊಚ್ಚ ಹೊಸ ಸಿನಿಮಾದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಇದು ಯುವರಾಜ್‌ಕುಮಾರ್ ಮೊದಲ ಸಿನಿಮಾನಾ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳಲ್ಲೂ ಮೂಡಿದೆ. ನಿರೀಕ್ಷೆಯಂತೆಯೇ ನಾಳೆ ಬೆಳಗ್ಗೆ (ಏಪ್ರಿಲ್ 27) ಬೆಳಗ್ಗೆ 9.50ಕ್ಕೆ ಯುವರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾದ ಘೋಷಣೆಯಾಗಲಿದೆ ಎಂದು ಸಿನಿಪ್ರಿಯರು ಹಾಗೂ ದೊಡ್ಮನೆ ಅಭಿಮಾನಿಗಳು ಊಹಿಸುತ್ತಿದ್ದಾರೆ.  

ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?

ಹೊಂಬಾಳೆ ಫಿಲ್ಮ್ಸ್ ಅವರ ಈ ಘೋಷಣೆಯ ಬೆನ್ನಲ್ಲೇ ನೆಟ್ಟಿಗರು ತಮ್ಮ ಅನಿಸಿಕೆಗಳ ಮೂಲಕ ನಾಳೆಯ ಘೋಷಣೆಯ ಬಗ್ಗೆ ಊಹಿಸುತ್ತಿದ್ದಾರೆ. ಬಹಳಷ್ಟು ಜನರು ಯುವ ರಾಜ್​ಕುಮಾರ್ ನಟನೆಯ ಚಿತ್ರದ ಅನೌನ್ಸ್ ಇದಾಗಿರಲಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News