ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ 'ಜೀ ಗಣೇಶ ಉತ್ಸವ'..!

ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Aug 29, 2024, 03:56 PM IST
    • ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿ
    • ಆರಂಭದಿಂದಲೂ ಕನ್ನಡಿಗರ ಮನಗೆದ್ದ ಸಿರೀಯಲ್‌
    • ಈ ಧಾರಾವಾಹಿ ತಂಡ 'ಜೀ ಗಣೇಶ ಉತ್ಸವ' ಕಾರ್ಯಕ್ರಮ ಆಯೋಜಿಸಿದೆ
ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ 'ಜೀ ಗಣೇಶ ಉತ್ಸವ'..! title=

Zee Ganesh utsav 2024 : ಕನ್ನಡಿಗರ ಅಚ್ಚು ಮೆಚ್ಚಿನ ಜೀ಼ ಕನ್ನಡ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಧಾರಾವಾಹಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಷೋಗಳು, ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಾ ಬರುತ್ತಿದೆ. ಹೀಗಾಗಿ ಜೀ಼ ಕನ್ನಡ ವಾಹಿನಿಯು ಪ್ರೇಕ್ಷಕರ ಮನೆ ಮಾತಾಗಿ ನಂಬರ್ 1 ಪಟ್ಟದಲ್ಲಿ ಮುಂದುವರೆಯುತ್ತಿದೆ.

ತಮ್ಮ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಮನರಂಜಿಸುತ್ತಿರುವ ವಾಹಿನಿಯು ತಮಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟುತ್ತಿರುವ ಜನರ ಬಳಿಯೇ ತೆರಳಿ ಅವರಿಗೊಂದು ಧನ್ಯವಾದ ಅರ್ಪಿಸುವುದು ವಾಡಿಕೆ ಮಾಡಿಕೊಂಡಿದೆ. ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ. 

ಇದನ್ನೂ ಓದಿ:ಧೋನಿಯ ಸೋದರ ಮಾವನ ಮಗನ ಜೊತೆ ಕೃತಿ ಸನನ್‌ ಮದುವೆ? ಸತ್ಯ ಬಿಚ್ಚಿಟ್ಟಿದ್ದು ಇನ್ಸ್ಟಾಗ್ರಾಮ್‌ನ ಅದೊಂದು ಸುಳಿವು!

ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಮಧ್ಯಮ ವರ್ಗದ ಜನರ ಕಷ್ಟ, ಸುಖ, ಬಾಂದವ್ಯ, ಸಮಸ್ಯೆ ಎಲ್ಲವನ್ನು ಒಳಗೊಂಡಿರುವ ಕಥೆ ಇದಾಗಿದೆ. ಕಥೆಯಲ್ಲಿ ಹಲವು ಮಜಲುಗಳಿದ್ದು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿರುವ ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದಾರೆ. ನಿಮ್ಮೆಲ್ಲರ ನೆಚ್ಚಿನ ನಿರೂಪಕ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.

ಜೊತೆಗೆ ನಟ ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಲಭ್ಯವಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ. ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ 'ಲಕ್ಷೀ ನಿವಾಸ' ಧಾರಾವಾಹಿ ತಂಡ ಇರಲಿದ್ದು ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲಿದ್ದಾರೆ. ನಿಮ್ಮ ನೆಚ್ಚಿನ ಕಲಾವಿದರು ನಿಮ್ಮ ಸಮ್ಮುಖದಲ್ಲೇ ಕುಣಿದು ಕುಪ್ಪಳಿಸಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಇದನ್ನೂ ಓದಿ:"ಪತ್ನಿಯ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು" ಅಮಿತಾಭ್‌ ಬಚ್ಚನ್‌ ಹೇಳಿಕೆ ಹಿಂದಿನ ಕಾರಣ ಏನು?

ಸೆಪ್ಟೆಂಬರ್ 1 ರಂದು ಭಾನುವಾರ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ. ಈ ಕಾರ್ಯಕ್ರಮದ ಆಕರ್ಷಣೆ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುತ್ತಿರುವುದು, ಹಾಗು ಜನರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗ್ರತಿಯನ್ನು ಮೂಡಿಸಲಾಗುವುದು. ಇದೇ ಸೆಪ್ಟೆಂಬರ್ 1 ಭಾನುವಾರ (1.9.2024) ದಂದು ಚಿತ್ರದುರ್ಗದ ಅನುಭವ ಮಂಟಪ, ಮುರುಘಮಠ ಆವರಣ, ಚಿತ್ರದುರ್ಗದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿರುವ ಮನರಂಜನೆ ತುಂಬಿದ ಈ ಕಾರ್ಯಕ್ರಮಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News