ʼಶ್ರೀಕೃಷ್ಣ ಜನ್ಮಾಷ್ಟಮಿʼ ಪ್ರಯುಕ್ತ ಪ್ರೇಕ್ಷಕರಿಗೆ ʼಜೀ ಕನ್ನಡʼ ಬಿಗ್‌ ಗಿಫ್ಟ್‌ : 1 ಗಂಟೆ, 5 ಧಾರಾವಾಹಿಗಳ ಮಹಾಸಂಚಿಕೆ ನೋಡಿ

ಜೀ ಕನ್ನಡ ಈ ಬಾರಿ ತನ್ನ ಪ್ರಿಯ ವೀಕ್ಷಕರಿಗಾಗಿ ಅವರ ಮನೆಮನ ಮೆಚ್ಚಿದ 5 ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ, ಈ ಪ್ರಯತ್ನವು ಇದೇ ಸೋಮವಾರದಿಂದ ಶುರುವಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಡಲಾಗುತ್ತಿರುವ ಈ ಹೊಸ ಪ್ರಯತ್ನ ಈ ವಾರವೆಲ್ಲ ಜನರನ್ನ ಮನೋರಂಜಿಸೋದಂತು ಗ್ಯಾರಂಟಿ.

Written by - Krishna N K | Last Updated : Sep 6, 2023, 02:17 PM IST
  • ಕರ್ನಾಟಕದ ಜನರನ್ನ ಮನರಂಜಿಸುವಲ್ಲಿ ಜೀ ಕನ್ನಡ ವಾಹಿನಿ ಸದಾ ಮುಂಚೂಣಿಯಲ್ಲಿದೆ.
  • ಪ್ರತಿ ಬಾರಿಯು ಹೊಸತನಕ್ಕೆ ಹಾತೊರೆಯುತ, ಹೊಸತೇನನ್ನೋ ಜನರಿಗೆ ತಲುಪಿಸುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ.
  • ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 5 ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ.
ʼಶ್ರೀಕೃಷ್ಣ ಜನ್ಮಾಷ್ಟಮಿʼ ಪ್ರಯುಕ್ತ ಪ್ರೇಕ್ಷಕರಿಗೆ ʼಜೀ ಕನ್ನಡʼ ಬಿಗ್‌ ಗಿಫ್ಟ್‌ : 1 ಗಂಟೆ, 5 ಧಾರಾವಾಹಿಗಳ ಮಹಾಸಂಚಿಕೆ ನೋಡಿ title=

Zee Kannada serial : ಕರ್ನಾಟಕದ ಜನರನ್ನ ಮನರಂಜಿಸುವಲ್ಲಿ ಸದಾ ಮುಂಚೂಣಿಯಲ್ಲಿರವ ಜೀ ಕನ್ನಡ ವಾಹಿನಿ, ಪ್ರತಿ ಬಾರಿಯು ಹೊಸತನಕ್ಕೆ ಹಾತೊರೆಯುತ, ಹೊಸತೇನನ್ನೋ ಜನರಿಗೆ ತಲುಪಿಸುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ಸಂಜೆ 5.30 ಆಯ್ತು ಅಂದ್ರೆ ಮನೆಗಳಲ್ಲಿ ಒಂದು ತರಹದ ಸಂಭ್ರಮ, ಮನೆಮಂದಿಯೆಲ್ಲ ತಮ್ಮ ಕೆಲಸ ಮುಗಿಸಿ ಟಿವಿ ಮುಂದೆ ಹಾಜರಾಗಿಬಿಡುತ್ತಾರೆ. ಯಾಕಂದ್ರೆ ಝೀ ಕನ್ನಡ ತನ್ನ ಮನೋರಂಜನೆಯ ಕೆಲಸವನ್ನ ಶುರುಮಾಡುವ ಸಮಯವದು.

ಇಂತಹ ಝೀ ಕನ್ನಡ ಈ ಬಾರಿ ತನ್ನ ಪ್ರಿಯ ವೀಕ್ಷಕರಿಗಾಗಿ ಅವರ ಮನೆಮನ ಮೆಚ್ಚಿದ 5 ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ, ಈ ಪ್ರಯತ್ನವು ಇದೇ ಸೋಮವಾರದಿಂದ ಶುರುವಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಡಲಾಗುತ್ತಿರುವ ಈ ಹೊಸ ಪ್ರಯತ್ನ ಈ ವಾರವೆಲ್ಲ ಜನರನ್ನ ಮನೋರಂಜಿಸೋದಂತು ಗ್ಯಾರಂಟಿ.

ಇದನ್ನೂ ಓದಿ: ಮುದ್ದು ಮಕ್ಕಳ ಜೊತೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ನಟಿ ಅಮೂಲ್ಯ : ಫೋಟೋಸ್‌ ಇಲ್ಲಿವೆ

ಸೋಮವಾರ ಸಂಜೆ 5:30ರಿಂದ 7:30ರ ತನಕ ಒಂಟಿ ಮನಸ್ಸುಗಳ ಪ್ರೇಮಕಾವ್ಯ ಅಮೃತಧಾರೆ ಧಾರವಾಹಿಯನ್ನ ಪ್ರಸಾರ ಮಾಡುವ ಮುಖಾಂತರ ಈ ಪ್ರಕ್ರಿಯೆ ಚಾಲನೆಗೊಂಡಿದ್ದು ಪುಟ್ಟಕ್ಕನಮಕ್ಕಳು ಮಂಗಳವಾರ ರಾತ್ರಿ 7:30ರಿಂದ 8:30ರ ತನಕ ಪ್ರಸಾರವಾಗಲಿದೆ. ಇದೇ ಸರಣಿಯಲ್ಲಿ ಬರುವ ಶ್ರೀರಸ್ತು ಶುಭಮಸ್ತು ಬುಧವಾರ ರಾತ್ರಿ 8:30 ರಿಂದ 9:30ರ ತನಕ ಪ್ರಸಾರವಾದರೆ, ಸೀತಾರಾಮ ಗುರುವಾರ ರಾತ್ರಿ 9:30ರಿಂದ 10:30ತನಕ ಪ್ರಸಾರಗೊಳ್ಳಲ್ಲಿದೆ.

ಭೂಮಿಗೆ ಬಂದ ಭಗವಂತ ಶುಕ್ರವಾರ ರಾತ್ರಿ 10ರಿಂದ 11ಕ್ಕೆ ಪ್ರಸಾರವಾಗುವ ಮುಖಾಂತರ ಈ ವಿಶೇಷ 1ಗಂಟೆಗಳ ಮಹಾಸಂಚಿಕೆ ಎಂಬ ಮಹಾಮನೋರಂಜನೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ, ಪ್ರತಿದಿನ ನಾಳೆ ಏನಾಗಬಹುದು ಎಂದು ಕಾಯುವ ವೀಕ್ಷಕರನ್ನ ಮನೋರಂಜಿಸುವ ಜೊತೆಗೆ ಅವರ ಕುತೂಹಲಕ್ಕೆ ತೆರೆಎಳೆಯುವ ಈ ಸಣ್ಣ ಪ್ರಯತ್ನ ಝೀ ಕನ್ನಡ ತನ್ನ ಅಭಿಮಾನಿಗಳಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೊಡುತ್ತಿರುವ ವಿಶೇಷ ಉಡುಗೊರೆ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News