ದೇಹದ ಆರೋಗ್ಯ ಉತ್ತಮವಾಗಿ ಹಾಗೂ ಆಕರ್ಷಕವಾಗಿ ಇರಬೇಕು ಎಂದರೆ ಸೂಕ್ತವಾದ ನಿಲುವು ಹಾಗೂ ತೂಕವನ್ನು ಹೊಂದಿರಬೇಕು. ನಿಲುವಿಗೆ ತಕ್ಕಂತೆ ತೂಕ ಇರದೆ ಇದ್ದರೆ ಅಥವಾ ಅತಿಯಾಗಿದ್ದರೆ ಅದು ಅನಾರೋಗ್ಯಕ್ಕೆ ಕಾರಣವಾಗುವುದು.
ಒಳಾಂಗಣ ಸೈಕ್ಲಿಂಗ್(cycling): ಫಿಟ್ ಆಗಿರುವವರಿಗೆ ಒಳಾಂಗಣ ಸೈಕ್ಲಿಂಗ್ ತರಬೇತಿ ಅತ್ಯುತ್ತಮವಾಗಿದೆ. ಫಿಟ್ನೆಸ್ ಜಗತ್ತಿನಲ್ಲಿ ಹೊಸಬರಾಗಿದ್ದರೆ ಈ ವ್ಯಾಯಾಮ ಕೆಲವು ಗಾಯವನ್ನು ಉಂಟುಮಾಡುವುದು. ಕೀಲು ನೋವು, ಸ್ನಾಯು ನೋವು ಮತ್ತು ಅತಿಯಾದ ಆಯಾಸವು ನಿಮಗೆ ಹೆಚ್ಚಿನ ವ್ಯಾಯಾಮ ಮಾಡುವ ಆಸೆಯನ್ನು ತಗ್ಗಿಸುವುದು. ಅಲ್ಲದೆ ತೂಕ ಇಳಿಸುವ ಗುರಿಯನ್ನು ಹಾಳುಮಾಡುವುದು. ನಿಮಗೆ ಹೆಚ್ಚಿನ ನಿರಾಶೆ ಉಂಟಾಗಬಹುದು.
ಚಳಿಗಾಲದಲ್ಲಿ ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ, ಪಡೆಯಿರಿ ಈ ಆರೋಗ್ಯಕರ ಪ್ರಯೋಜನ
ಯೋಗ: ಪ್ರತಿದಿನ ಯೋಗ ಮಾಡುವುದರಿಂದ ಮಾನಸಿಕವಾಗಿ ನಿರಾಳತೆ ದೊರೆಯುವುದು. ಜೊತೆಗೆ ದೇಹವು ಸಡಿಲತೆಯನ್ನು ಪಡೆದುಕೊಳ್ಳುವುದು. ಯೋಗ(Yoga)ವು ಮಾನಸಿಕವಾಗಿ ಹಾಗೂ ದೈಹಿಕವಾಗಿ ತಿಳಿಯಾಗಿಸಲು ಸಹಾಯ ಮಾಡುವುದು. ಆದರೆ ದೇಹದ ತೂಕ ಇಳಿಸುವುದರಲ್ಲಿ ಪರಿಣಾಮಕಾರಿಯಾಗಿ ಇರುವುದಿಲ್ಲ. ಯೋಗವು ಕಡಿಮೆ ಚಟುವಟಿಕಾ ಕ್ರಮವನ್ನು ಹೊಂದಿರುತ್ತದೆ. ಜೊತೆಗೆ ಪ್ರತಿಯೊಂದು ಭಂಗಿಯಲ್ಲೂ ಕೆಲವು ನಿಮಿಷಗಳು ಹಿಡಿದಿಡುವುದರಿಂದ ಅಷ್ಟಾಗಿ ಕ್ಯಾಲೋರಿಯನ್ನು ಸುಡುವುದಿಲ್ಲ. ಬೇಕಿದ್ದರೆ ಬಿಕ್ರಮ್ ಯೋಗ ಅಥವಾ ವಿನ್ಯಾಸ ಯೋಗವನ್ನು ಪ್ರಯತ್ನಿಸಬಹುದು.
ಚಳಿಗಾಲದಲ್ಲಿ ಸೂರ್ಯ ಸ್ನಾನದಿಂದಾಗುವ ಪ್ರಯೋಜನಗಳಿವು
ಬ್ಯಾರೆ: ಸ್ನಾಯುಗಳ ಶಕ್ತಿ ಹೆಚ್ಚಿಸಲು ಮತ್ತು ನಿಮ್ಮ ಸಮತೋಲನವನ್ನು ಸುಧಾರಿಸಲು ಬ್ಯಾರೆ ವ್ಯಾಯಾಮವನ್ನು ಮಾಡಲಾಗುತ್ತದೆ. ಶಕ್ತಿಯನ್ನು ಪಡೆಯಲು ಸಹಾಯ ಮಾಡುವ ಈ ತಾಲೀಮು ದೇಹದ ತೂಕ ಇಳಿಸಲು ಸಹಾಯ ಮಾಡುವುದಿಲ್ಲ. ಬ್ಯಾರೆ ವ್ಯಾಯಾಮದ ಜೊತೆಗೆ ಸೈಕ್ಲಿಂಗ್ ನಂತಹ ಹೃದಯದ ವ್ಯಾಯಾಮವನ್ನು ಮತ್ತು ದೈಹಿಕವಾಗಿ ತೂಕ ಇಳಿಸಲು ಸಹಾಯ ಮಾಡುವಂತಹ ತಾಲೀಮುಗಳನ್ನು ಮಾಡಿದರೆ ತೂಕ ಇಳಿಯಬಹುದು ಅಷ್ಟೆ. ಕೇವಲ ಬ್ಯಾರೆ ವ್ಯಾಯಾಮದಿಂದ ತೂಕ ಇಳಿಸಲು ಸಾಧ್ಯವಿಲ್ಲ.
ಡಾರ್ಕ್ ಚಾಕೊಲೇಟ್, ಗ್ರೀನ್ ಟೀ, ದ್ರಾಕ್ಷಿಯಿಂದ Covid-19 ತಡೆಯಬಹುದಂತೆ!
ಕ್ರಾಸ್ ಫಿಟ್: ಕ್ಯಾಸ್ಫಿಟ್ ವ್ಯಾಯಾಮದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ ಆರಮಭಿಕವಾಗಿ ಇದು ಸೂಕ್ತ ವ್ಯಾಯಾಮ ಅಲ್ಲ. ತೂಕ ಇಳಿಸುವ ಹಂಬಲವಿದ್ದರೆ ಕ್ಯಾಸ್ ಫಿಟ್ ವ್ಯಾಯಾಮ ಮಾಡದೆ ಇದ್ದರೆ ಒಳಿತು. ಈ ತಾಲೀಮು ಸಾಕಷ್ಟು ತೀವ್ರತೆಯಿಂದ ಕೂಡಿದೆ. ನೀವು ಅಧಿಕ ಫಿಟ್, ಕ್ರಿಯಾಶೀಲತೆ ಮತ್ತು ಅಥ್ಲೆಟಿಕ್ ಆಗಿದ್ದರೆ ಮಾತ್ರ ಕ್ರಾಸ್ ಫಿಟ್ ವ್ಯಾಯಾಮವನ್ನು ಪ್ರಯತ್ನಿಸಬೇಕು. ದೇಹವು ಸೂಕ್ತ ಆರೋಗ್ಯವನ್ನು ಮತ್ತು ಶಖ್ತಿಯನ್ನು ಹೊಂದಿರದೆ ಇದ್ದರೆ ಈ ವ್ಯಾಯಾಮವನ್ನು ಪ್ರಯತ್ನಿಸಬಾರದು.
ಮುಂದಿನ ವಾರ ರಷ್ಯಾದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಲು ಪುಟಿನ್ ಸೂಚನೆ
ಜಾಗಿಂಗ್: ಜಾಗಿಂಗ್ ಎನ್ನುವುದು ಹೃದಯ ರಕ್ತನಾಳದ ವ್ಯಾಯಾಮ. ಇದು ದೀರ್ಘ ಕಾಲದ ಹೃದಯ ಸಮಸ್ಯೆಯನ್ನು ತಡೆಗಟ್ಟುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಮತ್ತು ನಿಮ್ಮ ಮನಃಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಜಾಗಿಂಗ್ ಸಾಕಷ್ಟು ಕ್ಯಾಲೋರಿಯನ್ನು ಸುಡಲು ಸಹಾಯ ಮಾಡುವ ತಾಲೀಮು ಅಲ್ಲ. ಸ್ಪ್ರಿಂಟಿಂಗ್ ಮತ್ತು ರನ್ನಿಂಗ್ ಉತ್ತಮ ಆಯ್ಕೆ ಆಗುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.
ನಿಮ್ಮ ಆರೋಗ್ಯ ಹೇಗಿದೆ ಅಂತ ನಿಮ್ಮ ಚರ್ಮವೇ ಹೇಳುತ್ತದೆ! ಹೇಗೆ ಗೊತ್ತಾ?