ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿ ಪಡೆಯಬಹುದು ಜಿರಳೆ ಕಾಟದಿಂದ ಮುಕ್ತಿ

How to Get Rid of Cockroach: ಜಿರಳೆಗಳು ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಿ ಬಿಡುತ್ತವೆ. ಜಿರಳೆಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದುಗಳಿವೆ.   

Written by - Ranjitha R K | Last Updated : Jun 30, 2022, 11:20 AM IST
  • ಜಿರಳೆಗಳು ಬಾರದ ಅಡುಗೆ ಮನೆಯೇ ಇರಲಿಕ್ಕಿಲ್ಲ.
  • ಕೆಲವೊಮ್ಮೆ ಮನೆಯಲ್ಲಿ ಎಲ್ಲಿ ನೋಡಿದರೂ ಜಿರಳೆಗಳೇ ಕಾಣುತ್ತಿರುತ್ತವೆ.
  • ಜಿರಳೆಗಳನ್ನು ತೊಡೆದುಹಾಕಲು ಸುಲಭ ಮಾರ್ಗಗಳು
ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿ ಪಡೆಯಬಹುದು ಜಿರಳೆ ಕಾಟದಿಂದ ಮುಕ್ತಿ  title=
How to Get Rid of Cockroach (file photo)

ಬೆಂಗಳೂರು : How to Get Rid of Cockroach: ಜಿರಳೆಗಳು ಬಾರದ ಅಡುಗೆ ಮನೆಯೇ ಇರಲಿಕ್ಕಿಲ್ಲ. ಬೇಡವೆಂದರೂ ಬರುವ ಈ ಜಿರಳೆಗಳನ್ನು ಮನೆಯಲ್ಲಿ ಕಂಡರೆ ಎಂಥವರಿಗೂ ಇರಿಸು ಮುರುಸಾಗುತ್ತದೆ. ಈ ಅನಪೇಕ್ಷಿತ ಅತಿಥಿಯನ್ನು ಮನೆಯಿಂದ ಹೊರಹಾಕಲು ಇಲ್ಲದ ಕಸರತ್ತು ನಡೆಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಹಿಟ್, ಚಾಕ್, ಸ್ಪ್ರೇ ಗಳನ್ನೂ ಬಳಸಲಾಗುತ್ತದೆ. ಆದರೆ ಇದರಿಂದ ಶಾಶ್ವತ ಪರಿಹಾರ ಸಿಗುವುದೇ ಇಲ್ಲ. 

ಜಿರಳೆಗಳನ್ನು ತೊಡೆದುಹಾಕಲು ಸುಲಭ ಮಾರ್ಗಗಳು :
ಕೆಲವೊಮ್ಮೆ ಮನೆಯಲ್ಲಿ ಎಲ್ಲಿ ನೋಡಿದರೂ ಜಿರಳೆಗಳೇ ಕಾಣುತ್ತಿರುತ್ತವೆ. ಹೀಗಾದಾಗ ತಕ್ಷಣ ಇದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಅವುಗಳು ಅಪಾಯಕಾರಿಯಾಗಿ ಬಿಡುತ್ತವೆ. ಹೌದು, ಜಿರಳೆಗಳು ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಿ ಬಿಡುತ್ತವೆ. ಜಿರಳೆಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದುಗಳಿವೆ.   

ಇದನ್ನೂ ಓದಿ : Coriander Leaves Benefits: ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು

ಸೀಮೆಎಣ್ಣೆ ಎಣ್ಣೆ :
ಸೀಮೆಎಣ್ಣೆ ಪ್ರಬಲವಾದ ಘಾಟು ಹೊಂದಿರುತ್ತದೆ. ಈ ವಾಸನೆಯಿಂದಾಗಿ ಜಿರಳೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ಮನೆ ಒರೆಸುವ ವೇಳೆ,  ಒರೆಸಲು ಬಳಸುವ ನೀರಿಗೆ ಒಂದು ಹನಿ ಸೀಮೆ ಎಣ್ಣೆ ಹಾಕಿ. ಒರೆಸಲು ಕಷ್ಟವಾಗಿರುವ ಸ್ಥಳದಲ್ಲಿ ಈ ಎಣ್ಣೆಯನ್ನು ಸಿಂಪಡಿಸಿ. ಆದರೆ ಬೆಂಕಿಯ ಅಪಾಯವಿರುವ ಸ್ಥಳದಲ್ಲಿ ಸೀಮೆ ಎಣ್ಣೆ  ಬಳಸಬೇಡಿ. 

ಪಲಾವ್ ಎಲೆ  :
ಪಲಾವ್ ಎಲೆಗಳನ್ನು ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ಈ ಎಲೆಗಳನ್ನು ಜಿರಳೆಗಳನ್ನು ಓಡಿಸಲು ಕೂಡ ಬಳಸಬಹುದು. ಜಿರಳೆಗಳು ಈ ಮಸಾಲೆಯ ವಾಸನೆಯನ್ನು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ ಮತ್ತು ಜಿರಳೆಗಳು ಹೆಚ್ಚು ಬರುವ ಸ್ಥಳದಲ್ಲಿ ಹಾಕಿದರೆ ಜಿರಳೆ ಕಾಟದಿಂದ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳು ಈ ಚಹಾವನ್ನು ಕುಡಿದರೆ ಸದಾ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್

ಲವಂಗ :
ಲವಂಗವನ್ನು ಅತ್ಯುತ್ತಮ ಆಯುರ್ವೇದ ಔಷಧವೆಂದು ಪರಿಗಣಿಸಲಾಗುತ್ತದೆ. ಈ ಲವಂಗದ ಪರಿಮಳವನ್ನು ಸಹಿಸುವುದು ಜಿರಳೆಗಳಿಗೆ ಸಾಧ್ಯವಾಗುವುದಿಲ್ಲ. ಲವಂಗದ ಪರಿಮಳಕ್ಕೆ ಹೆದರಿಯೇ ಜಿರಳೆಗಳು ಬರುವುದಿಲ್ಲ. 

ಮನೆಯನ್ನು ಸ್ವಚ್ಛವಾಗಿಡಿ :
ಜಿರಳೆಗಳು ಮುಖ್ಯವಾಗಿ ಕೊಳಕಿನಿಂದ ಬರುತ್ತವೆ. ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ, ಈ ಸಮಸ್ಯೆಯು ಶೀಘ್ರದಲ್ಲೇ ಬಗೆಹರಿಯುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News