ಬೆಂಗಳೂರು : ಬೊಜ್ಜು ಹೊಂದಿರುವ ಟೈಪ್ ಟು ಡಯಾಬಿಟಿಸ್ ರೋಗಿಗಳಲ್ಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಕಂಡುಬರುತ್ತದೆ. ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಈ ರೋಗ ಉಂಟಾಗುತ್ತದೆ. ಇದು ಯಕೃತ್ತಿನ ಫೈಬ್ರೋಸಿಸ್‌ನಂತಹ ಕಾಯಿಲೆಯ ಅಪಾಯವನ್ನು ಉಂಟುಮಾಡಬಹುದು. ಹಾಗೆಯೇ ಮುಂದುವರೆದರೆ ಇದು ಸಿರೋಸಿಸ್‌ಗೆ ಕಾರಣವಾಗಬಹುದು. ಆದರೆ ಕಾಫಿಯಲ್ಲಿ ಕಂಡುಬರುವ ಕೆಫೀನ್ ಮಧುಮೇಹ ರೋಗಿಗಳಲ್ಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತದೆ. ವ್ಯಕ್ತಿಯು ದೈಹಿಕ ಚಟುವಟಿಕೆ ಕಡಿಮೆ ಮಾಡಿ, ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಕಾರಣದಿಂದ ಈ ಕಾಯಿಲೆ ಉಂಟಾಗುತ್ತದೆ. ಒಮ್ಮೆ ಫ್ಯಾಟಿ ಲಿವರ್ ಕಾಯಿಲೆ ಕಾಣಿಸಿಕೊಂಡರೆ ಗಂಭೀರವಾದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಪೋರ್ಚುಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದಿಂದ ಈ ವಿಷಯ ತಿಳಿದು ಬಂದಿದೆ.
ಇದನ್ನೂ ಓದಿ : Barley Benefits: ಪ್ರತಿದಿನ ಬಾರ್ಲಿ ನೀರು ಕುಡಿದರೆ ಏನಾಗುತ್ತೆ? ಸಿಗುವ ಆರೋಗ್ಯ ಪ್ರಯೋಜನಗಳೇನು?
ಮೂತ್ರದಲ್ಲಿ ಕಂಡುಬರುವ ಕೆಫೀನ್ ಮತ್ತು ನಾನ್-ಕೆಫೀನ್ ಪ್ರಮಾಣವನ್ನು ಫ್ಯಾಟಿ ಲಿವರ್ ನೊಂದಿಗೆ ಜೋಡಿಸುವ ಮೂಲಕ ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯಲ್ಲಿ ಇದರಲ್ಲಿ ಅತಿಯಾಗಿ ಕಾಫಿ ಸೇವಿಸಿದವರ ಲಿವರ್ ಆರೋಗ್ಯವಾಗಿರುವುದು ಕಂಡು ಬಂದಿದೆ. ಕಾಫಿ ಸೇವಿಸಿದವರಲ್ಲಿ ಫೈಬ್ರೋಸಿಸ್ ಅಪಾಯವೂ ಕಡಿಮೆ. ದೇಹದಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಹೊಂದಿರುವ ಜನರು, ತಮ್ಮ ದೇಹದಲ್ಲಿ ಫ್ಯಾಟಿ ಲಿವರ್ ಅಪಾಯವನ್ನು ಹೊಂದಿರುವುದು ಪತ್ತೆಯಾಗಿದೆ.
ಟೈಪ್ 2 ಡಯಾಬಿಟಿಸ್ ಇರುವವರು ಮತ್ತು ಅಧಿಕ ತೂಕ ಹೊಂದಿರುವ ಜನರು ಕಾಫಿಯನ್ನು ಸೇವಿಸಲು ಪ್ರಾರಂಭಿಸಿದರೆ ಯಕೃತ್ತು ಆರೋಗ್ಯಕರವಾಗಿರುತ್ತದೆ ಎನ್ನುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಈ ಮೂಲಕ ಫ್ಯಾಟಿ ಲಿವರ್ ನಂಥಹ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಇದನ್ನೂ ಓದಿ : Health Benefits of Beer for Kidneys : ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಹೋಗುತ್ತವೆ..! ಇದು ನಿಜವೇ?
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ