ದಿನಕ್ಕೊಂದು ಚಮಚ ತುಪ್ಪ ತಿನ್ನಿ...! ಬದಲಾವಣೆ ನೀವೇ ನೋಡಿ.

ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ. ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು . ನೀವು ದಿವಸಕ್ಕೆ ಒಂದು ಚಮಚ ತುಪ್ಪ ತಿಂದರೆ ಸಾಕು. ದೇಹಾರೋಗ್ಯದಲ್ಲಾಗುವ ಬದಲಾವಣೆಯನ್ನು ನೀವೇ ನೋಡಿ.

Written by - Ranjitha R K | Last Updated : Jun 8, 2021, 08:36 AM IST
  • ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ.
  • ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು.
  • ದಿನಕ್ಕೊಂದು ಚಮಚ ತುಪ್ಪ ತಿನ್ನಿ, ಬದಲಾವಣೆ ನೋಡಿ.
ದಿನಕ್ಕೊಂದು ಚಮಚ ತುಪ್ಪ ತಿನ್ನಿ...! ಬದಲಾವಣೆ ನೀವೇ ನೋಡಿ. title=
ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು. (photo zeen news)

ನವದೆಹಲಿ :  ತುಪ್ಪ ತಿಂದರೆ ದಪ್ಪ ಆಗ್ತಾರೆ ಅನ್ನೋದು ತಪ್ಪು ಕಲ್ಪನೆ. ಬೇಸಿಗೆಯಲ್ಲಿ ದೇಸಿ ತುಪ್ಪ ತಿಂದರೆ ತುಂಬಾ ಒಳ್ಳೆಯದು (Ghee benefits). ಯಾಕೆಂದರೆ, ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ2, ಕ್ಯಾಲ್ಸಿಯಂ, ಒಮೆಗಾ ತ್ರೀ ಫ್ಯಾಟೀ ಆಸಿಡ್, ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ನೀವು ದಿವಸಕ್ಕೆ ಒಂದು ಚಮಚ ತುಪ್ಪ ತಿಂದರೆ ಸಾಕು. ದೇಹಾರೋಗ್ಯದಲ್ಲಾಗುವ ಬದಲಾವಣೆಯನ್ನು ನೀವೇ ನೋಡಿ.  ಒಂದು ಚಮಚ ತುಪ್ಪದಿಂದಾಗುವ ಲಾಭ (Health benefits of ghee) ಏನೇನು..? ನೀವೇ ಓದಿ.

1. ಇಮ್ಯೂನಿಟಿ
ತುಪ್ಪದಲ್ಲಿ (Ghee) ವಿಟಮಿನ್ ಎ ಮತ್ತು ವಿಟಮಿನ್ ಸಿ ಭರ್ಜರಿಯಾಗಿವೆ. ಇವು ಇಮ್ಯೂನಿಟಿಯನ್ನು (Immunity booster) ಹೆಚ್ಚಿಸುತ್ತದೆ. ಹಾಗಾಗಿ, ದಿನಕ್ಕೊಂದು ಚಮಚ ತುಪ್ಪ ತಿನ್ನಿ.

ಇದನ್ನೂ ಓದಿ : Weight Loss Drink: ಬೊಜ್ಜು ಹೊಟ್ಟೆ ಸಮಸ್ಯೆಗೆ ಪರಿಹಾರ ಈ ತುಳಸಿ-ಅಜ್ವಾಯಿನ್ ಕಷಾಯ

2. ಎನರ್ಜಿ
ಎನರ್ಜಿ ಹೆಚ್ಚಿಸಲು ತುಪ್ಪ ತಿನ್ನಲಾಗುತ್ತದೆ.  ತುಪ್ಪದಲ್ಲಿ ಫ್ಯಾಟಿ ಆಸಿಡ್ ಅಲ್ಲದೆ ಹಲವು ಪೋಷಕಾಂಶಗಳೂ ಇವೆ.  ದಿನಕ್ಕೊಂದು ಚಮಚ ತುಪ್ಪ ತಿಂದರೆ ಎನರ್ಜಿ ಬೂಸ್ಟ್ ಆಗುತ್ತದೆ. 

3. ಮೆದುಳಿಗೆ
ದಿನಕ್ಕೊಂದು ಚಮಚ ತುಪ್ಪ ತಿಂದರೆ ಮೆದುಳಿಗೂ (brain) ಹಿತಕಾರಿ.  ತುಪ್ಪದಲ್ಲಿರುವ ವಿಟಮಿನ್ ಎ, ಡಿ ಮತ್ತು ಇ ಪೋಷಕಾಂಶಗಳು ಶರೀರವನ್ನು ಹೆಲ್ತಿಯಾಗಿಡುತ್ತದೆ. ಜೊತೆಗೆ ಮೆಮೊರಿ ಶಕ್ತಿಯನ್ನು (Memory power) ಹೆಚ್ಚಿಸುತ್ತವೆ. 

ಇದನ್ನೂ ಓದಿ : World Brain Tumour Day 2021: ಬ್ರೈನ್ ಟ್ಯೂಮರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರಿಂದ ಅಸ್ವಸ್ಥತೆಯನ್ನು ತಡೆಯಬಹುದು

4. ಜೀರ್ಣಕ್ರಿಯೆ
ತುಪ್ಪದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣ ಇದೆ. ಇವು ಶರೀರವನ್ನು ರೋಗದಿಂದ ರಕ್ಷಿಸುತ್ತವೆ. ಊಟಕ್ಕಿಂತ ಮೊದಲು ಒಂದು ಚಮಚ ತುಪ್ಪ ತಿಂದರೆ ಜೀರ್ಣ ಕ್ರಿಯೆ ಸರಾಗವಾಗುತ್ತದೆ. ಜೊತೆಗೆ ರೋಗಗಳಿಂದಲೂ ನಿಮ್ಮನ್ನು ರಕ್ಷಿಸಿತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News