Tulsi Ajwain Kadha: ಹೊಟ್ಟೆಯ ಕೊಬ್ಬನ್ನು (Belly Fat) ಕಡಿಮೆ ಮಾಡಬೇಕೆ? ಅಥವಾ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬೇಕೆ? ಎರಡಕ್ಕೂ ಮೊದಲು ದೇಹವನ್ನು ಡಿಟಾಕ್ಸಿಕೆಟ್ಮಾಡುವುದು ಬಹಳ ಮುಖ್ಯ. ಕರಿದ ಪದಾರ್ಥಗಳು ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಜನರು ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಒಂದು ವೇಳೆ ನೀವೂ ಕೂಡ ಇದೆ ಸಮಸ್ಯೆ ಎದುರಿಸುತ್ತಿದ್ದರೆ, ತುಳಸಿ ಮತ್ತು ಆಜ್ವಾಯಿನ್ ತಯಾರಿಸಿದ ಈ ಕಷಾಯವನ್ನು ಪ್ರಯತ್ನಿಸಿ ನೋಡಿ. ಈ ಕಷಾಯವು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಆದ್ದರಿಂದ ಈ ಕಷಾಯವನ್ನು ತಯಾರಿಸುವ ಸರಿಯಾದ ವಿಧಾನ ಮತ್ತು ಪ್ರಯೋಜನಗಳು ಏನೆಂದು ತಿಳಿಯೋಣ ಬನ್ನಿ.
ಇದನ್ನೂ ಓದಿ- Kesar kulfi recipe : ಮನೆಯಲ್ಲೇ ಮಾಡಿ ಕೇಸರಿ ಕುಲ್ಫಿ, ತುಂಬಾ ಸಿಂಪಲ್, ಮಕ್ಕಳಿಗೂ ಇಷ್ಟ ಆಗುತ್ತೆ.!
ತುಳಸಿ ಹಾಗೂ ಅಜ್ವಾಯಿನ್ ನಿಂದ ಕಷಾಯ ತಯಾರಿಸುವ ವಿಧಾನ (How To Prepare Tulsi Ajwain Kadha)
Weight Loss Drink - ತುಳಸಿ-ಅಜ್ವಾಯಿನ್ ಕಷಾಯ ತಯಾರಿಸಲು, ಮೊದಲು ಒಂದು ಚಮಚ ಒಣಗಿದ ಅಜ್ವಾಯಿನ್ ಅನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಅದರ ನಂತರ, ಬೆಳಿಗ್ಗೆ 4 ರಿಂದ 5 ತುಳಸಿ ಎಲೆಗಳನ್ನು ಅಜ್ವೈನ್ ನೀರಿನಲ್ಲಿ ಕುದಿಸಿ. ಈಗ ನೀರನ್ನು ಗ್ಲಾಸಿನಲ್ಲಿ ಫಿಲ್ಟರ್ ಮಾಡಿ ಬಿಸಿ ಅಥವಾ ತಣ್ಣಗಾಗಿಸಿ ಸೇವನೆ ಮಾಡಿ. ತ್ವರಿತ ಮತ್ತು ಉತ್ತಮ ಫಲಿತಾಂಶಗಳಿಗಾಗಿ, ಇದನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಅದರಲ್ಲಿ ಹೆಚ್ಚಿನದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.
ಇದನ್ನೂ ಓದಿ- Curd Benefits : ಮೊಸರಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ ಪ್ರಯೋಜನಗಳು
ತುಳಸಿ-ಅಜ್ವಯಿನ್ ಕಷಾಯದ ಲಾಭಗಳು (Benefits Of Tulsi-Ajwain Kadha)
>> ಅಜ್ವಾಯಿನ್ ಸೇವನೆಯಿಂದ ಮೆಟಾಬಾಲಿಜಂ ಉತ್ತಮವಾಗಿರುತ್ತದೆ. ತುಳಸಿ ದೇಹಕ್ಕೆ ನೈಸರ್ಗಿಕ ರೀತಿಯಲ್ಲಿ ಡಿಟಾಕ್ಸ್ ಮಾಡುತ್ತದೆ.
>> ಅಜ್ವಾಯಿನ್ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರಾಗಿ ಡೈಜೇಶನ್ ಉತ್ತಮವಾಗುತ್ತದೆ. ಇನ್ನೊಂದೆಡೆ ತುಳಸಿ ದೇಹದಿಂದ ವಿಷಯುಕ್ತ ಪದಾರ್ಥಗಳನ್ನು ಹೊರ ಹಾಕಿ, ತೂಕ ಇಳಿಕೆಗೆ ಸಹಕರಿಸುತ್ತದೆ.
>> ಅಜ್ವಾಯಿನ್ ನೀರು ಸೇವಿಸುವುದರಿಂದ ದೇಹದ ಮೆಟಾಬಾಲಿಜಂ ಹೆಚ್ಚಾಗುತ್ತದೆ. ಇದರಿಂದ ಬೊಜ್ಜು ಕರಗುತ್ತದೆ. ಇನ್ನೊಂದೆಡೆ ತುಳಸಿ ದೇಹದಲ್ಲಿನ ಅಸಿಡಿಟಿ, ಹೊಟ್ಟೆ ಉರಿತ ಸಮಸ್ಯೆಯನ್ನು ದೂರಗೊಳಿಸುವುದರ ಜೊತೆಗೆ ಬಾಡಿ ಪಿಹೆಚ್ ಲೆವಲ್ ನನ್ನು ಸರಿಯಾಗಿಡುತ್ತದೆ.
>> ಅಜ್ವಾಯಿನ್ ನಲ್ಲಿ ಥೈಮೊಲ್ ಇರುತ್ತದೆ. ಇದು ಕ್ಯಾಲ್ಸಿಯಂ ಅನ್ನು ನಿಮ್ಮ ಹೃದಯದ ನಾಳಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದರಿಂದ ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿರುತ್ತದೆ. ಇನ್ನೊಂದೆಡೆ ತುಳಸಿ ಶರೀರದ (Health Tips) ಮೆಟಾಬಾಲಿಕ್ ದರವನ್ನು ಹೆಚ್ಚಿಸಿ, ಹೆಚ್ಚುವರಿ ಕ್ಯಾಲರಿ ಬರ್ನ್ ಮಾಡಲು ಸಹಕರಿಸುತ್ತದೆ.
ಇದನ್ನೂ ಓದಿ-Diabetes Control : ಡಯಾಬಿಟಿಸ್ ನಿಯಂತ್ರಣಕ್ಕೆ 'ಮಾವಿನ ಎಲೆ' ಮದ್ದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ