Diabetes : ಬ್ಲಡ್‌ ಶುಗರ್‌ ನಿಭಾಯಿಸುವ 4 ಪರಿಣಾಮಕಾರಿ ವಿಧಾನಗಳು

Diabetes Control Tips : ಮಧುಮೇಹದ ವಿಷಯವು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದ್ದರೂ, ಹೈಪೋಗ್ಲೈಸೀಮಿಯಾದ ಸಮಸ್ಯೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿಷಯವೇ ಆಗಿದೆ. ಇದು, ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಸಾಧಾರಣ ಶ್ರೇಣಿಗಿಂತ ಕಡಿಮೆ ಇರುವಂತಹ ಪರಿಸ್ಥಿತಿಯಾಗಿದೆ. 

Written by - Chetana Devarmani | Last Updated : Sep 4, 2022, 01:27 PM IST
  • ಬ್ಲಡ್‌ ಶುಗರ್‌ ನಿಭಾಯಿಸುವ 4 ಪರಿಣಾಮಕಾರಿ ವಿಧಾನಗಳು
  • ರಕ್ತದಲ್ಲಿನ ಗ್ಲುಕೋಸ್ ಮಟ್ಟ ಕಾಪಾಡಿಕೊಳ್ಳುವುದು ಹೇಗೆ?
Diabetes : ಬ್ಲಡ್‌ ಶುಗರ್‌ ನಿಭಾಯಿಸುವ 4 ಪರಿಣಾಮಕಾರಿ ವಿಧಾನಗಳು  title=
ಮಧುಮೇಹ

Diabetes Control Tips : ಮಧುಮೇಹವು, ಭಾರತದ ಆರೋಗ್ಯ ಹೊರೆಯ ಮೇಲೆ ಗಣನೀಯ ಪ್ರಭಾವವೇರ್ಪಡಿಸುತ್ತಿದೆ. ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ (Indian Council of Medical Research) ಇತ್ತೀಚೆಗೆ ಕೈಗೊಂಡ ಅಧ್ಯಯನದ ಪ್ರಕಾರ, ಭಾರತವು ಜಗತ್ತಿನ ಎರಡನೇ ಅತಿದೊಡ್ಡ ವಯಸ್ಕ ಮಧುಮೇಹಿಗಳ ಜನಸಂಖ್ಯೆಯನ್ನು ಹೊಂದಿದ್ದು ಜಗತ್ತಿನಲ್ಲಿ ಮಧುಮೇಹವಿರುವ ಪ್ರತಿ ಆರನೇ ವ್ಯಕ್ತಿ ಭಾರತೀಯರಾಗಿರುತ್ತಾರೆ. ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಮಧುಮೇಹವಿರುವ ಜನರ ಸಂಖ್ಯೆಯು 150% ಹೆಚಾಗಿದೆ. 

ಮಧುಮೇಹದ ವಿಷಯವು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದ್ದರೂ, ಹೈಪೋಗ್ಲೈಸೀಮಿಯಾದ ಸಮಸ್ಯೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿಷಯವೇ ಆಗಿದೆ. ಇದು, ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಸಾಧಾರಣ ಶ್ರೇಣಿಗಿಂತ ಕಡಿಮೆ ಇರುವಂತಹ ಪರಿಸ್ಥಿತಿಯಾಗಿದೆ. ಕಡಿಮೆ ರಕ್ತಲ್ಲಿನ ಗ್ಲುಕೋಸ್ ಮಟ್ಟವನ್ನು ಇನ್ಸುಲಿನ್ ಪ್ರತಿಕ್ರಿಯೆ ಅಥವಾ ಇನ್ಸುಲಿನ್ ಶಾಕ್ ಎಂದೂ ಕರೆಯಲಾಗುತ್ತದೆ. 

ಕಡಿಮೆ ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳಿಗೆ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಕ್ರಿಯೆ ವಿಭಿನ್ನವಾಗಿದ್ದರೂ, ಕಡಿಮೆ ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಸಾಮಾನ್ಯ ಸೂಚಕಗಳು ಭಯ ಅಥವಾ ಆತಂಕ, ಬೆವರುವಿಕೆ, ನಡುಕ ಮತ್ತು ತೇವಾಂಶ, ಇರಿಸುಮುರುಸು ಅಥವಾ ಅಸಹನೆ, ಶೀಘ್ರ ಹೃದಯಬಡಿತ, ತಲೆಹಗುರಾಗಿರುವಿಕೆ ಅಥವಾ ತಲೆಸುತ್ತುವಿಕೆ ಮುಂತಾದವನ್ನು ಒಳಗೊಂಡಿರಬಹುದು. ಗಂಭೀರವಾದ ಸಂದರ್ಭಗಳಲ್ಲಿ, ರೋಗಿಗಳಿಗೆ ಅತಿಗೊಂದಲ, ಜಡತ್ವ, ತೂಕಡಿಕೆ ಅಥವಾ ಮಂದದೃಷ್ಟಿ ಅಥವಾ ಮಾತನಾಡುವುದಕ್ಕೆ ಕಷ್ಟವಾಗುವುದು ಏರ್ಪಡಬಹುದು. 

ಇದನ್ನೂ ಓದಿ: ಅಧಿಕ ಕೊಲೆಸ್ಟ್ರಾಲ್‌ನ ಶತ್ರು ಈ ಹಸಿರುಕಾಳು: ಇದನ್ನು ನೆನೆಸಿ ತಿನ್ನುವುದರಿಂದ ಸಿಗುತ್ತೆ ಅಪಾರ ಪ್ರಯೋಜನ

ಪುಣೆಯ ಸಮಾಲೋಚಕ ಮಧುಮೇಹತಜ್ಞರಾದ ಡಾ. ಸುಹಾಸ್ ಎರಂಡೆ,“ಹೈಪೋಗ್ಲೈಸೀಮಿಯಾ ಎಂದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ(ಗ್ಲುಕೋಸ್) ಮಟ್ಟವು ಸಾಧಾರಣ ಶ್ರೇಣಿಗಿಂತ ಕಡಿಮೆ ಇರುವ ಪರಿಸ್ಥಿತಿ. ಪ್ರತಿಯೊಬ್ಬ ವ್ಯಕ್ತಿಯ ಗ್ಲುಕೋಸ್ ಮಟ್ಟಗಳು ಕಡಿಮೆಯಾದಾಗ, ಆಕೆ ಅಥವಾ ಆತನ ಲಕ್ಷಣಗಳು ಭಿನ್ನವಾಗಿರುತ್ತವೆ. ಆದ್ದರಿಂದ, ನೀವು ನಿರಂತರವಾಗಿ ನಿಮ್ಮ ಗ್ಲುಕೋಸ್ ಮಟ್ಟಗಳನ್ನು ಗಮನಿಸುತ್ತಿದ್ದು ನೀವು ಕಡಿಮೆ ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದೀರಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಗ್ಲುಕೋಸ್ ಪ್ರವೃತ್ತಿ ಕುರಿತಾದ ವಾಸ್ತವ ಸಮಯದ ಮಾಹಿತಿಯನ್ನು ಒದಗಿಸುವಂತಹ ಚುಚ್ಚುವಿಕೆ ನೋವುಮುಕ್ತವಾದ ನಿರಂತರ ಗ್ಲುಕೋಸ್ ಮೇಲುಸ್ತುವಾರಿ ಸಾಧನಗಳು ಇಂದು ಲಭ್ಯವಿದ್ದು ವ್ಯಕ್ತಿಯ ಗ್ಲೈಸೀಮಿಕ್ ಬದಲಾವಣೆಗಳ 24-ಘಂಟೆಗಳ ಚಿತ್ರಣವನ್ನು ಒದಗಿಸುತ್ತವೆ.”ಎಂದು ಹೇಳಿದರು. 

ಮಧುಮೇಹವಿರುವ ಕೆಲವು ವ್ಯಕ್ತಿಯಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸದಿರಬಹುದು. ಆದರೆ, ಬಹುತೇಕ ಮಂದಿ ಅದನ್ನು ಗಮನಿಸುವುದೂ ಇಲ್ಲ. ಹೀಗಾದಾಗಲೇ ಕಡಿಮೆ ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳನ್ನು ನಿಭಾಯಿಸುವುದು ಕಠಿಣವಾಗುತ್ತದೆ. ಇದು ಗಂಭೀರವಾದ ಎಪಿಸೋಡ್ ಅಥವಾ ವೈದ್ಯಕೀಯ ತುರ್ತುಸ್ಥಿತಿಗಳಿಗೆ ಎಡೆಮಾಡಿಕೊಡಬಹುದು. ಹೈಪೋಗ್ಲೈಸೀಮಿಯಾವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ವಿಧಾನಗಳನ್ನು ಕೆಳಗೆ ನೀಡಲಾಗಿದೆ: 

15-15 ನಿಯಮ: ಈ ನಿಯಮವು, 15 ಗ್ರಾಂ ಕಾರ್ಬೋಹೈಡ್ರೇಟ್‍ಗಳನ್ನು ಸೇವಿಸಿ 15 ನಿಮಿಷಗಳ ತರುವಾಂiÀ ರಕ್ತಲ್ಲಿನ ಗ್ಲುಕೋಸ್ ಮಟ್ಟಗಳನ್ನು ಪರೀಕ್ಷಿಸಿಕೊಳ್ಳುವುದಾಗಿದೆ. ಗ್ಲುಕೋಸ್ ಮಟ್ಟಗಳನ್ನು ಸಾಮಾನ್ಯ ಮಟ್ಟಕ್ಕೆ ತರಲು ಹಣ್ಣು, ಸಿಹಿಪದಾರ್ಥಗಳು ಅಥವಾ ಸಾಮಾನ್ಯ ಸೋಡಾ, ಜೇನು ನಿಂಬೆರಸ, ಮುಂತಾದ ಪಾನೀಯಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಆಗಲೂ ಸುಧಾರಿಸದಿದ್ದರೆ, ಕೂಡಲೇ ತುರ್ತು ವೈದ್ಯಕೀಯ ನೆರವು ಪಡೆದುಕೊಳ್ಳಿ. 

ಆಹಾರಸೇವನೆ ತಪ್ಪಿಸಬೇಡಿ: ಹೈಪೋಗ್ಲೈಸೀಮಿಯಾ ಏರ್ಪಡುವ ಅತ್ಯಂತ ಸಾಮಾನ್ಯ ಪರಿಸ್ಥಿತಿ ಎಂದರೆ ಆಹಾರಸೇವನೆಯನ್ನು ತಪ್ಪಿಸಿಕೊಂಡಾಗ. ಆದ್ದರಿಂದ, ಹೈಪೋಗ್ಲೈಸೀಮಿಯಾದ ಎಪಿಸೋಡ್‍ಗಳನ್ನು ತಡೆಗಟ್ಟಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಹೆಚ್ಚುವರಿಯಾಗಿ, ಭಾರತದಲ್ಲಿ ಕೈಗೊಂಡ ಒಂದ ಅಧ್ಯಯನದ ಪ್ರಕಾರ, ಬಿಜಿ ಶೆಡ್ಯೂಲ್‍ಗಳಿಂದಾಗಿ ಬೇರೆ ಬೇರೆ ಸಮಯಗಳಲ್ಲಿ ಆಹಾರ ಸೇವಿಸುವುದರಿಂದ ಅವರು ಹೈಪೋಗ್ಲೈಸೀಮಿಯಾದ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ, ಮಧುಮೇಹವಿರುವ ವೃದ್ಧಮಹಿಳೆಯರಿಗೆ ಸಮಯಕ್ಕೆ ಸರಿಯಾದ ಆಹಾರಸೇವನೆಯ ಕುರಿತು ರೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅರಿವು ಮೂಡಿಸುವುದು ಅತಿಮುಖ್ಯ. ಇದು, ಅವರಲ್ಲಿ ಹೈಪೋಗ್ಲೈಸೀಮಿಯಾವನ್ನು ತಡೆಗಟ್ಟುತ್ತದೆ. 

ನಿರಂತರ ಗ್ಲುಕೋಸ್ ಮೇಲುಸ್ತುವಾರಿ: ಶಿಸ್ತುಬದ್ಧ ಮಧುಮೇಹ ನಿರ್ವಹಣೆಯು, ನಿಯಮಿತವಾದ ಗ್ಲುಕೋಸ್ ಮೇಲುಸ್ತುವಾರಿಯನ್ನು ಒಳಗೊಂಡಿದ್ದು, ಇದು ತಂತ್ರಜ್ಞಾನದೊಂದಿಗೆ ಈಗ ಸುಲಭವಾಗಿದೆ. ಸೆನ್ಸಾರ್-ಆಧಾರಿತ ಸಿಜಿಎಮ್ ಉಪಕರಣಗಳು ಗ್ಲುಕೋಸ್ ಮಟ್ಟದ ದಿಕ್ಕಿನ ಪ್ರವೃತ್ತಿಯನ್ನು ತೋರಿಸಿ ಕಡಿಮೆ ರಕ್ತದ ಗ್ಲುಕೋಸ್ ಮಟ್ಟಗಳು ಏರ್ಪಟ್ಟ ಸಂದರ್ಭದಲ್ಲಿ ರೋಗಿಗೆ ಎಚ್ಚರಿಕೆ ನೀಡುತ್ತದೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳನ್ನು ನಿಭಾಯಿಸುವಲ್ಲಿ, ಆಹಾರಕ್ರಮ, ವ್ಯಾಯಾಮ ಮತ್ತು ಜೀವನಶೈಲಿಯ ಪುನರ್ನಿರ್ಮಾಣವೂ ಒಳಗೊಂಡಿದ್ದು ಇವೆಲ್ಲಾ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕೆ ನೆರವಾಗುತ್ತವೆ. 

ಇದನ್ನೂ ಓದಿ: Beauty Tips: ಚರ್ಮ, ಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತೆ ಈ ಎಣ್ಣೆ

ನಿಮ್ಮ ಮಧುಮೇಹ ತಜ್ಞರು(ಡಯಾಬಿಟಾಲಜಿಸ್ಟ್)ಅವರನ್ನು ಮರೆಯದಿರಿ: ಹೈಪೋಗ್ಲೈಸೀಮಿಯಾಕ್ಕಾಗಿ ವೈದ್ಯಸಮಾಲೋಚನೆ ರಾಜಿಮಾಡಿಕೊಳ್ಳುವ ಸಂಗತಿಯಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆಮಟ್ಟಗಳು ಸಾಮಾನ್ಯಕ್ಕೆ ಹಿಂದಿರುಗುತ್ತಿದ್ದರೂ ನಿಮ್ಮ ವೈದ್ಯರಿಗೆ ವಿಷಯ ತಿಳಿಸುತ್ತಿರಿ. ಮಧುಮೇಹವಿರುವವರು, ಡಯಾಬಿಟಾಲಜಿಸ್ಟ್‍ಗಳು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ಅನಿವಾರ್ಯವಾಗಿ ಮರುಗಣಿಸಬೇಕಾದಬಹುದಾದ ಬದಲಾವಣೆಗಳನ್ನು ಅನುಭವಿಸಬಹುದು. ಚಿಕಿತ್ಸೆಯು ರೋಗಿಯಿಂದ ರೋಗಿಗೆ ವ್ಯತ್ಯಾಸವಾಗುತ್ತದೆ ಮತ್ತು ಪರಿಸ್ಥಿತಿಯ ತೀವ್ರತೆಯೊಂದಿಗೂ ವ್ಯತ್ಯಾಸವಾಗಬಹುದು. 

ಮಧುಮೇಹವು ದೀರ್ಘಾವಧಿ ಕಾಯಿಲೆಯಾಗಿದ್ದು ಜೀವನಪರ್ಯಂತದ ಆರೈಕೆ ಅಗತ್ಯ. ಆದರೆ ತಂತ್ರಜ್ಞಾನª ಮುಂದುವರಿದಿರುವಂತಹ ಈಗಿನ ಕಾಲದಲ್ಲಿ ಗ್ಲುಕೋಸ್ ಮಟ್ಟಗಳನ್ನು ನಿಭಾಯಿಸುವುದು ಸರಳವೂ ಸುಲಭವೂ ಆಗಿದೆ. ನೀವು ಮಾಡಬೇಕಾದುದೆಲ್ಲಾ ಇಷ್ಟೆ. ವೈದ್ಯರೊಡನೆ ಸಂಪರ್ಕದಲ್ಲಿರಿ. ಕೆಲವು ಸರಳ ಹೆಜ್ಜೆಗಳ ಮೂಲಕ ಮಧುಮೇಹವಿದ್ದರೂ ಪರಿಪೂರ್ಣ ಜೀವನ ನಡೆಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News