ಬೆಂಗಳೂರು : ಉಪ್ಪಿನ ಅಂಶ ಹೆಚ್ಚಿರುವ ಆಹಾರ ಸೇವಿಸಿದರೆ, ವ್ಯಾಯಾಮ ಮಾಡಿದರೆ ಅಥವಾ ಬಿಸಿಲಿನಲ್ಲಿ ಸುತ್ತಾಡಿ ಬಂದರೆ ಬಾಯಾರಿಕೆ ಆಗುವುದು ಸಹಜ. ಅಗತ್ಯವಿದ್ದಷ್ಟು ನೀರು (Water) ಕುಡಿದ ನಂತರ ಬಾಯಾರಿಕೆ ನೀಗುತ್ತದೆ. ಒಬ್ಬ ವ್ಯಕ್ತಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಎನ್ನುವುದು ಬೇರೆ ಬೇರೆ ಮಾನದಂಡಗಳಲ್ಲಿ ನಿರ್ಧಾರವಾಗುತ್ತದೆ. ಅಂದರೆ ವ್ಯಕ್ತಿ ಎಷ್ಟು ಕ್ರಿಯಾತ್ಮಕವಾಗಿರುತ್ತಾರೆ, ಯಾವ ವಾತಾವರಣದಲ್ಲಿರುತ್ತಾರೆ, ಅಥವಾ ಹವಾಮಾನ ಹೇಗಿದೆ ಎಂಬುದರ ಮೇಲೆ ಕೂಡಾ ಇದು ನಿರ್ಧಾರವಾಗುತ್ತದೆ.
ನೆನಪಿರಲಿ ಅಧಿಕ ಬಾಯಾರಿಕೆ ಕೂಡಾ ಒಂದು ಕಾಯಿಲೆ :
ಆರೋಗ್ಯವಂತ ವ್ಯಕ್ತಿ ಸಾಮಾನ್ಯವಾಗಿ ದಿನಕ್ಕೆ 3ರಿಂದ 4 ಲೀ ನಷ್ಟು ನೀರು (water) ಕುಡಿಯುತ್ತಾನೆ. ಇದಕ್ಕಿಂತ ಕಡಿಮೆ ನೀರು ಕುಡಿಯುವುದು ಕೂಡಾ ಸರಿಯಲ್ಲ. ಇದರಿಂದ ದೇಹದಲ್ಲಿ ನೀರಿ ಅಂಶ ಕಡಿಮೆಯಾಗುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಕೂಡಾ ಸಮಸ್ಯೆಯನ್ನುಂಟು ಮಾಡಬಹುದು. ಸಾಮಾನ್ಯ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಗೆ ಪದೇ ಪದೇ ಬಾಯಾರುತ್ತಿದ್ದರೆ (Feeling thirsty) ಇದು ಗಂಭೀರ ರೋಗದ ಲಕ್ಷಣವಾಗಿರಬಹುದು. ಅಧಿಕ ಬಾಯಾರಿಕೆ ಒಂದು ಕಾಯಿಲೆಯಾಗಿದ್ದು ಅದನ್ನು ಪಾಲಿಡಿಪ್ಸಿಯಾ (Polydypsia) ಎಂದು ಕರೆಯುತ್ತಾರೆ. ಈ ಕಾಯಿಲೆಗೆ ತುತ್ತಾದವರು ಎಷ್ಟೇ ನೀರು ಕುಡಿದರೂ ಅವರ ಬಾಯಿ ಒಣಗುವ ಅನುಭವವೇ ಆಗುತ್ತಿರುತ್ತದೆ.
ಇದನ್ನೂ ಓದಿ : Premature Ageing : ಇನ್ನೂ ವಯಸ್ಸಿರುವಾಗಲೇ ವಯಸ್ಸಾಯಿತು ಅನ್ನಿಸ್ತಾ ಇದೆಯಾ..? ಖಂಡಿತಾ ಓದಿ
ಈ ರೋಗಗಳಿದ್ದರೆ ಅಂಥವರಿಗೆ ಅಧಿಕ ಬಾಯಾರಿಕೆಯಾಗುತ್ತಿರುತ್ತದೆ :
1. ಡಯಾಬಿಟಿಸ್ : ಅಧಿಕ ರಕ್ತದೊತ್ತಡವಿದ್ದರೆ (High Blood Pressure) ಹೆಚ್ಚು ಬಾಯಾರಿಕೆಯಾಗುತ್ತಿರುತ್ತದೆ. ಮಧುಮೇಹದಿಂದಾಗಿ (Diabetes) ದೇಹದಲ್ಲಿ ದ್ರವಗಳನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಪರಿಣಾಮದಿಂದಾಗಿ, ದೇಹದಲ್ಲಿ ನೀರಿನ ಕೊರತೆ ಮತ್ತು ಅಸಮತೋಲನ ಉಂಟಾಗುತ್ತದೆ. ಈ ಕಾರಣದಿಂದಾಗಿ, ಪದೇ ಪದೇ ಬಾಯಾರಿದ ಅನುಭವವಾಗುತ್ತಿರುತ್ತದೆ.
2. ಡಿಹೈಡ್ರೇಶನ್ : ದೇಹದಲ್ಲಿ ದ್ರವಗಳ ಕೊರತೆಯಿದ್ದಾಗ, ಅದು ಅಂಗಾಗಳ ಕಾರ್ಯದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಡಿಹೈಡ್ರೇಶನ್ (Dehydration) ತೀವ್ರಗೊಂಡಾಗ, ನವಜಾತ ಶಿಶುಗಳಿಗೆ ಮತ್ತು ವೃದ್ಧರಿಗೆ ಮಾರಕವಾಗಿ ಪರಿಣಮಿಸಬಹುದು. ಅತಿಯಾದ ಬೆವರು, ವಾಂತಿ ಮತ್ತು ಅತಿಸಾರದಿಂದ ಈ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ : Ear pain Home Remedies: ಕಿವಿನೋವು ಜೀವ ಹಿಂಡುತ್ತಿದೆಯಾ..? ಇಲ್ಲಿದೆ ಸಿಂಪಲ್ ಮನಮದ್ದು.
3. ಬಾಯಿ ಒಣಗುವುದು (Dry Mouth) : ಬಾಯಿ ಒಣಗಲು ಪ್ರಾರಂಭಿಸಿದಾಗ ಹೆಚ್ಚು ಬಾಯಾರಿಕೆಯಾಗುತ್ತದೆ. ಅನೇಕ ಬಾರಿ, ಬಾಯಿಯಲ್ಲಿರುವ ಗ್ರಂಥಿಗಳಲ್ಲಿ ಲಾಲಾರಸ ಕಡಿಮೆಯಾಗುತ್ತದೆ. ಇದರಿಂದಾಗಿ ಬಾಯಿ ಒಣಗಲು ಪ್ರಾರಂಭವಾಗುತ್ತದೆ ಮತ್ತು ಒಣ ಬಾಯಿಯ ಸಮಸ್ಯೆ ಕಂಡು ಬರುತ್ತದೆ. ಕ್ಯಾನ್ಸರ್ (Cancer), ನರಗಳ ಸಮಸ್ಯೆ ಅಥವಾ ತಂಬಾಕಿನ ಅತಿಯಾದ ಬಳಕೆಯು ಬಾಯಿಯ ಒಣ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾದಾಗ ಪದೇ ಪದೇ ಬಾಯಾರಿಕೆಯಾಗುತ್ತಿರುತ್ತದೆ.
4.ರಕ್ತಹೀನತೆ : ಆರೋಗ್ಯಕರ ಕೆಂಪು ರಕ್ತ ಕಣಗಳು (Healthy Cells) ವ್ಯಕ್ತಿಯ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ, ಅದನ್ನು ರಕ್ತಹೀನತೆ (Anemia) ಎಂದು ಕರೆಯಲಾಗುತ್ತದೆ. ರಕ್ತಹೀನತೆಯ ಸಮಸ್ಯೆ ತೀವ್ರವಾಗಿದ್ದರೂ ಸಹ, ವ್ಯಕ್ತಿಗೆ ತುಂಬಾ ಬಾಯಾರಿಕೆಯಾಗಲು ಶುರುವಾಗುತ್ತದೆ. ಅಲ್ಲದೆ ಹೆಚ್ಚು ಬೆವರುವುದು ಸಹ ಪ್ರಾರಂಭವಾಗುತ್ತದೆ ಮತ್ತು ಶಕ್ತಿಹೀನತೆ ಕೂಡಾ ಕಂಡುಬರುತ್ತದೆ.
ಇದನ್ನೂ ಓದಿ : Water Habits : ನೀರು ಅಮೃತ ಸಮಾನ ನಿಜ, ಹೀಗೆ ಮಾಡಿದರೆ ಅದು ವಿಷವಾಗಬಹುದು..!
5. ಅಜೀರ್ಣ : ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನ ಸೇವಿಸುವುದರಿಂದ ಆಗಾಗ ಬಾಯಾರಿಕೆಯಾಗುತ್ತದೆ. ಇದಕ್ಕೆ ಕಾರಣ, ಅಂತಹ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸಾಮಾನ್ಯಕ್ಕಿಂತ ಹೆಚ್ಚಿನ ನೀರು ಬೇಕಾಗುತ್ತದೆ ಎನ್ನುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.