ಬೆಂಗಳೂರು: ಇತ್ತೀಚಿನ ಜೀವನಶೈಲಿಯಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಬರುವುದು ಸಾಮಾನ್ಯವಾಗಿದೆ. ಆದರೆ ಒಮ್ಮೆ ಇವುಗಳು ಬಂದರೆ ನಾವು ಸೇವಿಸುವ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಕೆಲವು ತಿಂಡಿಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ರಾಮಬಾಣವಾಗಿವೆ. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿನ ಶುಗರ್ ನಿಯಂತ್ರಣದಲ್ಲಿರುತ್ತದೆ. ಇವುಗಳನ್ನು ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಿಸುವುದರ ಜೊತೆಗೆ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ನಿಯಂತ್ರಿಸಲು ಉತ್ತಮ ಆಹಾರವು ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಅಂತಹ ಕೆಲವು ಆರೋಗ್ಯಕರ ತಿಂಡಿಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ…
ಕಡಲೆ- ಡಯಾಬಿಟಿಸ್ (Diabetes) ರೋಗಿಗಳಿಗೆ ಕಡಲೆಯನ್ನು ಅತ್ಯುತ್ತಮ ತಿಂಡಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆರಳೆಣಿಕೆಯಷ್ಟು ಕಡಲೆ ತಿನ್ನುವುದರಿಂದ, ನಿಮ್ಮ ಹಸಿವು ಸಹ ಶಾಂತವಾಗುತ್ತದೆ ಮತ್ತು ನಿಮ್ಮ ಶುಗರ್ ಲೆವೆಲ್ ಕೂಡ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಸಕ್ಕರೆ ರೋಗಿಯು ಯಾವಾಗಲೂ ಹುರಿದ ಕಡಲೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದು ಉತ್ತಮ.
ಹಣ್ಣು ಮತ್ತು ಸಲಾಡ್ :
ನೀವು ಸಿಹಿ ತಿನ್ನಲು ಹಂಬಲಿಸುತ್ತಿದ್ದರೆ, ನೀವು ಹಣ್ಣುಗಳನ್ನು ತಿನ್ನಬಹುದು(ಸಕ್ಕರೆ ಅಂಶ ಹೆಚ್ಚು ಇರುವ ಹಣ್ಣುಗಳನ್ನು ಹೊರತುಪಡಿಸಿ). ಸಲಾಡ್ ಅನ್ನು ಊಟಕ್ಕೆ ಮೊದಲು ತಿನ್ನಬಹುದು. ಆದರೆ ಅವುಗಳಿಗೆ ಹೆಚ್ಚಿನ ಸಿಹಿ ಸೇರಿಸಬಾರದು. ಏಕೆಂದರೆ ಸಿಹಿ ಸೇರಿಸಿ ಹಣ್ಣು, ತರಕಾರಿ ಸೇವಿಸುವುದರಿಂದ ಸಕ್ಕರೆಯ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಚಳಿಗಾಲದಲ್ಲಿ ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ, ಪಡೆಯಿರಿ ಈ ಆರೋಗ್ಯಕರ ಪ್ರಯೋಜನ
ತರಕಾರಿಗಳು:
ತರಕಾರಿಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಸೌತೆಕಾಯಿ, ಕ್ಯಾರೆಟ್, ಕೋಸುಗಡ್ಡೆಗಳಿಂದ ಆರೋಗ್ಯಕರ ಅಂಶಗಳಿದ್ದು ಅವುಗಳನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಬಹುದು.
ನೀವು Weight ಕಡಿಮೆ ಮಾಡಲು ಬಯಸಿದರೆ ಈ ತರಕಾರಿಗಳಿಂದ ದೂರವಿರಿ
ಡ್ರೈಫ್ರೂಟ್ಸ್:
ಮಧುಮೇಹ ಇರುವವರು ಸದಾ ತಮ್ಮೊಂದಿಗೆ ಒಣ ಹಣ್ಣುಗಳನ್ನು ಇರಿಸಿಕೊಂಡಿರುವುದು ಉತ್ತಮ. ಇದರಲ್ಲಿ ನೀವು ಬಾದಾಮಿ, ವಾಲ್ನಟ್ಸ್, ಗೋಡಂಬಿ, ಪಿಸ್ತಾವನ್ನು ಸೇರಿಸಬಹುದು. ನೀವು ಬಯಸಿದರೆ ನೀವು ಅವುಗಳನ್ನು ಹುರಿದು ಸೇವಿಸಬಹುದು. ಡ್ರೈಫ್ರೂಟ್‌ಗಳಲ್ಲಿ (Dry fruits) ರುಚಿಯೊಂದಿಗೆ ಪೌಷ್ಠಿಕಾಂಶಗಳು ಸಮೃದ್ಧವಾಗಿವೆ. ಒಣ ಹಣ್ಣುಗಳನ್ನು ಪ್ರತಿದಿನ ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದಲ್ಲದೆ ತೂಕವನ್ನೂ ನಿಯಂತ್ರಿಸಬಹುದು.
ಪಾಪ್‌ಕಾರ್ನ್:
ಪಾಪ್‌ಕಾರ್ನ್ ತುಂಬಾ ಕಡಿಮೆ ಕ್ಯಾಲೋರಿ ತಿಂಡಿ. ನೀವು ಅದನ್ನು ತಕ್ಷಣ ಮಾಡಬಹುದು. ಪಾಪ್‌ಕಾರ್ನ್‌ನಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು ಅದು ಹಸಿವನ್ನು ಶಾಂತಗೊಳಿಸುತ್ತದೆ ಮತ್ತು ತೂಕವನ್ನು ಸಹ ನಿಯಂತ್ರಿಸುತ್ತದೆ.
ಕಡಲೆಕಾಯಿ :
ಕಡಲೆಕಾಯಿಗಳು ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತವೆ. ಇದು ಮಧುಮೇಹ ಇರುವ ಜನರಿಗೆ ಒಳ್ಳೆಯದು. ಕಡಲೆಕಾಯಿಯಲ್ಲಿ ಫೈಬರ್, ಪ್ರೋಟೀನ್ ಮತ್ತು ಆಲ್ಫಾ ಲಿಪೊಯಿಕ್ ಆಮ್ಲ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಸೇವಿಸುವುದರಿಂದ ಹೃದ್ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.