ಉತ್ತಮ ಶುಶ್ರೂಷೆಗಾಗಿ ಆರಂಭದಲ್ಲೇ ಎಚ್‍ಐವಿ ಪತ್ತೆ!

HIV Awareness : ಭಾರತದಲ್ಲಿ, ಎಚ್‍ಐವಿಯೊಂದಿಗೆ ಜೀವಿಸುತ್ತಿರುವ 2.35 ದಶಲಕ್ಷ ಜನರ(PLHIV) ಪೈಕಿ, ಕೇವಲ 1.78 ದಶಲಕ್ಷ ಮಂದಿಗೆ ಮಾತ್ರ ತಮ್ಮ ಸ್ಥಿತಿಗತಿಯ ಬಗ್ಗೆ ಅರಿವಿದೆ. ರಾಷ್ಟ್ರವ್ಯಾಪಿಯಾಗಿ, ಎಚ್‍ಐವಿ ಪರೀಕ್ಷೆಯಲ್ಲಿ ಮಾಡಲಾದ ಪ್ರಮುಖ ಸುಧಾರಣೆಗಳೂ ಕೂಡ ಇತ್ತೀಚೆನ ಕೆಲವು ವರ್ಷಗಳಲ್ಲಿ ನಿಸ್ಸಹಾಯವಾಗಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ರೋಗಪತ್ತೆ ಪ್ರವೇಶಾವಕಾಶಗಳಿಗೆ ಅನೇಕ ಅಡಚಣೆಗಳನ್ನು ಎದುರಿಸಿದ್ದರು. 

Written by - Zee Kannada News Desk | Last Updated : Dec 2, 2022, 05:39 PM IST
  • ಎಚ್‍ಐವಿಯೊಂದಿಗೆ ಜೀವಿಸುತ್ತಿರುವ 2.35 ದಶಲಕ್ಷ ಜನ
  • ಕೇವಲ 1.78 ದಶಲಕ್ಷ ಮಂದಿಗೆ ಮಾತ್ರ ತಮ್ಮ ಸ್ಥಿತಿಗತಿಯ ಬಗ್ಗೆ ಅರಿವು
  • ಉತ್ತಮ ಶುಶ್ರೂಷೆಗಾಗಿ ಆರಂಭದಲ್ಲೇ ಎಚ್‍ಐವಿ ಪತ್ತೆ!
ಉತ್ತಮ ಶುಶ್ರೂಷೆಗಾಗಿ ಆರಂಭದಲ್ಲೇ ಎಚ್‍ಐವಿ ಪತ್ತೆ!  title=
ಎಚ್‍ಐವಿ

HIV Awareness : ಭಾರತದಲ್ಲಿ, ಎಚ್‍ಐವಿಯೊಂದಿಗೆ ಜೀವಿಸುತ್ತಿರುವ 2.35 ದಶಲಕ್ಷ ಜನರ(PLHIV) ಪೈಕಿ, ಕೇವಲ 1.78 ದಶಲಕ್ಷ ಮಂದಿಗೆ ಮಾತ್ರ ತಮ್ಮ ಸ್ಥಿತಿಗತಿಯ ಬಗ್ಗೆ ಅರಿವಿದೆ. ರಾಷ್ಟ್ರವ್ಯಾಪಿಯಾಗಿ, ಎಚ್‍ಐವಿ ಪರೀಕ್ಷೆಯಲ್ಲಿ ಮಾಡಲಾದ ಪ್ರಮುಖ ಸುಧಾರಣೆಗಳೂ ಕೂಡ ಇತ್ತೀಚೆನ ಕೆಲವು ವರ್ಷಗಳಲ್ಲಿ ನಿಸ್ಸಹಾಯವಾಗಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ರೋಗಪತ್ತೆ ಪ್ರವೇಶಾವಕಾಶಗಳಿಗೆ ಅನೇಕ ಅಡಚಣೆಗಳನ್ನು ಎದುರಿಸಿದ್ದರು. UNAIDSನ ಪ್ರಪ್ರಥಮ ಗುರಿ-ಅಂದರೆ, ‘ರೋಗಪತ್ತೆ ಮಾಡಲಾದವರಿಗೆ ತಕ್ಷಣದ ಚಿಕಿತ್ಸೆ ಒದಗಿಸಬಲ್ಲ, ವೈರಾಣು ನಿಯಂತ್ರಣವನ್ನು ಪ್ರೋತ್ಸಾಹಿಸಬಲ್ಲ ಮತ್ತು 2030ರ ವೇಳೆಗೆ, ಹೊಸ ಎಚ್‍ಐವಿ ಸೋಂಕುಗಳಿಗೆ ಕೊನೆಹಾಕುವುದಕ್ಕೆ ಸಾಧ್ಯವಾಗುವಂತೆ ಮಾಡಲು, ಎಲ್ಲಾ ಎಚ್‍ಐವಿ ಪಾಸಿಟಿವ್ ರೋಗಿಗಳ ಪೈಕಿ 95% ರೋಗಿಗಳ ರೋಗಪತ್ತೆ ಮಾಡುವುದಕ್ಕೆ ನೆರವಾಗಬಲ್ಲ’ ಮತ್ತು ರಾಷ್ಟ್ರ ಸೋಂಕು ಪ್ರತಿಕ್ರಿಯೆಯನ್ನು ಬಲಪಡಿಸಲು  ರಾಷ್ಟ್ರದ ಪರೀಕ್ಷಾ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ.  

ಇದನ್ನೂ ಓದಿ : ಬೊಜ್ಜು, ಅಧಿಕ ಬಿಪಿ, ಹೃದ್ರೋಗಗಳಿಗೆ ರಾಮಬಾಣ ಈ ನೈಸರ್ಗಿಕ ಪಾನೀಯ

ಎಚ್‍ಐವಿ ಪಾಸಿಟಿವ್ ರೋಗಿಗಳ ಆರಂಭಿಕ ಮತ್ತು ನಿಖರವಾದ ಪತ್ತೆಹಚ್ಚುವಿಕೆ, ಆದಷ್ಟು ಶೀಘ್ರವಾಗಿ ಅಗತ್ಯವಾದ ಶುಶ್ರೂಷೆಗೆ ಪ್ರವೇಶಾವಕಾಶ ಒದಗಿಸಲು, ರೋಗಿಯ ಪಯಣವನ್ನು ಸರಳಗೊಳಿಸುವುದು ಬಹಳ ಮುಖ್ಯವಾದುದು. ಅದಕ್ಕಿಂತ ಹೆಚ್ಚಿಗೆ, ಇದು ಮುಂದಿನ ಎಚ್‍ಐವಿ ಪ್ರಸರಣಗಳನ್ನು ತಡೆಗಟ್ಟುತ್ತದೆ, ಏಕೆಂದರೆ, ತಮ್ಮ ಸೋಂಕಿನ ಬಗ್ಗೆ ಅರಿವು ಹೊಂದಿಲ್ಲದ ವ್ಯಕ್ತಿಗಳು ಬೇರೆಯವರಿಗೆ ಈ ವೈರಾಣುವನ್ನು ಹರಡು ಸಾಧ್ಯತೆ 3.5 ಪಟ್ಟು ಹೆಚ್ಚಾಗಿರುತ್ತದೆ. ಇದು ರೋಗಿಯ ಮರಣಸಂಭಾವ್ಯತೆ ಮತ್ತು ತೀವ್ರತೆಯನ್ನೂ ಕಡಿಮೆ ಮಾಡುತ್ತದೆ. 

ಭಾರತದ ಏಯ್ಡ್ಸ್ ಸಂಘದ ಅಧ್ಯಕ್ಷ ಮತ್ತು ಮುಂಬೈನ ಯೂನಿಸನ್ ಮೆಡಿಕೇರ್ ಅಂಡ್ ರಿಸರ್ಚ್ ಕೇಂದ್ರದಲ್ಲಿ ಸೋಂಕು ಕಾಯಿಲೆಗಳಲ್ಲಿ ಎಚ್‍ಐವಿಯಲ್ಲಿ ಸಮಾಲೋಚಕರಾದ ಡಾ. ಈಶ್ವರ್ ಗಿಲಾಡಾ, “ಭಾರತದಾದ್ಯಂತ ಎಚ್‍ಐವಿ ಹೊರೆ ಗಣನೀಯವಾಗಿದೆ. ಆದರೂ, ರಾಷ್ಟ್ರವ್ಯಾಪಿಯಾಗಿ ಎಚ್‍ಐವಿ ಪತ್ತೆಹಚ್ಚಲಾದ ಅಂದಾಜು ಜನರ ಪೈಕಿ 79.4% ಮಾತ್ರ ಪಾಸಿಟಿವ್ ಎಂದು ಪತ್ತೆಹಚ್ಚಲ್ಪಟ್ಟಿದ್ದಾರೆ. ಹೆಚ್ಚು ಜನರು ಪರೀಖ್ಷಾ ಸೇವೆಗಳಿಗೆ ಪ್ರವೇಶಾವಕಾಶ ಹೊಂದಿರುವಂತೆ ಮಾಡುವ ಸ್ಪಷ್ಟ ಅಗತ್ಯತೆ ಕಾಣುತ್ತಿದೆ. ಪ್ರಬಲವಾದ ನಿಯಂತ್ರಣ ಪ್ರಕ್ರಿಯೆಗಳಡಿ ರ್ಯಾಪಿಡ್ ಪಾಯಿಂಟ್-ಆಫ್-ಕೇರ್ ಅಂತಹ ಸರಳವಾದ ಮತ್ತು ಪ್ರಮಾಣೀಯ ಎಚ್‍ಐವಿ ಪರೀಕ್ಷಾ ಕೊಡುಗೆಗಳನ್ನು ಬಳಸಿ ನಾವು ಪರೀಕ್ಷೆಯಲ್ಲಿರುವ ಇಂತಹ ಅಂತರಗಳನ್ನು ಕಡಿಮೆ ಮಾಡಬಹುದು. ಆರಂಭಿಕ ಪರೀಕ್ಷೆ ಮತ್ತು ಸೋಂಕಿನ ಪತ್ತೆಯು, ಅದರಲ್ಲೂ ವಿಶೇಷವಾಗಿ, ಅಧಿಕ ವೈರಲ್ ಲೋಡ್ ಕಾರಣದಿಂದಾಗಿ ಪ್ರಸರಣದ ಅಧಿಕ ಅಪಾಯ ಇರುವಂತಹ ವ್ಯಕ್ತಿಗಳಿರುವ ತೀವ್ರತವಾದ ಸಂದರ್ಭಗಳಲ್ಲಿ, ಇದು ಬಹಳ ಮುಖ್ಯವಾಗುತ್ತದೆ. ಇದು, ಉತ್ತಮ ರೋಗಿ ಫಲಿತಾಂಶಗಳಿಗೆ ಬೆಂಬಲ ನೀಡುವುದರ ಜೊತೆಗೇ ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡುವ ಚಿಕಿತ್ಸೆಗಳಿಗೆ ನೆರವು ನೀಡುತ್ತದೆ.”ಎಂದು ಹೇಳಿದರು. 

ವೃತ್ತಿಪರರಿಂದ, ಚಿಕಿತ್ಸಾಲಯ ಸೆಟ್ಟಿಂಗ್‍ನಲ್ಲಿ ಕ್ಷಿಪ್ರ ಎಚ್‍ಐವಿ ಸ್ಕ್ರೀನಿಂಗ್ ನೆರವೇರಿಸುವುದನ್ನು ಸೂಚಿಸುವ ಪಾಯಿಂಟ್-ಆಫ್-ಕೇರ್ ಪರೀಕ್ಷೆಯಂತ ಆವಿಷ್ಕಾರಗಳು, ಸಮಯಕ್ಕೆ ಸರಿಯಾಗಿ ಸೋಂಕಿನ ಪತ್ತೆ ಮಾಡಲ್ಪಡುವುದನ್ನು ಖಾತರಿಪಡಿಸುವಲಿ ಬಹಳ ಮುಖ್ಯ. ಇದು ರೋಗಪತ್ತೆಗೆ ಪ್ರವೇಶಾವಕಾಶವನ್ನು ಸುಧಾರಿಸುವುದರ ಜೊತೆಗೆ, ಜನರು ಕೇವಲ 20 ನಿಮಿಷಗಳಲ್ಲಿ ನಿಖರ ಫಲಿತಾಂಶಗಳೊಡನೆ ತಮ್ಮ ಸೋಂಕಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದಕ್ಕೂ ನೆರವಾಗುತ್ತದೆ. ದೇಶದ ದೂರದೂರದಲ್ಲಿರುವ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ರೋಗಪತ್ತಿಗೆ ಪ್ರವೇಶಾವಕಾಶ ಇರುವಂತಹ ಭಾರತದಂತಹ ದೇಶದಲ್ಲಿ ಕ್ಷಿಪ್ರಗತಿಯ(ರ್ಯಾಪಿಡ್) ಪಾಯಿಂಟ್-ಆಫ್-ಕೇರ್ ಪರಿಹಾರಗಳು ಬಹಳವೇ ಮುಖ್ಯವಾಗುತ್ತವೆ.  

ಇಂದು, ಪುರಾವೆ-ಆಧಾರಿತ 4ನೆ ಪೀಳಿಗೆ ತಂತ್ರಜ್ಞಾನ-ಆಧಾರಿತ ಪರೀಕ್ಷೆಗಳ ಪರಿಚಯದೊಂದಿಗೆ, ಪಾಯಿಂಟ್-ಆಫ್-ಕೇರ್ ಪರೀಕ್ಷಾ ಮಾನದಂಡಗಳು ವಿಕಸನಗೊಳ್ಳುತ್ತಲೇ ಇದ್ದು, ಹಿಂದಿನ 2ನೆ ಮತ್ತು 3ನೆ ಪೀಳಿಗೆ ಪರೀಕ್ಷೆಗಳನ್ನು ಹಿಂದಿಕ್ಕುತ್ತಿವೆ. ಈ ಹೊಸ ಪರೀಕ್ಷೆಗಳು ಬಳಸಲು ಸುಲಭವಾಗಿದ್ದು ಪ್ರಸ್ತುತದ 3ನೆ ಪೀಳಿಗೆ ಪರೀಕ್ಷೆಗಳ ಕಣ್ಣುತಪ್ಪಿಸಿದ 28% ಸೋಂಕುಗಳನ್ನು ಪತ್ತೆಹಚ್ಚಿ, ಬಹುದೊಡ್ಡ ಸಂಖ್ಯೆಯ ಮಂದಿ ತಮ್ಮ ಸ್ಥಿತಿಗತಿಯ ಬಗ್ಗೆ ಅರಿವು ಹೊಂದಿ ತಮ್ಮ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಗುಣಮಟ್ಟದ ಶುಶ್ರೂಷೆ  ಆರಂಭಿಸುವುದಕ್ಕೆ ನೆರವಾಗುತ್ತವೆ. ಈ ಪರೀಕ್ಷೆಯು ಆರಂಭಿಕ ಪತ್ತೆಹಚ್ಚುವಿಕೆಯಲ್ಲಿ ನೆರವಾಗಿ. ಸೋಂಕು ಏರ್ಪಟ್ಟ 15-25 ದಿನಗಳ ತರುವಾಯವೂ ಕಾಣಿಸಿಕೊಳ್ಳಬಹುದಾದ ಎವ್‍ಐವಿ ಪ್ರತಿಕಾಯಗಳು(ಆ್ಯಂಟಿಬಾಡೀಸ್) ಮತ್ತು ಪ್ರತಿರೋಧಗಳು(ಆ್ಯಂಟಿಜೆನ್ಸ್) ಎರಡನ್ನೂ  ಗುರುತಿಸುವ ಸಾಮಥ್ರ್ಯ ಹೊಂದಿದೆ. ಈ ರೀತಿ, ಅತ್ಯಲ್ಪಾವಧಿಯಲ್ಲೇ ಹೆಚ್ಚು ನಿಖರವಾಗಿದೆ. ಇದು, ಎಚ್‍ಐವಿ ಪತ್ತೆಹಚ್ಚುವಿಕೆಯ ವಿಂಡೋ ಅವಧಿಯನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದಾದ ಬ್ಲಡ್ ಬ್ಯಾಂಕ್(ರಕ್ತನಿಧಿ) ಸ್ಕ್ರೀನಿಂಗ್‍ನಲ್ಲೂ ಮುಖ್ಯವಾಗಿದೆ. 

ಇದನ್ನೂ ಓದಿ : ಈ ಅಭ್ಯಾಸಗಳಿಂದ ದೂರವಿದ್ದರೆ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಭಾರತದಲ್ಲಿ ಅಬಾಟ್‍ನ ರ್ಯಾಪಿಡ್ ಡಯಾಗ್ನೊಸ್ಟಿಕ್ಸ್ ವ್ಯಾಪಾರ ವಿಭಾಗದ ಜನರಲ್ ಮ್ಯಾನೇಜರ್ ಸುನಿಲ್ ಮೆಹ್ರ, “ಪಾಯಿಂಟ್ ಆಫ್ ಕೇರ್ ನಲ್ಲಿ ಇರುವ ವ್ಯಕ್ತಿಗಳಿಗೆ ಎಚ್‍ಐವಿ ರೋಗಪತ್ತೆ ಪರಿಹಾರಗಳಿಗೆ ಇರುವ ಪ್ರವೇಶಾವಕಾಶವನ್ನು ಹೆಚ್ಚಿಸಿ ಸೋಂಕಿನ ಗಂಭೀರ ಪಾಯಿಂಟ್‍ಗಳಲ್ಲಿ ಶೀಘ್ರವಾದ ಮತ್ತು ನಿಖರವಾದ ಫಲಿತಾಂಶಗಳನ್ನು ಖಾತರಿಪಡಿಸಲು ಅಬಾಟ್ ಬದ್ಧವಾಗಿದೆ. 4ನೆ ಪೀಳಿಗೆಯ ಪಾಯಿಂಟ್ ಆಪ್ ಕೇರ್ ಪರೀಕ್ಷೆಯು, ಪರೀಕ್ಷೆಯ ಹೊಸ ಮಾನದಂಡವನ್ನು ಪ್ರತಿಫಲಿಸುತ್ತದೆ ಮತ್ತು ವೈರಲ್ ಲೋಡ್ ಕಡಿಮೆ ಇರುವಾಗಲೂ ಎಚ್‍ಐವಿ ಪಾಸಿಟಿವ್ ಸಂದರ್ಭಗಳ ಆರಂಭಿಕ ಪತ್ತೆಹಚ್ಚುವಿಕೆಗೆ ಬೆಂಬಲ ಒದಗಿಸಿ ರೋಗಿ ಶುಶ್ರೂಷೆಯಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ನಾವು, ದೇಶದ ಎಚ್‍ಐವಿ ಹೊರೆಯನ್ನು ತಗ್ಗಿಸುವುದಕ್ಕೆ ನೆರವಾಗಲು ಖಾಸಗಿ ಮತ್ತು ಸರ್ಕಾರೀ ಆಸ್ಪತ್ರೆಗಳು ಹಾಗೂ ರೋಗಪತ್ತೆ ಕೇಂದ್ರಗಳಿಗೆ ಈ ಮುಂದಿನ ಪೀಳಿಗೆ ಸಾಧನಗಳನ್ನು ಒದಗಿಸುವ ಮೂಲಕ ಅವರಿಗೆ ಬೆಂಬಲ ಒದಗಿಸುತ್ತಿದ್ದೇವೆ.”ಎಂದು ಹೇಳಿದರು. 

ಅಧಿಕ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯೊಂದಿಗೆ ಸಜ್ಜುಗೊಂಡಿರುವ 4ನೆ ಪೀಳಿಗೆ ಪರೀಕ್ಷೆಯು, ಜಹಿಂದಿನ ಪೀಳಿಗೆಯ ಪರೀಕ್ಷೆಗಳಿಗೆ ಹೋಲಿಸಿದರೆ, ಪರೀಕ್ಷೆಯನ್ನು ಕೈಗೊಳ್ಳಬೇಕೆಂದು ಬಯಸುವ ಎಲ್ಲಾ ಎಚ್‍ಐವಿ ಸೋಂಕಿತರ ಪೈಕಿ 5ರಿಂದ 20% ಮಂದಿಯ ಹೆಚ್ಚು ತೀವ್ರತರವಾದ ಸೋಂಕುಗಳನ್ನು ಪತ್ತೆಹಚ್ಚುತ್ತದೆ. ಇದು, ಪತ್ತೆಹಚ್ಚುವಿಕೆಯ ವಿಂಡೋ ಅವಧಿಯನ್ನು, 3ನೆ ಪೀಳಿಗೆ ಪರೀಕ್ಷೆಗಳಲ್ಲಿ ಕಂಡುಬಂದಂತೆ, 20 ಅಥವಾ ಅದಕ್ಕಿಂತ ತಡವಾದ ಕಾಲಾವಧಿಯ ಪತ್ತೆಹಚ್ಚುವಿಕೆ ಸಮಯಕ್ಕೆ ಹೋಲಿಸಿದರೆ, ಇನ್ನೂ ಬೇಗನೇ, ಅಂದರೆ, ಎಚ್‍ಐವಿಯೊಂದಿಗೆ ಜೀವಿಸುತ್ತಿರುವ 12 ದಿನಗಳೊಳಗೆ, ಮುಚ್ಚಲು ನೆರವಾಗುತ್ತದೆ.

ಆದ್ದರಿಂದ, ಎಚ್‍ಐವಿ-ಪಾಸಿಟಿವ್ ರೋಗಿಗಳನ್ನು ಬೇಗನೇ ಪತ್ತೆಹಚ್ಚಿ ಶುಶ್ರೂಷೆಗೆ ಅವರನ್ನು ಸಂಪರ್ಕಗೊಳಿಸಬಹುದು. ತೀವ್ರತರವಾದ ಪ್ರಸರಣಗಳು ಹೆಚ್ಚಿನ ವೈರಲ್ ಲೋಡ್ ಮತ್ತು ಪ್ರಸರಣದ ಅಪಾಯಕ್ಕೆ ಕಾರಣವಾಗುವುದರಿಂದ, ಪ್ರಸರಣದ ಸರಪಳಿಯನ್ನೂ ಮುರಿಯಬಹುದು. ರಾಷ್ಟ್ರೀಯ ಎಚ್‍ಐವಿ ಹೊರೆಯನ್ನು ತಗ್ಗಿಸಲು, ಕಳಂಕವನ್ನು ತೊಲಗಿಸಲು, ಮತ್ತು ಆರಂಭಿಕ ಹಾಗೂ ಸೂಕ್ತವಾದ ಚಿಕಿತ್ಸೆಗಳ ಪ್ರವೇಶಾವಕಾಶ ಒದಗಿಸುವ ಮೂಲಕ ರೋಗಿ ಫಲಿತಾಂಶಗಳನ್ನು ಹೆಚ್ಚಿಸಬೇಕೆನ್ನುವ ಭಾರತದ ಪ್ರಯತ್ನಗಳಿಗೆ ಬೆಂಬಲ ಒದಗಿಸುವುದಕ್ಕೆ ಪರೀಕ್ಷೆಗಳಲ್ಲಿನ ಆವಿಷ್ಕಾರ ಮುಖ್ಯವಾಗಿದೆ.

ಇದನ್ನೂ ಓದಿ : ಸ್ನಾನದ ಬಳಿಕ ಟವಲ್ ಸುತ್ತಿಕೊಳ್ಳುವ ಅಭ್ಯಾಸ ನಿಮಗೂ ಇದೆಯಾ ? ಈ ರೋಗಗಳ ಅಪಾಯ ತಪ್ಪಿದ್ದಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News