ಆಯುರ್ವೇದ ಔಷಧಿಗಳಲ್ಲಿ ಲವಂಗಕ್ಕೆ ವಿಶೇಷ ಸ್ಥಾನವಿದೆ. ಇದನ್ನು ಬಳಸಿ ಆಹಾರ ತಯಾರಿಸುವುದರಿಂದ ರುಚಿಯಾಗಿಯೂ ಇರುತ್ತದೆ. ಅಲ್ಲದೆ, ಮನೆ ಮದ್ದಾಗಿಯೂ ಇದನ್ನು ಬಳಸಬಹುದು. ಪ್ರತಿದಿನ ಕೇವಲ 2 ಲವಂಗ ಸೇವಿಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗಿ, ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಲವಂಗ ಸೇವನೆಯಿಂದಾಗುವ ಪ್ರಯೋಜನಗಳು
ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ : ಪ್ರತಿನಿತ್ಯ 2 ಲವಂಗವನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಕುಡಿಯಿರಿ.
ಹಲ್ಲುನೋವು : 2 ಲವಂಗಕ್ಕೆ ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿ ಹಲ್ಲುಗಳಲ್ಲಿ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.
ಬಾಯಿಯ ದುರ್ಗಂಧ ನಿವಾರಣೆ : ಪ್ರತಿನಿತ್ಯ 2 ಲವಂಗ ಮತ್ತು ಒಂದು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಬಾಯಿ ಹುಣ್ಣು ನಿವಾರಣೆ : ಬಾಯಲ್ಲಿ ಹುಣ್ಣಾಗಿದ್ದರೆ, 2 ಲವಂಗವನ್ನು ಸ್ವಲ್ಪ ಜಜ್ಜಿ ಬಾಯಿಯಲ್ಲಿ ಇಟ್ಟುಕೊಳ್ಳಿ. ಹಾಗೇ ಬಾಯಿಯಲ್ಲಿ ಬರುವ ಎಂಜಲನ್ನು ಉಗುಳಿ. ಹೀಗೆ ಮಾಡುವುದರಿಂದ ಹುಣ್ಣು ಮಾಯವಾಗಿ ನೋವು ಕಡಿಮೆಯಾಗುತ್ತದೆ.
ಶೀತ ಮತ್ತು ಜ್ವರ : ಹದವಾದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಶೀತ ನಿವಾರಣೆಯಾಗುತ್ತದೆ. ಇಲ್ಲವಾದರೆ, 2 ಲವಂಗ ಮತ್ತು 4-5 ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ.
ಕತ್ತು ನೋವು : 2 ಲವಂಗವನ್ನು ಜಜ್ಜಿ, ಸಾಸಿವೆ ಎಣ್ಣೆಯಲ್ಲಿ ಹಾಕಿ ಮಿಶ್ರಮಾಡಿ. ನಂತರ ಅದನ್ನು ಕುತ್ತಿಗೆ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿ.
ಒತ್ತಡ ನಿವಾರಣೆ: ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿ.
ವಾಕರಿಕೆ: ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.