ಎಚ್ಚರಿಕೆ..! ವೇಗವಾಗಿ ಆಹಾರ ತಿನ್ನುತ್ತೀರಾ..? ಗಂಭೀರ ಆರೋಗ್ಯ ಸಮಸ್ಯೆ ಬರುತ್ತೆ

Eating fast causes : ಆಹಾರವು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಆದರೆ ವೇಗವಾಗಿ ತಿನ್ನುವ ಅಭ್ಯಾಸವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ. ಹೇಗೆ ಎಂದು ತಿಳಿಯೋಣ..

Written by - Krishna N K | Last Updated : Jul 20, 2023, 07:43 PM IST
  • ಆಹಾರವು ನಮ್ಮ ಜೀವನದ ಪ್ರಮುಖ ಭಾಗವಾಗಿದೆ.
  • ವೇಗವಾಗಿ ತಿನ್ನುವ ಅಭ್ಯಾಸವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ತರಾತುರಿಯಲ್ಲಿ ತಿನ್ನುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ತಿಳಿಯೋಣ.
ಎಚ್ಚರಿಕೆ..! ವೇಗವಾಗಿ ಆಹಾರ ತಿನ್ನುತ್ತೀರಾ..? ಗಂಭೀರ ಆರೋಗ್ಯ ಸಮಸ್ಯೆ ಬರುತ್ತೆ title=

Eating fast Health causes : ಆಹಾರವು ನಮ್ಮ ಜೀವನದ ಪ್ರಮುಖ ಭಾಗ. ಕೆಲವರು ಸಮಯದ ಅಭಾವದಿಂದಾಗಿ ವೇಗವಾಗಿ ಆಹಾರ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ..? ತರಾತುರಿಯಲ್ಲಿ ತಿನ್ನುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ತಿಳಿಯೋಣ ಬನ್ನಿ..

ತಿನ್ನುವ ಆತುರದಲ್ಲಿ ನಾವು ಹೆಚ್ಚಿನ ಆಹಾರವನ್ನು ಸರಿಯಾಗಿ ಜಗಿಯದೆ ನುಂಗುತ್ತೇವೆ. ಈ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಕಷ್ಟವಾಗುತ್ತದೆ. ಇದರಿಂದಾಗಿ ನಮ್ಮ ಹೊಟ್ಟೆಯು ಬೆಳೆಯುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ: ಬಿಳಿ ಕೂದಲಿಗೆ ಸುಲಭ ಮನೆ ಮದ್ದು

ಬೇಗ ತಿನ್ನುವುದರಿಂದ ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಸರಿಯಾಗಿ ಸಂಸ್ಕರಿಸಲು ಬೇಕಾದಷ್ಟು ಸಮಯವನ್ನು ನೀಡುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗುತ್ತದೆ, ಇದು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ.. ಎಚ್ಚರಿಕೆ

ಊಟ ಮಾಡುವುದರಿಂದ ದೇಹದ ಹಸಿವಿನ ಭಾವನೆಯ ಮೇಲೂ ಪರಿಣಾಮ ಬೀರುತ್ತದೆ. ನಾವು ಬೇಗನೆ ತಿನ್ನುವಾಗ, ನಮ್ಮ ಮೆದುಳಿಗೆ 'ಪೂರ್ಣ' ಸಂಕೇತವನ್ನು ಸ್ವೀಕರಿಸಲು ಸಮಯ ತೆಗೆದುಕೊಳ್ಳುತ್ತದೆ. ಇದು ನಾವು ಹೆಚ್ಚು ಆಹಾರವನ್ನು ಸೇವಿಸುವಂತೆ ಮಾಡುತ್ತದೆ, ಇದರಿಂದ ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ: ಸಣ್ಣಗಾಗಬೇಕೆ ? ನಿತ್ಯ ಈ ನೀರು ಸೇವಿಸಿ ! ಎರಡೇ ವಾರದಲ್ಲಿ ಪರಿಣಾಮ ತಿಳಿಯುವುದು

ನಾವು ಆಹಾರದ ಕಡೆಗೆ ನಮ್ಮ ಆಲೋಚನೆಯನ್ನು ಬದಲಾಯಿಸಬೇಕಾಗಿದೆ. ಆಹಾರವು ಹಸಿವನ್ನು ಪೂರೈಸುವ ಸಾಧನವಲ್ಲ. ಇದು ನಮ್ಮ ದೇಹಕ್ಕೆ ಶಕ್ತಿಯ ಪ್ರಮುಖ ಮೂಲವಾಗಿದೆ. ಆಹಾರವನ್ನು ಸರಿಯಾಗಿ ಅಗೆದು ತಿನ್ನಬೇಕು. ಇಲ್ಲದಿದ್ದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. 

ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ತಿನ್ನುವ ವೇಗವನ್ನು ನಿಧಾನಗೊಳಿಸಬೇಕು. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಮಧುಮೇಹದಂತಹ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಧಾನವಾಗಿ ಕುಳಿತು ಆಹಾರ ಸೇವನೆ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News