ಹೊಸ ಪ್ರಭೇಧದ ಕೋವಿಡ್ ವೈರಸ್ ಪತ್ತೆ; ತತ್ತರವಾದ ಜಗತ್ತು- ಇಲ್ಲಿವೆ ಪ್ರಮುಖ ಬೆಳವಣಿಗೆಗಳ ಸಾರ

ಕೆಲವು ಆರೋಗ್ಯ ತಜ್ಞರು ಹೇಳುವ ಪ್ರಕಾರ ಬ್ರಿಟನ್ ನಲ್ಲಿ‌ ಹರಡಲು ಆರಂಭಿಸಿರುವ ಹೊಸ ಬಗೆಯ ಕೋವಿಡ್ ವೈರಾಣು ಹೆಚ್ಚು ಮಾರಕವಾಗಿದೆ ಅಥವಾ ಸಂಭಾವ್ಯ ಲಸಿಕೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ.

Written by - Yashaswini V | Last Updated : Dec 22, 2020, 08:18 AM IST
  • ಒಂದೇ ದಿನ 40 ದೇಶಗಳಿಂದ ಬ್ರಿಟನ್ ವಿಮಾನಗಳಿಗೆ ನಿಷೇಧ
  • ಮುಂಬೈನಲ್ಲಿ ನೈಟ್ ಕರ್ಫ್ಯೂ, ಕರ್ನಾಟಕದಲ್ಲಿ RT-PCR ಟೆಸ್ಟ್ ಕಡ್ಡಾಯ
  • ಹೊಸ ಪ್ರಭೇದದ ಕೋವಿಡ್ ವೈರಸ್ ಗೆ ಪುರಾವೆ ಇಲ್ಲ ಎಂದ ಅಮೆರಿಕ
ಹೊಸ ಪ್ರಭೇಧದ ಕೋವಿಡ್ ವೈರಸ್ ಪತ್ತೆ; ತತ್ತರವಾದ ಜಗತ್ತು- ಇಲ್ಲಿವೆ ಪ್ರಮುಖ ಬೆಳವಣಿಗೆಗಳ ಸಾರ title=
Coronavirus strain (File Image)

ನವದೆಹಲಿ: COVID-19 ಮಹಾಮಾರಿಗೆ ಮದ್ದು ಸಿಗಲಾರಂಭಿಸಿದೆ ಎನ್ನುವಷ್ಟರಲ್ಲಿ ಬ್ರಿಟನ್ ನಲ್ಲಿ ಹೊಸ ಪ್ರಬೇಧದ ಕೊರೊನಾವೈರಸ್ ಕಾಣಿಸಿಕೊಂಡು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಬ್ರಿಟನ್ ನಲ್ಲಿ ಹೊಸ ಬಗೆಯ ಕೊರೊನಾವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಆಗಿರುವ ಪ್ರಮುಖ ಬೆಳವಣಿಗೆಗಳ ಪಕ್ಷಿನೋಟ ನಿಮ್ಮ 'ಝೀ ಹಿಂದುಸ್ಥಾನ್ ಕನ್ನಡ'ದಲ್ಲಿ...

ಹೊಸ ಪ್ರಬೇಧದ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದೇ ದಿನ ಭಾರತವೂ ಸೇರಿದಂತೆ 40 ದೇಶಗಳು ಬ್ರಿಟನ್‌ನಿಂದ ಬರುವ ವಿಮಾನಗಳಿಗೆ ನಿಷೇಧ ವಿಧಿಸಿವೆ.

ಕೋವಿಡ್ -19 (Covid 19) ರ ರೂಪಾಂತರದ ಪ್ರಕರಣವನ್ನು ಡಚ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆಂದು ಖಚಿತ ಆಗುತ್ತಿದ್ದಂತೆ ಬ್ರಿಟನ್ ಮೇಲೆ ವಿಮಾಮ ನಿಷೇಧ ಏರಿದ ಮೊದಲ ದೇಶ ನೆದರ್ಲ್ಯಾಂಡ್ಸ್. ಬ್ರಿಟನ್ ಪ್ರವಾಸ ಮಾಡಿದ್ದ  ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ ಮತ್ತು ಇಟಲಿ ಪ್ರಜೆಗಳಲ್ಲೂ ಒಬ್ಬೊಬ್ಬರಿಗೆ ಹೊಸ ಬಗೆಯ ವೈರಸ್ ಕಾಣಿಸಿಕೊಂಡಿದೆ.

ಇದನ್ನೂ ಓದಿ: Corona vaccine ಬಗ್ಗೆ ಶುಭ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡ ದೇಶಗಳೆಂದರೆ ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್, ಕುವೈತ್, ಬೆಲ್ಜಿಯಂ, ಟರ್ಕಿ, ಡೆನ್ಮಾರ್ಕ್, ಇಸ್ರೇಲ್, ಐರ್ಲೆಂಡ್, ಬಲ್ಗೇರಿಯಾ, ಲಾಟ್ವಿಯಾ, ಎಲ್ ಸಾಲ್ವಡಾರ್, ರೊಮೇನಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಕ್ರೊಯೇಷಿಯಾ, ಪೋಲೆಂಡ್, ಸ್ವಿಟ್ಜರ್ಲೆಂಡ್, ಪೋರ್ಚುಗಲ್, ಮೊರಾಕೊ, ಸೌದಿ ಅರೇಬಿಯಾ, ಫಿನ್ಲ್ಯಾಂಡ್, ಇರಾನ್, ಲಕ್ಸೆಂಬರ್ಗ್, ಕೊಲಂಬಿಯಾ, ಚಿಲಿ, ಎಸ್ಟೋನಿಯಾ, ಲಿಥುವೇನಿಯಾ, ಅರ್ಜೆಂಟೀನಾ, ನಾರ್ವೆ, ಓಮನ್, ಟುನೀಶಿಯಾ, ಜೋರ್ಡಾನ್, ರಷ್ಯಾ, ಹಾಂಗ್ ಕಾಂಗ್, ಗ್ರೆನಡಾ, ಮಾಲ್ಟಾ, ಮಾರಿಷಸ್, ಪಾಕಿಸ್ತಾನ ಮತ್ತು ಸ್ಪೇನ್.

ಹೊಸ ಪ್ರಭೇದದ ಕೋವಿಡ್ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ (Britain) ಕಠಿಣ ಕ್ರಮಕ್ಕೆ ಮುಂದಾಗಿದೆ. ಜನ ಮನೆಯಲ್ಲೇ ಇರಬೇಕು (Stay at home) ಎಂದು ಕಟ್ಟಪ್ಪಣೆ ವಿಧಿಸಿದೆ. ಜನ ಮನೆಯಿಂದ ಹೊರಗೆ ಬರದಿದ್ದರೆ ಮಾತ್ರ ವೈರಸ್ ಹರಡುವುದನ್ನು ತಡೆಯಲು ಸಾಧ್ಯ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಥ್ ಹ್ಯಾಂಕಾಕ್ ಹೇಳಿದ್ದಾರೆ.

ಹೊಸ ರೀತಿಯ ಕೋವಿಡ್ 19 ವೈರಾಣು ಕಂಡುಬಂದಿದೆ ಎಂಬುದು ಬ್ರಿಟನ್ ಸರ್ಕಾರಕ್ಕೆ ಮೊದಲು ವರದಿಯಾಗಿದ್ದು ಡಿಸೆಂಬರ್ 18 ರಂದು. ಕೂಡಲೇ  ಯುಕೆ ಸರ್ಕಾರವು ಬ್ರಿಟನ್‌ನ ಕೆಲವು ಭಾಗಗಳಲ್ಲಿ '4 ಟೈರ್ ಸಿಟಿಗಳಲ್ಲಿ' ಹಲವು ನಿರ್ಬಂಧ ವಿಧಿಸಿತ್ತು. ಈಗ ಹೊಸ ರೂಪಾಂತರವು ಶೇಕಡಾ 70ರಷ್ಟು ಹೆಚ್ಚು ಹರಡಬಲ್ಲದು ಎಂದು ಹೇಳಲಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಸಮುದಾಯ ಆತಂಕ್ಕೀಡಾಗಿದೆ.

ಇದನ್ನೂ ಓದಿ: ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ

ಕೆಲವು ಆರೋಗ್ಯ ತಜ್ಞರು ಹೇಳುವ ಪ್ರಕಾರ ಬ್ರಿಟನ್ ನಲ್ಲಿ‌ ಹರಡಲು ಆರಂಭಿಸಿರುವ ಹೊಸ ಬಗೆಯ ಕೋವಿಡ್ ವೈರಾಣು ಹೆಚ್ಚು ಮಾರಕವಾಗಿದೆ ಅಥವಾ ಸಂಭಾವ್ಯ ಲಸಿಕೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (World Health Organization) ಸೇರಿದಂತೆ ಜಾಗತಿಕ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಸ್ಪಂದಿಸಿದ್ದಾರೆ. "ಇಂಗ್ಲೆಂಡ್‌ನ 1,000 ವ್ಯಕ್ತಿಗಳಲ್ಲಿ ವರದಿಯಾದ ಈ ಅನುವಂಶಿಕ ರೂಪಾಂತರದ ಬಗ್ಗೆ ನಮಗೆ ತಿಳಿದಿದೆ" ಎಂದು ಡಬ್ಲ್ಯುಎಚ್‌ಒ (WHO) ಉನ್ನತ ತುರ್ತು ತಜ್ಞ ಮೈಕ್ ರಯಾನ್ ಜಿನೀವಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (EMA) ಸೋಮವಾರ ಫಿಜರ್-ಬಯೋಎನ್ಟೆಕ್ ಕೊರೊನಾವೈರಸ್ ಲಸಿಕೆಗೆ ಷರತ್ತುಬದ್ಧ ಅನುಮೋದನೆ ನೀಡಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆಯನ್ನು ಶಿಫಾರಸು ಮಾಡಿದ ಯುರೋಪಿಯನ್ ಯೂನಿಯನ್ ನಿಯಂತ್ರಣ ಪ್ರಾಧಿಕಾರವು ಮುಂದಿನ ವರ್ಷ ತನ್ನ ಕೋವಿಡ್ -19 ಲಸಿಕೆಯ (Covid 19 Vaccine) ಬಗ್ಗೆ ಮುಂದಿನ ಡೇಟಾವನ್ನು ಸಂಗ್ರಹಿಸಿ ಸಲ್ಲಿಸುವಂತೆ ಫಾರ್ಮಾ ಸೂಚಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಒಂದು ಕೋಟಿ ದಾಟಿದ Covid 19 ಪ್ರಕರಣ

ಮಹಾರಾಷ್ಟ್ರ ಸರ್ಕಾರವು ಹೊಸ ಕೊರೋನವೈರಸ್ ಹರಡುವಿಕೆ ತಡೆಗಟ್ಟಲು ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ (Night Curfew)  ಘೋಷಿಸಿದೆ. ಡಿಸೆಂಬರ್ 22 ರಿಂದ ಜನವರಿ 5 ರವರೆಗೆ ಈ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಚಾಹಲ್ ತಿಳಿಸಿದ್ದಾರೆ.

ಯುಕೆ, ಡೆನ್ಮಾರ್ಕ್ ಮತ್ತು ನೆದರ್‌ಲ್ಯಾಂಡ್ಸ್‌ನ ಪ್ರಯಾಣಿಕರಿಗೆ RT-PCR ಪರೀಕ್ಷೆ ಮತ್ತು ಸಂಪರ್ಕತಡೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್  ತಿಳಿಸಿದ್ದಾರೆ. ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಪಬ್‌ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ತಮಿಳುನಾಡು ಸರ್ಕಾರ ಕಡಲತೀರಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧ ಏರಿದೆ.

ಇದನ್ನೂ ಓದಿ: ಕರೋನವೈರಸ್‌ನಿಂದಾಗಿ ಇನ್ನೊಬ್ಬ ಹಳೆಯ ಸ್ನೇಹಿತನನ್ನು ಕಳೆದುಕೊಂಡ Sachin Tendulka

ಬ್ರಿಟನ್ ನಲ್ಲಿ ಕಂಡುಬರುವ ಹೊಸ ಬಗೆಯ  ಕೊರೋನವೈರಸ್ ರೂಪಾಂತರ ಮಾರಕವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ-ಅಮೇರಿಕನ್ ವೈದ್ಯ ವಿವೇಕ್ ಮೂರ್ತಿ ಸೋಮವಾರ ಹೇಳಿದ್ದಾರೆ. ಯುಎಸ್ ಅಧ್ಯಕ್ಷ-ಚುನಾಯಿತ ಜೋ ಬಿಡನ್ ಅವರು ಸರ್ಜನ್ ಜನರಲ್ ಆಗಿ ನೇಮಕಗೊಂಡ ಮೂರ್ತಿ NNC ನ್ಯೂಸ್ ಗೆ ತಮ್ಮ‌ ಅಭಿಪ್ರಾಯ ತಿಳಿಸಿದ್ದಾರೆ.

Trending News